Connect with us


      
ಕರ್ನಾಟಕ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 7 ಪ್ರಯಾಣಿಕರಿಗೆ ಕೋವಿಡ್

Iranna Anchatageri

Published

on

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 7 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಕಳೆದ 24 ಗಂಟೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ 21,071 ಸೇರಿ ರಾಜ್ಯದಲ್ಲಿ 34,047 ಪ್ರಕರಣ ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 32,20,087ಕ್ಕೆ ಏರಿಕೆಯಾದಂತಾಗಿದೆ.

ಈ ಮಧ್ಯೆ, 16-01-2022ರ ರಾತ್ರಿ ಹಾಗೂ 17-01-2022ರ ಬೆಳಗಿನ ಜಾವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 7 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಯುನೈಟೆಡ್ ಕಿಂಗ್ ಡಮ್ ಮೂಲದ 4, ಸ್ವೀಡನ್ ಮೂಲದ 1, ಯುಎಸ್ ಮೂಲದ 2 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿರೋದು ಕೊರೊನಾ ಅಬ್ಬರದ ಮತ್ತಷ್ಟು ದುಗುಡ ಹೆಚ್ಚಿಸಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 13 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 38,431ಕ್ಕೆ ಏರಿಕೆಯಾಗಿದೆ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ಬೆಂಗಳೂರಿನಲ್ಲಿ 21,071 ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 14,16,807ಕ್ಕೆ ಏರಿಕೆಯಾಗಿದೆ. ಇನ್ನು ಕೊರೊನಾಗೆ ರಾಜಧಾನಿಯಲ್ಲಿ ಐದು ಮಂದಿ ಬಲಿಯಾಗಿದ್ದಾರೆ.

Share