Published
4 months agoon
ಧಾರವಾಡ: ಜನೆವರಿ 27 (ಯು.ಎನ್.ಐ.) ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಹಾವಳಿ ಹೆಚ್ಚಾಗತೊಡಗಿದೆ. ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆ ಜನೆವರಿ 26ರಂದು ಕೊಟ್ಟ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಅತ್ಯಧಿಕ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಬರೋಬ್ಬರಿ 1,523 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಆಕ್ಟಿವ್ ಕೇಸ್ ಗಳ ಸಂಖ್ಯೆ 5,718ಕ್ಕೆ ಏರಿಕೆಯಾಗಿದೆ.
ಇನ್ನೊಂದೆಡೆ ಧಾರವಾಡ ಜಿಲ್ಲೆಯಲ್ಲಿನ ಶಾಲೆಗಳಲ್ಲೂ ಕೋವಿಡ್ ದುಗುಡ ಹೆಚ್ಚಾಗುತ್ತಿದ್ದು, ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶಾಲೆಯಲ್ಲಿ 18 ವಿದ್ಯಾರ್ಥಿಗಳಿಗೆ ಕೋವಿಡ್ ಕಾಣಿಸಿಕೊಂಡಿದೆ. ಇಲ್ಲಿನ ನೆಹರು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜನೆವರಿ 24 ರಂದು ಇಬ್ಬರು ವಿದ್ಯಾರ್ಥಿಗಳಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿತು. ಬಳಿಕ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಿದಾಗ ಒಟ್ಟಾರೆ 18 ವಿದ್ಯಾರ್ಥಿಗಳಲ್ಲಿ ಕೋವಿಡ್ ಹರಡಿರುವುದು ಗ್ರಾಮದಲ್ಲಿ ಆತಂಕ ಹೆಚ್ಚಿಸಿದೆ.
18 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಬಾಕಿ ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆಯನ್ನು ಮಾಡಲಾಗಿದ್ದು, ಇಂದು ವರದಿ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತ ಕ್ರಮಕೈಗೊಂಡಿದ್ದು, ಹೆಬ್ಬಳ್ಳಿ ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದೆ. ಈ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಮಾಹಿತಿ ಕಳುಹಿಸಿರುವ ಪ್ರಾಂಶುಪಾಲರು, ಸರ್ಕಾರದ ನಿರ್ದೇಶನ ಮತ್ತು ತಹಸೀಲ್ದಾರರ ಮಾಹಿತಿ ಆದೇಶದಂತೆ ಇಂದು 27/01/2022 ರಿಂದ 02/02/2022 ವರೆಗೆ ಶಾಲೆಗೆ ರಜೆ ನೀಡಲಾಗಿದೆ. ಅಲ್ಲದೆ, ಭೌತಿಕ ಶಿಕ್ಷಣಕ್ಕೆ ರಜೆ ನೀಡಲಾಗಿದ್ದು, ಆನ್ ಲೈನ್ ಕ್ಲಾಸುಗಳಿಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಅಮೆರಿಕದಲ್ಲಿ 10 ಲಕ್ಷ ದಾಟಿದ ಕೊರೊನಾ ಸಾವಿನ ಸಂಖ್ಯೆ
ಕೋವಿಡ್ ಸಾವಿನ ಸಂಖ್ಯೆಯಲ್ಲಿ ಕೇಂದ್ರ ಸುಳ್ಳು ಹೇಳಿದೆ: ದಿನೇಶ್ ಗುಂಡೂರಾವ್
ಚೈನಾಕ್ಕೆ ಪ್ರಜೆಗಳ ನಿಯಂತ್ರಣ ನೀರು ಕುಡಿದಷ್ಟು ಸುಲಭ !
ದೆಹಲಿಯಲ್ಲಿ 1,367 ಹೊಸ ಕೋವಿಡ್ ಪ್ರಕರಣ ದಾಖಲು
ಬೀಜಿಂಗ್ ನಲ್ಲಿ ಲಾಕ್ ಡೌನ್ ಭೀತಿ; ಅಗತ್ಯವಸ್ತುಗಳ ಖರೀದಿಗೆ ಕ್ಯೂ ನಿಂತ ಜನ
ಚೀನಾಕ್ಕೆ ಅದರದ್ದೆ ಭಾಷೆಯಲ್ಲಿ ಭಾರತದ ಪ್ರತ್ಯುತ್ತರ!!