Published
6 months agoon
ಅಬುಧಾಬಿ, ನ 10 (ಯುಎನ್ಐ) ಟಿ-20 ವಿಶ್ವಕಪ್ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇವತ್ತು ಅಬುಧಾಬಿಯಲ್ಲಿರುವ ಶೇಕ್ ಝೈದ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಮಧ್ಯೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ.
ಇಂಗ್ಲೆಂಡ್ ಸೋಲಿಸಲು ತಾವು ಸಂಪೂರ್ಣ ಸಿದ್ಧರಾಗಿದ್ದೇವೆ ಅಂತಾ ನ್ಯೂಜಿಲೆಂಡ್ ತಂಡದ ಪ್ರೈಮ್ ಫಾಸ್ಟ್ ಬೌಲರ್ ಟ್ರೆಂಟ್ ಬೋಲ್ಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಗೆಲುವಿಗಾಗಿ ಯಾವ ರೀತಿ ರಣನೀತಿ ಹೆಣದಿದ್ದೇವೆ ಅನ್ನೋದರ ಬಗ್ಗೆ ಪಂದ್ಯ ಆರಂಭಕ್ಕೂ ಮುನ್ನ ಟ್ರೆಂಟ್ ಬೋಲ್ಟ್ ಸುದ್ದಿಗಾರರೊಂದಿಗೆ ಮಾತನಾಡಿದರು.
“ಇಂಗ್ಲೆಂಡ್ ಟೀಮ್ ಸಮತೋಲಿತ ತಂಡವಾಗಿದೆ. ಟಿ-20 ವಿಶ್ವಕಪ್ ಸೇರಿದಂತೆ ಅನೇಕ ಪಂದ್ಯಗಳಲ್ಲಿ ಅತ್ಯುತ್ತಮವಾಗಿ ಆಡುತ್ತಿದೆ. ಬಿಳಿ ಬಣ್ಣದ ಬೌಲ್ ನಲ್ಲಿ ಇಂಗ್ಲೆಂಡಿಗರು ಬಹಳ ಇಂಪ್ರೂವ್ ಆಗಿದ್ದು, ಅವರ ವಿರುದ್ಧ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ” ಅಂತಾ ತಿಳಿಸಿದರು.
ಟ್ರೆಂಟ್ ಬೋಲ್ಟ್, ನ್ಯೂಜಿಲೆಂಡ್ ವೇಗಿ
ನ್ಯೂಜಿಲೆಂಡ್ ತಂಡದ ಆಟಗಾರ ಲಾಕಿ ಫರ್ಗುಸನ್ ಟಿ-20 ವಿಶ್ವಕಪ್ ನಿಂದ ಹೊರಬಿದ್ದಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಬೋಲ್ಟ್, “ಇದು ಅತ್ಯಂತ ನೋವಿನ ಸಂಗತಿ. ಆದರೆ, ಅವರ ಸ್ಥಾನವನ್ನು ಆ್ಯಡಂ ಮಿಲ್ನೆ ತುಂಬಿದ್ದು, ತಂಡಕ್ಕಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ” ಅಂತಾ ತಿಳಿಸಿದರು.
ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಇಂಗ್ಲೆಂಡ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಟೀಮ್ ಗಳನ್ನು ಸೋಲಿಸಿ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತನ್ನ ಸ್ಥಾನ ಖಚಿತಪಡಿಸಿಕೊಂಡಿದೆ. ಅಲ್ಲದೆ, ಈ ಮೊದಲು ಟಿ-20 ವಿಶ್ವಕಪ್ ಟೂರ್ನಿ ಗೆದ್ದ ಅನುಭವ ಕೂಡ ಇಂಗ್ಲೆಂಡ್ಗೆ ಇದೆ. ಸೂಪರ್ 12ರ ಹಂತದ 5 ಪಂದ್ಯಗಳಲ್ಲಿ ನಾಲ್ಕನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ. ಆದರೆ, ನ್ಯೂಜಿಲೆಂಡ್ ಈವರೆಗೆ ಯಾವುದೇ ಟಿ-20 ವಿಶ್ವಕಪ್ ಟೂರ್ನಿ ಗೆದ್ದಿಲ್ಲ. ಈವರೆಗೆ ಸೂಪರ್-12ರಲ್ಲಿ ತಾನು ಆಡಿರುವ 5 ಪಂದ್ಯಗಳಲ್ಲಿ 4 ಗೆದ್ದುಕೊಂಡಿದ್ದು, ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿದೆ.
ಇನ್ನೊಂದೆಡೆ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ಮಧ್ಯೆ 2ನೇ ಸೆಮಿಫೈನಲ್ ಪಂದ್ಯ ನಾಳೆ ನಡೆಯಲಿದೆ. ಇದಕ್ಕಾಗಿ ಎರಡೂ ಟೀಮ್ನ ಆಟಗಾರರು ಗೆಲುವಿಗಾಗಿ ಅಭ್ಯಾಸ ನಡೆಸುತ್ತಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಮಹತ್ವದ ಪಂದ್ಯ ನಡೆಯಲಿದೆ. ಸೆಮಿಫೈನಲ್-1 ಹಾಗೂ ಸೆಮಿಫೈನಲ್-2 ಪಂದ್ಯಗಳು ಸಂಜೆ 7;30ಕ್ಕೆ ಆರಂಭಗೊಳ್ಳಲಿದ್ದು, ಫೈನಲ್ನಲ್ಲಿ ಮುಖಾಮುಖಿಯಾಗುವ ತಂಡಗಳು ಯಾವುವು ಅನ್ನೋದು ಈ ಪಂದ್ಯಗಳಿಂದ ನಿರ್ಧಾರವಾಗಲಿದೆ.
ಥಾಮಸ್ ಕಪ್ ಗೆದ್ದ ಕನ್ನಡಿಗ ಲಕ್ಷ್ಯ ಸೇನ್ ಗೆ 5 ಲಕ್ಷ ರೂ. ಬಹುಮಾನ: ಸಿಎಂ ಬೊಮ್ಮಾಯಿ
ಮಿನಿ ಒಲಿಂಪಿಕ್ಸ್ ಗೆ ಅದ್ಧೂರಿ ಚಾಲನೆ
ಥಾಮಸ್ ಕಪ್ ಗೆಲುವು: ಬೆಂಗಳೂರಿಗ ಲಕ್ಷ್ಯ ಸೇನ್ಗೆ ರಾಜ್ಯ ಸರಕಾರದಿಂದ ಸನ್ಮಾನ
ಥಾಮಸ್ ಕಪ್ ಗೆದ್ದ ಭಾರತ: ಮುಖ್ಯಮಂತ್ರಿಗಳಿಂದ ಅಭಿನಂದನೆ
ಥಾಮಸ್ ಕಪ್ ಗೆದ್ದ ಭಾರತ: ಮೋದಿ ಅಭಿನಂದನೆ -1 ಕೋಟಿ ಬಹುಮಾನ!
ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ!