Published
6 months agoon
ಬೆಂಗಳೂರು, ಡಿ 8 (ಯುಎನ್ಐ) ಒಮೈಕ್ರಾನ್ ಹರಡುವ ಬಗ್ಗೆ ಎಚ್ಚರಗೊಂಡಿರುವ ರಾಜ್ಯ ಸರ್ಕಾರ ಲಸಿಕೆ ಡ್ರೈವ್ ಅನ್ನು ತೀವ್ರಗೊಳಿಸಲು ಮುಂದಾಗಿದೆ. ಈ ಕುರಿತು ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ರಾಜ್ಯದಲ್ಲಿ ಇವತ್ತು ವಿಶೇಷ ಲಸಿಕೆ ಅಭಿಯಾನವನ್ನು ಆಯೋಜನೆ ಮಾಡಲಾಗಿದೆ. ಇದಕ್ಕಾಗಿ 1200 ಕಡೆ ವ್ಯವಸ್ಥೆ ಮಾಡಲಾಗಿದೆ. ಈವರೆಗೆ 7 ಕೋಟಿ 80 ಲಕ್ಷ ಡೋಸ್ ರಾಜ್ಯದಲ್ಲಿ ನೀಡಲಾಗಿದೆ. ಶೇಕಡಾ 68 ರಷ್ಟು ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ.
ಡಾ.ಕೆ.ಸುಧಾಕರ್, ಆರೋಗ್ಯ ಸಚಿವ
ರಾಜ್ಯದ ಜನತೆ ಉತ್ಸಾಹದಿಂದಲೇ ಲಸಿಕೆ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ನಮ್ಮಲ್ಲಿ ಅಳವಡಿಸಿಕೊಂಡಿರುವ ಮಾದರಿಯನ್ನು ಎಲ್ಲಾ ರಾಜ್ಯಗಳು ಅಳವಡಿಸಿಕೊಳ್ಳಬೇಕು ಅಂತ ರಾಷ್ಟ್ರೀಯ ಕೋವಿಡ್ ಟಾಸ್ಕ್ ಫೋರ್ಸ್ ಕೂಡ ಇತರೆ ರಾಜ್ಯಗಳಿಗೆ ಸಲಹೆ ನೀಡಿದೆ ಅಂತಾ ತಿಳಿಸಿದರು.
ಇತಿಹಾಸದ ಸಾಂಕ್ರಾಮಿಕ ರೋಗ ನೋಡಿದ್ರೆ 2ನೇ ಅಲೆ ತೀವ್ರವಾಗಿ ಇರುತ್ತೆ. ಬಳಿಕ 3 ಮತ್ತು 4 ನೇ ಅಲೆ ತೀವ್ರತೆ ಕಡಿಮೆ ಇರುತ್ತೆ. ಹಾಗಾಂತ ಯಾರು ನಿರ್ಲಕ್ಷ್ಯವಹಿಸಬಾರದು. ಮಾಸ್ಕ್ ಹಾಕಬೇಕು, ಲಸಿಕೆ ಪಡೆದುಕೊಳ್ಳಬೇಕು. ಕೊರೊನಾದಿಂದ ದೇಶ ಮುಕ್ತವಾಗುವ ಕೊನೆ ದಿನಗಳು ಕಂಡುಬರುತ್ತಿವೆ. ಆದ್ರೆ ಹಾಗಂತ ಯಾರು ಉದಾಸೀನ ಮಾಡಬಾರದು. ಆದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮುಂದಿನ 3 ವರ್ಷಗಳಲ್ಲಿ ಕರ್ನಾಟಕಕ್ಕೆ ಏಮ್ಸ್
ಅಮೆರಿಕದಲ್ಲಿ 10 ಲಕ್ಷ ದಾಟಿದ ಕೊರೊನಾ ಸಾವಿನ ಸಂಖ್ಯೆ
ಕೋವಿಡ್ ಸಾವಿನ ಸಂಖ್ಯೆಯಲ್ಲಿ ಕೇಂದ್ರ ಸುಳ್ಳು ಹೇಳಿದೆ: ದಿನೇಶ್ ಗುಂಡೂರಾವ್
ಚೈನಾಕ್ಕೆ ಪ್ರಜೆಗಳ ನಿಯಂತ್ರಣ ನೀರು ಕುಡಿದಷ್ಟು ಸುಲಭ !
ದೆಹಲಿಯಲ್ಲಿ 1,367 ಹೊಸ ಕೋವಿಡ್ ಪ್ರಕರಣ ದಾಖಲು
ಬೀಜಿಂಗ್ ನಲ್ಲಿ ಲಾಕ್ ಡೌನ್ ಭೀತಿ; ಅಗತ್ಯವಸ್ತುಗಳ ಖರೀದಿಗೆ ಕ್ಯೂ ನಿಂತ ಜನ