Connect with us


      




ಆರೋಗ್ಯ

ಕೋವಿಡ್ ಮಾರ್ಗಸೂಚಿ ಬಿಡುಗಡೆ

Published

on

ಬೆಂಗಳೂರು : ಜನವರಿ 05,(ಯು.ಎನ್.ಐ.)  ಕೊವಿಡ್ ಮೂರನೆ ಅಲೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ   ಸಚಿವರು  ತಜ್ಞರ ತಂಡ ಮತ್ತು ಉನ್ನತ್ತ  ಮಟ್ಟದ ಅಧಿಕಾರಿಗಳು ಚರ್ಚೆ ನಡೆಸಿ ಕೊವಿಡ್ ನಿಯಮಗಳನ್ನ ಸಿದ್ದ ಪಡಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ನಡೆದ ಚರ್ಚೆಯ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ  ಸಚಿವ ಆರ್ ಅಶೋಕ್  ಕೊವಿಡ್ ಮಾರ್ಗ ಸೂಚಿಗಳನ್ನ ಬಿಡುಗಡೆಗೊಳಿಸಿ  ಬೆಂಗಳೂರಿನಲ್ಲಿ 10 ಮತ್ತು 12 ನೇ ತರಗತಿಗಳನ್ನ ಹೊರತು ಪಡಿಸಿ ಉಳಿದ ಎಲ್ಲ  ತರಗತಿಗಳನ್ನ ಭೌತಿಕವಾಗಿ ನಿಲ್ಲಿಸಲು  ತೀರ್ಮಾನಿಸಲಾಗಿದೆ ಮತ್ತು ಆನ್ ಲೈನ್ ತರಗತಿಗಳಿಗೆ ನಡೆಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಮುಂದಿನ 2 ವಾರಗಳು  6ನೇ ತಾರೀಕಿನಿಂದ ಶುಕ್ರವಾರ  ರಾತ್ರಿ 10 ರಿಂದ ಸೋಮವಾರ ಬೆಳಗ್ಗೆ 05 ರ ವರೆಗೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಆಹಾರ ವಸ್ತು , ಹಾಲು, ತರಕಾರಿ, ಅಗತ್ಯ ವಸ್ತುಗಳು  ಮತ್ತು ಹೋಟೆಲ್ ನಲ್ಲಿ ಪಾರ್ಸೆಲ್ ಗೆ  ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಸರ್ಕಾರಿ ಕಛೇರಿ ಮತ್ತು ಇತರ ಕಚೇರಿಗಳಲ್ಲಿ ಭಾರತ ಸರ್ಕಾರದ ಅನುಸೂಚಿಯಂತೆ ನಡೆದುಕೊಳ್ಳಲು ತೀರ್ಮಾನಿಸಲಾಗಿದೆ.

ಚಿತ್ರ ಮಂದಿರ, ಮಾಲ್ , ಬಾರ್ , ಪಬ್ ಗಳಲ್ಲಿ ಶೇಖಡ 50 ಸಾಮರ್ಥ್ ದಲ್ಲಿ ಅನುಮತಿ ನೀಡಲಾಗಿದೆ, ಈ ಸ್ಥಳಗಳಿಗೆ ಭೇಟಿ ನೀಡುವವರು ಎರಡು  ಡೋಸ್ ಕಡ್ಡಾಯವಾಗಿ ಹಾಕಿಸಿಕೊಂಡಿರಬೇಕು.

ಮದುವೆ ಒಳಾಂಗಣ  100 ಹೊರಾಂಗಣ 200 ಜನಕ್ಕೆ ಮಾತ್ರ ಅನುಮತಿ ಇದಕ್ಕೂ ಎರಡು ಡೋಸ್ ಲಸಿಕೆ ಕಡ್ಡಾಯ.

ಹೊರ ರಾಜ್ಯ ಮಹರಾಷ್ರ್ಟ  ಗೋವಾ ಮತ್ತು ಕೇರಳದಿಂದ ಬರುವ ಪ್ರವಾಸಿಗರು ನೆಗೆಟೀವ್ ರಿಪೋರ್ಟ್  ಕಡ್ಡಾಯ.

