Published
5 months agoon
By
Vanitha Jainಬೆಂಗಳೂರು, ಡಿಸೆಂಬರ್ 9, (ಯು.ಎನ್.ಐ): ಶಾಲೆ ಮುಚ್ಚುವ ಯಾವ ನಿರ್ಧಾರವನ್ನೂ ಸರ್ಕಾರ ಮಾಡುವುದಿಲ್ಲ. ಪಿಯುಸಿ ಪರೀಕ್ಷೆ ಕೂಡ ಎಂದಿನಂತೆ ನಡೆಯಲಿದೆ. ಮಕ್ಕಳು, ಪೋಷಕರು ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ವಿಧಾನ ಸೌಧದಲ್ಲಿ ಮಾತನಾಡಿದ ಅವರು, ಎರಡು ದಿನಗಳಿಂದ ರಾಜ್ಯದಲ್ಲಿ ಕೋರೋನಾ ಸೋಂಕಿತರ ಸಂಖ್ಯೆ ಇಳಿಮುಖ ಆಗಿದೆ. 1ರಿಂದ 12ನೇ ತರಗತಿ ವರೆಗಿನ ಮಕ್ಕಳಿಗೆ ಕೊರೋನಾ ಕಾಣಿಸಿಕೊಂಡಿಲ್ಲ ಈಗಾಗಲೇ ಡಾ. ಸುದರ್ಶನ್ ನೇತೃತ್ವದ ಸಮಿತಿಯು ಪರಿಶೀಲನೆ ನಡೆಸಿದ್ದು, ಶಾಲೆ ಮುಚ್ಚುವ ಯಾವ ಪರಿಸ್ಥಿತಿ ಕೂಡ ಇಲ್ಲ. ಆದರೆ ಹಾಸ್ಟೆಲ್ ಹಾಗೂ ವಸತಿ ಶಾಲೆಗಳ ಕಡೆಗೆ ಗಮನ ನೀಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಹೀಗಾಗಿ ತಕ್ಷಣ ಸರ್ಕಾರ ಜಂಟಿ ಸಮಿತಿ ರಚಿಸಿ ಎಸ್.ಓ.ಪಿ. ಅಡಿ ಕಠಿಣ ಕ್ರಮ ಜಾರಿ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ವಸತಿ ಶಾಲೆಯಲ್ಲಿ ಮಕ್ಕಳನ್ನೂ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಪೋಷಕರು ಕಡ್ಡಾಯವಾಗಿ ಎರಡನೇ ಲಸಿಕೆ ಹಾಕಿಕೊಳ್ಳಲು ಮನವಿ ಮಾಡಲಾಗಿದೆ. ಇದು ಜನರ ಪರವಾಗಿ ಸರ್ಕಾರದ ಕಳಕಳಿ ಕೂಡ. ಆದರೆ ಇದನ್ನು ಕಾನೂನು ಮಾಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಕೂಡ ಲಸಿಕೆ ಕಡ್ಡಾಯಗೊಳಿಸಲು ಕಾನೂನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ಜಾಗೃತಿಮೂಡಿಸುವುದು ನಮ್ಮ ಕೆಲಸ ಎಂದರು.
ರಾಜ್ಯದಲ್ಲಿ 191 ಹೊಸ ಕೋವಿಡ್ ಪ್ರಕರಣಗಳು ಪತ್ತೆ
ರಾಜ್ಯದಲ್ಲಿ 104 ಹೊಸ ಕೋವಿಡ್ ಪ್ರಕರಣಗಳು ಪತ್ತೆ: ಸಚಿವ ಕೆ. ಸುಧಾಕರ್
ಕೋವಿಡ್ ಹೆಚ್ಚಳ ಭೀತಿ: ಮಾಸ್ಕ್ ಕಡ್ಡಾಯಗೊಳಿಸಿದ ಕೇರಳ ಸರ್ಕಾರ
ಕೊರೋನಾ ವಿರುದ್ಧ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ: ಮೋದಿ
ಕೋವಿಡ್ -19 ಪ್ರಕರಣಗಳು ಹೆಚ್ಚಳ: ಕಳೆದ 24 ಗಂಟೆಗಳಲ್ಲಿ 30 ಸಾವುಗಳು
ಕೋವಿಡ್ ಹೆಚ್ಚಳ: ದೆಹಲಿ ಸರ್ಕಾರ ಹೊರಡಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಏನು?