Connect with us


      




ಕರ್ನಾಟಕ

10-12 ನೇ ತರಗತಿ ಹೊರತುಪಡಿಸಿ 1-9 ತರಗತಿ ಬಂದ್

Kumara Raitha

Published

on

ಬೆಂಗಳೂರು: ಜನೆವರಿ 05 (ಯು.ಎನ್.ಐ.)  10-12 ನೇ ತರಗತಿ ಹೊರತುಪಡಿಸಿ, 1-9 ಆಫ್ ಲೈನ್ ಕ್ಲಾಸ್ ಬಂದ್,  ನಾಳೆಯಿಂದಲೇ ಹೊಸ ಮಾರ್ಗಸೂಚಿ ಜಾರಿ ಮಾಡುವುದಾಗಿ ಸಚಿವ ಆರ್. ಅಶೋಕ್ ಹೇಳಿದರು.

ಮುಖ್ಯಮಂತ್ರಿ ನೇತೃತ್ವದಲ್ಲಿ ಮಂಗಳವಾರ ಸಂಜೆ ನಡೆದ ಸಭೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಮೆಡಿಕಲ್, ನರ್ಸಿಂಗ್ ಕಾಲೇಜು ಹೊರತುಪಡಿಸಿ, ಉಳಿದ ಎಲ್ಲಾ ಪದವಿ ಕಾಲೇಜು ತರಗತಿ ರದ್ದು.
ಎಸ್.ಎಸ್.ಎಲ್.ಸಿ. , ದ್ವಿತೀಯ ಪಿಯುಸಿ,  ಮೆಡಿಕಲ್, ಪ್ಯಾರಾ ಮೆಡಿಕಲ್, ನರ್ಸಿಂಗ್ ಕಾಲೇಜು ಮಾತ್ರ ತರಗತಿಗಳನ್ನು ನಡೆಸುತ್ತವೆ.  ಉಳಿದ ಕಾಲೇಜು ತರಗತಿಗಳನ್ನು ಆನ್ ಲೈನ್ ನಲ್ಲಿ ನಡೆಸಲು ಅವಕಾಶ ನೀಡಲಾಗಿದೆ. ಎಂದರು.

ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ  ಎರಡು ಡೋಸ್ ಲಸಿಕೆ ಆಗಿರಬೇಕು. ನೆಗೆಟಿವ್ ರಿಪೋರ್ಟ್ ಇರಬೇಕು ಎಂದ ಅವರು ಎರಡು ವಾರ ನೈಟ್ ಕರ್ಫ್ಯೂ ಮುಂದುವರಿಕೆಯಾಗುತ್ತದೆ ಎಂದು ತಿಳಿಸಿದರು.

ಕೋವಿಡ್ -19  ಐದು ಒಟ್ಟು ಹೆಚ್ಚಾಗಿದೆ ಅಂತ ವರದಿ ಬಂದಿದೆ. ಇಂದು 3,140 ಕೇಸ್ ಆಗಿದೆ. ಒಮೈಕ್ರಾನ್ 147 ಕೇಸ್ ಆಗಿದೆ. ಕಳೆದ ಎರಡು ದಿನದಲ್ಲಿ ಡಬಲ್ ಆಗ್ತಿದೆ. 90ರಷ್ಟು ಮೆಟ್ರೋ ಸಿಟಿಯಲ್ಲೇ ಕೇಸ್ ಆಗ್ತಿದೆ. ಆದ್ದರಿಂದ ಬೆಂಗಳೂರಿಗೆ ಒಂದು ರೂಲ್ಸ್ ತರಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

ಯುಎಸ್ ನಲ್ಲೂ ಕೂಡ ಐದು ಕೋಟಿ ಆಕ್ಟೀವ್ ಕೇಸ್ ಇದೆ. ಇವುಗಳನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು  ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ವಿಕೆಂಡ್ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.
ಸರ್ಕಾರಿ ಕಚೇರಿಗಳಿಗೆ ಕೇಂದ್ರದ ಮಾರ್ಗಸೂಚಿ ಅನ್ವಯವಾಗುತ್ತದೆ. ಮಾಲ್, ಸಿನಿಮಾ, ಪಬ್, ಬಾರ್, ಜಿಮ್ ಗಳಲ್ಲಿ ಅವುಗಳ ಸಾಮರ್ಥ್ಯದ 50% ಮಾತ್ರ ಪ್ರವೇಶಾವಕಾಶ. ದೇವಸ್ಥಾನ, ಮಸೀದಿ, ಮಂದಿರಕ್ಕೆ ಕೇವಲ 50 ಜನರಿಗೆ ಮಾತ್ರ ಅವಕಾಶ ಇರುತ್ತದೆ. ಅಲ್ಲಿಗೆ ಭೇಟಿ ನೀಡುವವರಿಗೆ 2ಡೋಸ್ ಕಡ್ಡಾಯ. ಮದುವೆ ಹೊರಾಂಗಣವಾದರೆ 200 ಒಳಾಂಗಣದಲ್ಲಿ 100ಮಂದಿಗೆ ಮಾತ್ರ ಅವಕಾಶ ಎಂದರು. ಕರ್ನಾಟಕದಲ್ಲಿಯೂ  3% ಕೇಸ್ ದಾಖಲಾಗಿದೆ. 20-50 ವರ್ಷದವರಿಗೆ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದರು

ಮೆಟ್ರೋ ರೈಲಿನಲ್ಲಿ ಸಂಚಾರ ಸಾಮರ್ಥ್ಯದ ಬಗ್ಗೆ ಮಾತನಾಡಲಾಗಿದೆ. ಆಸನಗಳಲ್ಲಿ ಮಾತ್ರ ಕುಳಿತು ಪಯಣಿಸಲು ಅವಕಾಶ ನೀಡಲಾಗಿದೆ.ಕೇಂದ್ರ ಸರ್ಕಾರದ ತಜ್ಞರ ಸಮಿತಿ ವರದಿ ನೀಡಿದ ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್, ನಾವು ಯಾರ ಮೇಲೆಯೂ ವೈಯಕ್ತಿಕ ಕ್ರಮ ಜರುಗಿಸುವುದಿಲ್ಲ. ಯಾವುದೇ ರ್ಯಾಲಿ, ಪ್ರತಿಭಟನೆ, ಜಾತ್ರೆ, ಎಲ್ಲದಕ್ಕೂ ಬ್ರೇಕ್. ಮೊನ್ನೆ ಬನ್ನೇರುಘಟ್ಟದಲ್ಲಿ ಹತ್ತು ಸಾವಿರ ಬಂದಿದ್ರು. ಎಲ್ಲ ಪಕ್ಷದವರಿಗೂ ನಿಯಮ ಕಡ್ಡಾಯ ಎಂದು ಹೇಳೀದರು.

ಸಭೆಯಲ್ಲಿ ಸುಧಾಕರ್, ಅಶ್ವಥ್ ನಾರಾಯಣ್, ತಜ್ಞರ ತಂಡ, ಅಧಿಕಾರಿಗಳು ಭಾಗಿಯಾಗಿದ್ದರು.

Share