ವಿದೇಶಿ ಪ್ರಯಾಣಿಕರಿಗೆ ಆರ್ ಟಿಪಿಸಿಆರ್ ಕಡ್ಡಾಯ ಎಂದು ಸಚಿವರು ತಿಳಿಸಿದ್ದಾರೆ.

ಆರೋಗ್ಯ

ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೨ ಲಕ್ಷ ೫೮ ಸಾವಿರ ಕೋವಿಡ್ ಪ್ರಕರಣ

Published

on

By

ನವದೆಹಲಿ,ಜ ೧೭(ಯು ಎನ್ ಐ)ದೇಶದಲ್ಲಿ ಈವರೆಗೆ ೮ ಸಾವಿರದ ೨೦೯ ಕೋವಿಡ್-೧೯ ರೂಪಾಂತರಿ ಒಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ ಶೇಕಡ ೬ರಷ್ಟು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಒಟ್ಟು ಸೋಂಕಿತರ ಪೈಕಿ ೩ ಸಾವಿರದ ೧೦೯ ಮಂದಿ ಈಗಾಗಲೇ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಗರಿಷ್ಠ ಒಂದು ಸಾವಿರದ ೭೩೮ ಪ್ರಕರಣಗಳು, ಪಶ್ಚಿಮಬಂಗಾಳದಲ್ಲಿ ಒಂದು ಸಾವಿರದ ೬೭೨, ರಾಜಸ್ತಾನದಲ್ಲಿ ಒಂದು ಸಾವಿರದ ೨೭೬ ಪ್ರಕರಣಗಳು ವರದಿಯಾಗಿವೆ. ದೇಶದ ೨೯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
ದೇಶದಲ್ಲಿ ನಡೆಸಲಾಗುತ್ತಿರುವ ಕೋವಿಡ್ ಲಸಿಕೆ ಅಭಿಯಾನದಲ್ಲಿ ಇದುವರೆಗೆ ಸುಮಾರು ೧೫೭ ಕೋಟಿ ೨೦ ಲಕ್ಷ ಲಸಿಕೆ ಡೋಸ್‌ಗಳನ್ನು ವಿತರಿಸಲಾಗಿದೆ. ಕಳೆದ ೨೪ ಗಂಟೆಗಳಲ್ಲಿ ೩೯ ಲಕ್ಷ ೪೬ ಸಾವಿರ ಡೋಸ್ ಲಸಿಕೆಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಕಳೆದ ೨೪ ಗಂಟೆಗಳಲ್ಲಿ ಒಂದು ಲಕ್ಷ ೫೧ ಸಾವಿರ ಕೋವಿಡ್ ಸೋಂಕಿತರು ಚೇತರಿಸಿಕೊಂಡಿದ್ದು, ರಾಷ್ಟ್ರೀಯ ಚೇತರಿಕೆ ದರ ಶೇಕಡ ೯೪.೨೭ರಷ್ಟಿದೆ. ಈವರೆಗೆ ೩ ಕೋಟಿ ೫೨ ಲಕ್ಷಕ್ಕೂ ಹೆಚ್ಚು ಸೋಂಕಿತರು ದೇಶದಲ್ಲಿ ಚೇತರಿಸಿಕೊಂಡಿದ್ದಾರೆ.
ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೨ ಲಕ್ಷ ೫೮ ಸಾವಿರ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಸುಮಾರು ೧೬ ಲಕ್ಷ ೫೬ ಸಾವಿರ ಸಕ್ರಿಯ ಸೋಂಕು ಪ್ರಕರಣಗಳಿವೆ. ಈವರೆಗೆ ದೇಶದಲ್ಲಿ ೭೦ ಕೋಟಿ ೩೭ ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.

