Connect with us


      




ಕರ್ನಾಟಕ

4ನೇ ಅಲೆಯ ಭೀತಿ: ಸಿಎಂ ನೇತೃತ್ವದಲ್ಲಿ ಕೋವಿಡ್ ಸಭೆ

Iranna Anchatageri

Published

on

ಬೆಂಗಳೂರು: ಏಪ್ರಿಲ್ 25 (ಯು.ಎನ್.ಐ.) ರಾಜ್ಯದಲ್ಲಿ ಕೋವಿಡ್ ನಾಲ್ಕನೇ ಅಲೆ ಬರುವ ಸಾಧ್ಯತೆ ಹಾಗೂ ಪ್ರಧಾನಿ ಮೋದಿ ಕೋವಿಡ್ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೊರೊನಾ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಸಚಿವರು, ತಜ್ಞರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಿಎಂ ಕೋವಿಡ್ ಸಭೆ ಬಳಿಕ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಕೆ ಸುಧಾಕರ್, ಸಿಎಂ ಅಧ್ಯಕ್ಷತೆಯಲ್ಲಿ ಕೋವಿಡ್ ನಾಲ್ಕನೇ ಅಲೆ ಬರಬಹುದೆಂಬ ಸಾಧ್ಯತೆ ಹಿನ್ನೆಲೆಯನ್ನು ಸಭೆ ನಡೆಸಿದೆವು. ಪ್ರಮುಖವಾಗಿ ಕೆಲವು ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಕಡ್ಡಾಯ ಮಾಸ್ಕ್ ಗೆ ನಿರ್ಧಾರ ಮಾಡಲಾಗಿದೆ. ಕಡ್ಡಾಯ ಮಾಸ್ಕ್ ಧರಿಸಲು ಮಾರ್ಗಸೂಚಿ ಹೊರಡಿಸುತ್ತೇವೆ. ಶೇಕಡ 1.9ರಷ್ಟು ಪಾಸಿಟಿವಿಟಿ‌ ದರ ಬೆಂಗಳೂರಿನಲ್ಲಿ ದಾಖಲಾಗಿದೆ. ಬಿಬಿಎಂಪಿಗೆ ನಿಗಾ ಇಡಲು ಸೂಚನೆ ನೀಡಲಾಗಿದೆ ಎಂದರು. ಸಾಮಾಜಿಕ ಅಂತರ ಕಾಪಾಡುವುದು, ನಾಲ್ಕನೇ ಅಲೆವರೆಗೆ ಕಾಯದೇ ಲಸಿಕೆ, ಬೂಸ್ಟರ್ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಸಚಿವರು ಜನತೆಗೆ ಮನವಿ ಮಾಡಿದರು.

ದಕ್ಷಿಣ ಕೊರಿಯಾ, ಥೈಲ್ಯಾಂಡ್, ಜಪಾನ್ ಗಳಿಂದ ಬೆಂಗಳೂರಿಗೆ ಬರೋರ ಮೇಲೆ ಏರ್ಪೋರ್ಟ್ ಗಳಲ್ಲಿ ನಿಗಾ ಇಡಲು ಆದೇಶಿಸಲಾಗಿದೆ. ಒಮೈಕ್ರಾನ್ ನ ತಳಿಯೇ ಆದ್ರೆ ರೋಗ ಲಕ್ಷಣಗಳು ಸೇಮ್ ಇರುತ್ತವೆ. ಲ್ಯಾಬ್ ನವ್ರು ವರದಿ ಕೊಡೋವರೆಗೂ ರಾಜ್ಯದಲ್ಲಿ ಯಾವ ತಳಿ ಇದೆ ಅಂತ ಹೇಳೋದಿಕ್ಕೆ ಆಗಲ್ಲ. ಲ್ಯಾಬ್ ನವ್ರು ಜಿನೋಮಿಕ್ ಸೀಕ್ವೆನ್ಸ್ ವರದಿ ಪಡೆದಿದ್ದಾರೆ. ವರದಿ ಬರಲಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

ಎಲ್ಲ ಪಕ್ಷಗಳೂ ಸಭೆ, ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ದೆಹಲಿ, ಮಹಾರಾಷ್ಟ್ರ, ಕೇರಳ, ತಮಿಳುನಾಡುಗಳ ವಿಚಾರದ ಬಗ್ಗೆ ಏಪ್ರಿಲ್ 27 ರ ಬಳಿಕ‌ ಅಂದರೆ
ಪ್ರಧಾನಿ ಸಭೆ ನಂತರ ಮತ್ತೊಮ್ಮೆ ಚರ್ಚೆಗೆ ಸೇರುತ್ತೇವೆ. ಪ್ರಧಾನಿಯವ್ರು ನೀಡುವ ನಿರ್ದೇಶನಗಳನ್ನು ನೋಡಿಕೊಂಡು ಮುಂದುವರೆಯುತ್ತೇವೆ. ಈ ರಾಜ್ಯಗಳಿಂದ ಬರೋರ ಮೇಲೆ ಯಾವ ರೀತಿ‌‌ ನಿಗಾ ಇಡಬೇಕೆಂದು ಆ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸುಧಾಕರ್ ಹೇಳಿದರು.

Share