Continue Reading

ಆರೋಗ್ಯ

ಏಮ್ಸ್‌ನಲ್ಲಿ 250 ವೈದ್ಯರು, ಸಿಬ್ಬಂದಿಗೆ ಕೊರೊನಾ … OPD ಸೇವೆ ಸ್ಥಗಿತ

Published

on

By

ಭುವನೇಶ್ವರ, ಜ 17(ಯುಎನ್‌ ಐ) ಒಡಿಶಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನಲ್ಲಿ ಸುಮಾರು 250 ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ.
ಇದರಿಂದಾಗಿ ಹೊರ ರೋಗಿಗಳ ಚಿಕಿತ್ಸಾ ವಿಭಾಗ (ಒಪಿಡಿ) ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಪ್ರೊಫೆಸರ್ ಸಚ್ಚಿದಾನಂದ ಮೊಹಾಂತಿ ಹೇಳಿದ್ದಾರೆ. ತುರ್ತು ಪ್ರಕರಣಗಳಿಗೆ ಒಳರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ. ಕೋವಿಡ್ ಸೋಂಕಿನಿಂದ ಆಸ್ಪತ್ರೆಯನ್ನು ಸುಗಮವಾಗಿ ನಡೆಸಲು ಒಪಿಡಿ ಸೇವೆಗಳನ್ನು ಸ್ಥಗಿತಗೊಳಿಸಬೇಕಾಯಿತು ಎಂದು ಅವರು ಹೇಳಿದ್ದಾರೆ. ಭುವನೇಶ್ವರ್ ಏಮ್ಸ್‌ನಲ್ಲಿ ಸ್ವಾಸ್ಥ್ಯ ಆಪ್, ಟೆಲಿಮೆಡಿಸಿನ್ ವಾಟ್ಸಾಪ್ ಕರೆ ಸೇವೆಗಳು ಮೊದಲಿನಂತೆ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

Continue Reading

ಆರೋಗ್ಯ

ಮಹಿಳೆಯರಿಗೆ ಒಳ‌ಉಡುಪುಗಳ ಬಗ್ಗೆ ಇರಬೇಕಾದ ಎಚ್ಚರಿಕೆಗಳು : ಟಿಪ್ಸ್

Published

on

HEALTH TIPS FOR INNERS
ನಿಮಗಿಂತ ಚಿಕ್ಕ ಗಾತ್ರದ ಒಳ ಉಡುಪುಗಳನ್ನು ಖರೀದಿಸಬೇಡಿ

ಬೆಂಗಳೂರು : ಜನೆವರಿ 16 (ಯು.ಎನ್.ಐ.) ಒಳಉಡುಪುಗಳೆಂದರೆ ಕೇವಲ ಒಳಾಂಗಗಳನ್ನು ಮುಚ್ಚುವ ಬಟ್ಟೆಗಳಷ್ಟೇ ಅಲ್ಲ. ಅವು ಆರೋಗ್ಯದ ಒಳ ವಿಷಯಗಳೂ ಆಗಿವೆ. ಯಾವುದೋ ಒಂದು ಚಡ್ಡಿ, ಕಾಚಾ, ಬ್ರಾ ಖರೀದಿಸಿದರಾಯಿತು, ಹಾಕಿಕೊಂಡರಾಯಿತೆಂಬ ಭಾವನೆ ಬಿಟ್ಟುಬಿಡಿ. ಧರಿಸುವ ಬಟ್ಟೆಗಳಿಗೆಷ್ಟು ಪ್ರಾಮುಖ್ಯತೆ ಆಸಕ್ತಿ ವಹಿಸುತ್ತಿರೋ ಅದಕ್ಕಿಂತಲೂ ಹೆಚ್ಚಿನ ಕಾಳಜಿಯನ್ನು ಮಹಿಳೆಯರು ಒಳ ಉಡುಪನ್ನು ಖರೀದಿಸುವ ಮೊದಲು ತಿಳಿದಿರಲೇಬೇಕು. ಮಹಿಳೆಯರ ಕಾಳಜಿಗಾಗಿ ಯು.ಎನ್.ಐ. ಕನ್ನಡ ನೀಡುತ್ತಿದೆ ಒಳ‌ಉಡುಪುಗಳ ಟಿಪ್ಸ್.

ಒಳ ಉಡುಪುಗಳನ್ನು ಖರೀದಿಸುವುದು ಎಂದರೆ ಅವುಗಳ ಬಣ್ಣ ಮತ್ತು ಶೈಲಿಗೆ ಮಾತ್ರ ಗಮನ ಕೊಡುವುದು ಎಂದು ಭಾವಿಸುವುದು ಸಂಪೂರ್ಣವಾಗಿ ತಪ್ಪು. ಬಣ್ಣ ಶೈಲಿಗಿಂತ ಒಳಉಡುಪುಗಳನ್ನು ಖರೀದಿಸುವಾಗ ಇನ್ನೂ ಹೆಚ್ಚಿನದನ್ನು ಗಮನಿಸಬೇಕು. ವಿಶೇಷವಾಗಿ ಮಹಿಳೆಯರು ತಮ್ಮ ಒಳ ಉಡುಪುಗಳನ್ನು ಖರೀದಿಸುವ ಮೊದಲು ತಮ್ಮ ಯೋನಿಯ ಬಗ್ಗೆ ಚೆನ್ನಾಗಿ ಯೋಚಿಸಬೇಕು. ವಾಸ್ತವವಾಗಿ ಹೆಚ್ಚಿನ ಮಹಿಳೆಯರು ಎಲ್ಲಾ ಒಳ ಉಡುಪುಗಳನ್ನು ಖರೀದಿಸಬೇಕು, ಮಾದಕ ಮತ್ತು ನೋಟದಲ್ಲಿ ಆಕರ್ಷಕವಾಗಿದೆ ಎಂದು ಬರೀ ಆಯ್ಕೆ ಮಾಡುವುದು ಸರಿಯಲ್ಲ. ಅದರ ಬಣ್ಣ, ಕಟ್ ಮತ್ತು ಶೈಲಿಯನ್ನು ಪರಿಶೀಲಿಸುವುದರ ಜೊತೆಗೆ, ಅವು ಯೋನಿಗೆ ಉತ್ತಮವೇ ಅಥವಾ ಇಲ್ಲವೇ ಎಂಬುದನ್ನು ಸಹ ಪರಿಗಣಿಸಬೇಕು. ಹೆಲ್ತ್‌ಶಾಟ್ಸ್‌ನ ಸುದ್ದಿಯ ಪ್ರಕಾರ ಕೆಲವು ಒಳ ಉಡುಪುಗಳಿವೆ ಅದನ್ನು ದೀರ್ಘಕಾಲದವರೆಗೆ ಧರಿಸಿದರೆ, ಯೋನಿಯ ಸುತ್ತ ತುರಿಕೆ, ಸುಡುವಿಕೆ ಅಥವಾ ಯಾವುದೇ ಗಂಭೀರ ಕಾಯಿಲೆ ಉಂಟಾಗಬಹುದು. ಇವು ಯೀಸ್ಟ್ ಅಥವಾ ಯೋನಿ ಸೋಂಕನ್ನು ಸಹ ಉಂಟು ಮಾಡಬಹುದು.

ಸರಿಯಾದ ಒಳಉಡುಪುಗಳನ್ನು ಹೇಗೆ ಆರಿಸಬೇಕು? 

ಯೋನಿ ಸ್ನೇಹಿ ಒಳ ಉಡುಪು, ಆರಾಮದಾಯಕವಾದ ಒಳ ಉಡುಪುಗಳನ್ನು ನೀವು ಖರೀದಿಸಬೇಕು. ವಾಸ್ತವವಾಗಿ, ಪ್ರತಿ ಮಹಿಳೆಯ ದೇಹವು ವಿಭಿನ್ನವಾಗಿರುತ್ತದೆ. ಅದಕ್ಕಾಗಿಯೇ ದೇಹಕ್ಕೆ ತಕ್ಕಂತ ಉತ್ತಮವಾಗಿರುವ ಆರೋಗ್ಯಕಾರಿ ಒಳ‌ಉಡುಪನ್ನು ಖರೀದಿಸಬೇಕು. ಅದು ಬಿಕಿನಿ ಕಟ್ ಆಗಲೀ‌ ಏನೇ ಖರೀದಿಸಿದರೂ, ಅದು ನಿಮಗೆ ಆರಾಮದಾಯಕವಾಗಿದೆಯೇ ಎಂಬುದನ್ನುಬ ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ಒಳ ಉಡುಪುಗಳ ಗಾತ್ರವನ್ನು ಸಹ ನೆನಪಿನಲ್ಲಿಡಿ. ಸಣ್ಣ ಗಾತ್ರದ ಒಳ ಉಡುಪುಗಳು ಯೋನಿಯಲ್ಲಿ ಕಿರಿಕಿರಿ ಉಂಟುಮಾಡಬಹುದು. ಇದು ಸೋಂಕು ಮತ್ತು ದದ್ದುಗಳಿಗೂ ಕಾರಣವೂ ಆಗಬಹುದು.

ಲೇಸ್ ಇರುವ ಒಳ ಉಡುಪುಗಳಲ್ಲಿ ಮಹಿಳೆಯರು ಮಾದಕತೆಯನ್ನು ಅನುಭವಿಸುತ್ತಾರೆ. ಆದರೆ ಅವುಗಳನ್ನು ಸಾಂದರ್ಭಿಕವಾಗಿ ಧರಿಸಬಹುದೇ ಹೊರತು ನೀವು ಅವುಗಳನ್ನು ನಿಯಮಿತವಾಗಿ ಧರಿಸಿದರೆ, ಉಸಿರುಗಟ್ಟುವಿಕೆ ಮತ್ತು ತುರಿಕೆ ಅನುಭವಿಸಬಹುದು. ಇದರೊಂದಿಗೆ, ಚರ್ಮದ ಮೇಲೆ ಕೆಂಪು ಕಲೆಗಳು ಸಹ ಕಂಡುಬರುತ್ತವೆ.

ವಜಾಯಿನಾಕ್ಕೆ ಉತ್ತಮ ಒಳ ಉಡುಪು ಯಾವುದು?

ಶುದ್ಧ ಹತ್ತಿಯಿಂದ ಮಾಡಿದ ಒಳ ಉಡುಪು ಉತ್ತಮವಾಗಿದೆ. ಕೆಲವರು ನೈಲಾನ್, ಪಾಲಿಸ್ಟರ್ ಮತ್ತು ಸ್ಪ್ಯಾಂಡೆಕ್ಸ್‌ನಿಂದ ಮಾಡಿದ ಒಳ ಉಡುಪುಗಳನ್ನು ಧರಿಸುತ್ತಾರೆ. ಈ ಸಂಶ್ಲೇಷಿತ ಬಟ್ಟೆಗಳು ಶಾಖ ಮತ್ತು ತೇವಾಂಶವನ್ನು ಉತ್ಪಾದಿಸುತ್ತವೆ. ಆದರೆ ಹತ್ತಿಯಲ್ಲಿ ಅಂತಹ ಸಮಸ್ಯೆ ಇರುವುದಿಲ್ಲ. ಇದು ಹಾಯಾಗಿರುವುದಲ್ಲದೆ, ಯೋನಿಯನ್ನು ಸಹ ಆರೋಗ್ಯವಾಗಿರಿಸುತ್ತದೆ.

ನಿಮ್ಮ ವಜಾಯಿನಾಕ್ಕೆ ಯಾವುದು ಕೆಟ್ಟದು?

ಮೊದಲನೆಯದಾಗಿ, ನಿಮಗಿಂತ ಚಿಕ್ಕ ಗಾತ್ರದ ಒಳ ಉಡುಪುಗಳನ್ನು ಖರೀದಿಸಬೇಡಿ. ಇದು ದಿನವಿಡೀ ಉರಿ ಮತ್ತು ತುರಿಕೆ ಅನುಭವಕ್ಕೆ ಕಾರಣವಾಗುತ್ತದೆ. ಕೆಲವು ಸಂಶೋಧನೆಗಳು ಸರಿಯಾಗಿ ಹೊಂದಿಕೊಳ್ಳದ ಒಳ ಉಡುಪುಗಳು ಸಹ ಒಳ ಕೂದಲುಗಳ ಸೋಂಕಿಗೆ ಕಾರಣವಾಗಬಹುದು ಎಂದು ಸೂಚಿಸುತ್ತದೆ. ಹೀಗೆ ಧರಿಸುವುದರಿಂದ ಬೆವರುವಿಕೆಗೆ ಕಾರಣವಾಗುವ ಇಂತಹ ಒಳಉಡುಪುಗಳಿಂದ ದೂರವಿರಬೇಕು. ತೇವಾಂಶವು ಯೀಸ್ಟ್ ಮತ್ತು ಬ್ಯಾಕ್ಟೀರಿಯಾದ ಸೋಂಕಿಗೆ ಕಾರಣವಾಗಬಹುದು ಎಂದು ವ್ಯಾಯಾಮದ ನಂತರ ಅಥವಾ ಬೆವರುವಿಕೆಯ ನಂತರ ಯಾವಾಗಲೂ ನಿಮ್ಮ ಒಳ ಉಡುಪುಗಳನ್ನು ಬದಲಾಯಿಸಿ. ಇತರ ಪ್ರಭೇದಗಳಿಗಿಂತ ಕಡಿಮೆ ನೈರ್ಮಲ್ಯವನ್ನು ಹೊಂದಿರುವುದು ಇದಕ್ಕೆ ಕಾರಣ. ವಿಶಿಷ್ಟ ವಿನ್ಯಾಸದ ಕಾರಣ, ಕೆಲವು ಬ್ಯಾಕ್ಟೀರಿಯಾಗಳು ಬೇಗನೆ ಅಂಟಿಕೊಳ್ಳುತ್ತವೆ. ಹೀಗಾಗಿ‌ ಅವು ಆರೋಗ್ಯಕರವಲ್ಲ.

ಮೊದಲನೇಯದಾಗಿ ನಿಮ್ಮ ಒಳಾಂಗಕ್ಕಿಂತ ಚಿಕ್ಕ ಗಾತ್ರದ ಒಳ ಉಡುಪುಗಳನ್ನು ಖರೀದಿಸಲೇಬೇಡಿ. ಏಕೆಂದರೆ ಒಂದುವೇಳೆ ನೀವು ಕಂಫರ್ಟ್ ಅಲ್ಲದ ಚಿಕ್ಕ ಗಾತ್ರದ ಕಾಚಾವನ್ನೋ ಬ್ರಾಅನ್ನೋ ಹಾಕಿಕೊಂಡರೆ ಅದು ದಿನವಿಡೀ ಉರಿ ಮತ್ತು ತುರಿಕೆ ಅನುಭವಕ್ಕೆ ಕಾರಣವಾಗುತ್ತದೆ. ಸಂಶೋಧನೆಗಳು ಸರಿಯಾಗಿ ಹೊಂದಿಕೊಳ್ಳದ ಒಳ ಉಡುಪುಗಳು ಸಹ ಒಳ ಕೂದಲುಗಳಿಗೆ ಹಾನಿ ಸೋಂಕಿಗೆ ಕಾರಣವಾಗಬಹುದು ಎಂದಿವೆ.

ಎಲ್ಲಕ್ಕಿಂತ ಮೊದಲು ಯಾವುದೇ ಒಳ‌ಉಡಪಿದ್ದರೂ ಅದನ್ನು ಪ್ರತಿದಿನ ಬದಲಾಯಿಸಬೇಕು. ಸ್ವಚ್ಛವಾಗಿ ತೊಳೆದು ಅದರಲ್ಲಿಯೂ ಬಿಸಿನೀರಿನಲ್ಲಿ ತೊಳೆದರೂ ಇನ್ನೂ ಒಳ್ಳೆಯದು. ಬಿಸಿಲಿನಲ್ಲಿ ಒಣಗಿಸಿ ಧರಿಸುವುದು ಉತ್ತಮ.

(ಈ ಲೇಖನದಲ್ಲಿ ನೀಡಲಾದ ಮಾಹಿತಿ ಮತ್ತು ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ)

Continue Reading
Advertisement
ದೇಶ7 mins ago

ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

ಖುಂಟಿ: ಜನೆವರಿ 17 (ಯು.ಎನ್.ಐ.) ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು...

ದೇಶ11 mins ago

ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಮೋದಿ ಸಂತಾಪ

ರಾಯಗಡ: ಜನೆವರಿ ೧೭ (ಯು.ಎನ್.ಐ.) ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ....

ಕರ್ನಾಟಕ21 mins ago

ಪಿಎಂಎಫ್ಎಂಇ ಯೋಜನೆಗೆ ಶೇ.15 ರಷ್ಟು ರಾಜ್ಯದಿಂದ ಹೆಚ್ಚುವರಿ ಸಹಾಯಧನ

ಬೆಂಗಳೂರು: ಜನೆವರಿ 17 (ಯು.ಎನ್.ಐ.)ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪಿಎಂಎಫ್ಎಂಇ ಯೋಜನೆಗೆ...

ಬೆಂಗಳೂರು38 mins ago

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಕೋವಿಡ್

ಬೆಂಗಳೂರು, ಜ ೧೭(ಯುಎನ್ ಐ) ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆಆರ್ ಟಿ...

ದೇಶ52 mins ago

ಉಪಯುಕ್ತ ಮಾಹಿತಿ ; 5 ಸಾವಿರ ಅಲ್ಲ, ಕೇವಲ ₹260 ರಲ್ಲಿ ಒಮೈಕ್ರಾನ್ ಪತ್ತೆ ಹಚ್ಚಿ!

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಪ್ರತಿ ದಿನ ಒಮೈಕ್ರಾನ್ ಸೋಂಕು ದೇಶದಲ್ಲಿ ವೇಗವಾಗಿ ಹರಡಲಾರಂಭಿಸಿದೆ. ಕೊರೊನಾ ರೂಪಾಂತರಗಳಿಗಿಂತ ಒಮೈಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ನೊಂದಿಗೆ...

ದೇಶ53 mins ago

ಐಐಟಿ ಬಾಂಬೆಯ ವಿದ್ಯಾರ್ಥಿ ಆತ್ಮಹತ್ಯೆ

ಮುಂಬೈ: ಜನೆವರಿ 17  (ಯು.ಎನ್.ಐ.) ಐಐಟಿ ಬಾಂಬೆಯ ವಿದ್ಯಾರ್ಥಿ ಸೋಮವಾರ ಮುಂಜಾನೆ ಇಲ್ಲಿನ ಪೊವೈ ಕ್ಯಾಂಪಸ್ ನಲ್ಲಿರುವ ತನ್ನ ಹಾಸ್ಟೆಲಿನ ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ...

ಕರ್ನಾಟಕ1 hour ago

ಕೋವಿಡ್‌ ಸೋಂಕು ಹೆಚ್ಚು; ಸಾವು ಕಡಿಮೆ:‌ ಸಚಿವ ಅಶೋಕ್

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚಾಗಿದೆ.  ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆ ಇದೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ತಿಳಿಸಿದರು....

ಆರೋಗ್ಯ2 hours ago

ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೨ ಲಕ್ಷ ೫೮ ಸಾವಿರ ಕೋವಿಡ್ ಪ್ರಕರಣ

ನವದೆಹಲಿ,ಜ ೧೭(ಯು ಎನ್ ಐ)ದೇಶದಲ್ಲಿ ಈವರೆಗೆ ೮ ಸಾವಿರದ ೨೦೯ ಕೋವಿಡ್-೧೯ ರೂಪಾಂತರಿ ಒಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ ಶೇಕಡ ೬ರಷ್ಟು ಪ್ರಕರಣಗಳು...

ಕರ್ನಾಟಕ2 hours ago

ಗಾಂಧಿ ಕುರಿತು ಸಂದೇಹ, ಪ್ರಶ್ನೆಗಳಿವೆಯೇ ?

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ಗಾಂಧಿ ವಿಚಾರ ವೇದಿಕೆಯು ಗಾಂಧೀಜಿ ಅವರ ಕುರಿತ ಎಲ್ಲ ಸಂದೇಹಗಳಿಗೆ ಉತ್ತರ ರೂಪಿಯಾದ ಪುಸ್ತಕವನ್ನು ಪ್ರಕಟಿಸಲು ಯೋಜಿಸಿದ್ದು, ಸಾರ್ವಜನಿಕರಿಂದ ಪ್ರಶ್ನೆಗಳನ್ನು ಆಹ್ವಾನಿಸಿದೆ....

ವಾಣಿಜ್ಯ2 hours ago

ವಿಶ್ವ ಆರ್ಥಿಕ ವೇದಿಕೆಯ ದಾವೂಸ್ ಸಭೆಯಲ್ಲಿಂದು ರಾತ್ರಿ ಪ್ರಧಾನಿ ಮೋದಿ ಭಾಷಣ

ನವದೆಹಲಿ, ಜ ೧೭(ಯುಎನ್ ಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾತ್ರಿ ೮.೩೦ಕ್ಕೆ ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಸಭೆಯಲ್ಲಿ ’ಜಗತ್ತಿನ ಸ್ಥಿತಿಗತಿ’ ಕುರಿತು ವಿಶೇಷ...

ಟ್ರೆಂಡಿಂಗ್

Share