Published
6 months agoon
ಬೆಂಗಳೂರು, ನ 13 (ಯುಎನ್ಐ) ನ್ಯೂಜಿಲೆಂಡ್ ಆಡಿದ್ದೇ ಆಟ.. ಕೊಟ್ಟಿದ್ದೆ ಟಾರ್ಗೆಟ್.. ವಿಶ್ವ ಕ್ರಿಕೆಟ್ ನಲ್ಲಿ ಕೇನ್ ವಿಲಿಯಮ್ಸನ್ ಟೀಂ ಸದ್ಯ ಆರ್ಭಟಿಸುತ್ತಿದೆ. ಸಿಂಗಲ್ ಸ್ಟಾರ್ ಗಿರಿ ಬಗ್ಗೆ ತಲೆಕೆಡಿಸಿಕೊಳ್ಳಲ್ಲ.. ಪ್ಲ್ಯಾನ್ ನಂತೆ ಪ್ಲೇಯರ್ ಗಳ ಪರ್ಫಾರ್ಮೆನ್ಸ್.. ಗ್ರೌಂಡ್ ನಲ್ಲಿ ರಿಸಲ್ಟ್.. ಯಾರೂ ಊಹೆ ಮಾಡದ ರೀತಿಯಲ್ಲಿ ಎದುರಾಳಿ ತಂಡದ ವಿರುದ್ಧ ಯೋಜನೆ ರೂಪಿಸಿ ಸಕ್ಸಸ್ ಕಂಡಿರುವ ನ್ಯೂಜಿಲೆಂಡ್ ತಂಡದ ಆಟಗಾರರು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದ್ದಾರೆ.
ಪ್ರಸ್ತುತ ಟೆಸ್ಟ್ ಕ್ರಿಕೆಟ್ ಮತ್ತು ಒನ್ ಡೇಗಳಲ್ಲಿ ನ್ಯೂಜಿಲೆಂಡ್ ನಂಬರ್ ಒನ್ ತಂಡವಾಗಿ ಕ್ರಿಕೆಟ್ ರಂಗವನ್ನು ಆಳುತ್ತಿದೆ. ಈ ಮಧ್ಯೆ ಇಂಗ್ಲೆಂಡ್ ತಂಡವನ್ನು ಸೋಲಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಗೆ ಕಿವೀಸ್ ಲಗ್ಗೆ ಇಟ್ಟಿದೆ. ನವೆಂಬರ್ 14ರಂದು ಅಂದ್ರೆ ನಾಳೆ ಬಲಾಢ್ಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಆದರೆ, ಈ ಟೂರ್ನಿ ಗೆದ್ದುಕೊಂಡು ಎಲ್ಲಾ 3 ಸ್ವರೂಪಗಳ ಐಸಿಸಿ ರಾಂಕಿಂಗ್ ನಲ್ಲಿ ನಂಬರ್ ಒನ್ ಆಗುವ ವಿಶ್ವದ ಮೊದಲ ತಂಡ ನ್ಯೂಜಿಲೆಂಡ್ ಆಗಲು ಸಾಧ್ಯವೇ? ಈ ಕುರಿತು ಒಂದು ವಿಶ್ಲೇಷಣೆ
ನ್ಯೂಜಿಲೆಂಡ್ 3 ಸ್ವರೂಪಗಳಲ್ಲಿ ನಂ-1 ಆಗಲು ಏನು ಮಾಡಬೇಕು?
ವಿಶ್ವಕಪ್ನ ಫೈನಲ್ನಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾವನ್ನು ಸೋಲಿಸಿದ್ರೂ ಟಿ20ಗಳಲ್ಲಿ ವಿಶ್ವದ ನಂಬರ್ ಒನ್ ತಂಡ ಆಗಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ನವೆಂಬರ್ 17 ರಿಂದ ಟೀಂ ಇಂಡಿಯಾ ವಿರುದ್ಧದ ಸರಣಿಯನ್ನು ನ್ಯೂಜಿಲೆಂಡ್ ಎದುರು ನೋಡುತ್ತಿದೆ. ಈ ಟಿ-20 ಸರಣಿಯಲ್ಲಿ 3-0 ಅಂತರದಿಂದ ಕೇನ್ ವಿಲಿಯಮ್ಸನ್ ತಂಡ ಸೋಲಿಸಿದರೆ, ನ್ಯೂಜಿಲೆಂಡ್ 3 ಪ್ಲ್ಯಾಟ್ ಫಾರ್ಮ್ ಕ್ರಿಕೆಟ್ ನಲ್ಲಿ ವಿಶ್ವದ ನಂಬರ್ 1 ಟೀಮ್ ಆಗಿ ಮೆರೆಯಲಿದೆ. ಸದ್ಯ ಟಿ-20 ಕ್ರಿಕೆಟ್ನಲ್ಲಿ ವಿಲಿಯಮ್ಸನ್ ತಂಡ 4ನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿ ಕುಳಿತುಕೊಂಡಿದೆ.
ಇಂಗ್ಲೆಂಡ್ಗೆ ಮಣ್ಣುಮುಕ್ಕಿಸಿದ ಕೇನ್!
2019ರ ವಿಶ್ವಕಪ್ನ ಫೈನಲ್ನಲ್ಲಿ ಇಂಗ್ಲೆಂಡ್ ಕೈಯಲ್ಲಿ ಸೋತಿದ್ದ ಕಿವೀಸ್, ಇದಕ್ಕಾಗಿ ಈ ಬಾರಿ ತಕ್ಕ ಉತ್ತರ ಕೊಟ್ಟಿದೆ. ಇದೀಗ ಚುಟುಕು ಪಂದ್ಯಗಳ ವಿಶ್ವಕಪ್ನ ಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವುದರ ಮೇಲೆ ಕಿವೀಸ್ ಕಣ್ಣು ನೆಟ್ಟಿದೆ. ಇದರೊಂದಿಗೆ, ವಿಲಿಯಮ್ಸನ್ ತಂಡವು ಭಾರತವನ್ನು 3-0 ಅಂತರದಲ್ಲಿ ಸೋಲಿಸುವುದು ಮತ್ತು ಕ್ರಿಕೆಟ್ನ ಎಲ್ಲಾ 3 ಸ್ವರೂಪಗಳಲ್ಲಿ ನಂಬರ್ ಒನ್ ಆಗುವ ಮೂಲಕ ಇತಿಹಾಸ ಬರೆಯಬೇಕೆಂದು ಯೋಜನೆ ಹಾಕಿಕೊಂಡಿದೆ.
ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ತಾರಾ ಕೇನ್?
ನ್ಯೂಜಿಲೆಂಡ್ ಕೂಡ ಆಸ್ಟ್ರೇಲಿಯಾದ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. 2015ರ ಒನ್ ಡೇ (ODI) ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾದ ಕೈಯಲ್ಲಿ ನ್ಯೂಜಿಲೆಂಡ್ ಸೋಲು ಕಂಡಿತ್ತು. ಆದ್ರೆ, ಈ ಸೋಲನ್ನು ಕೇನ್ ವಿಲಿಯಮ್ಸನ್ ಆಟಗರಾರರು ಮರೆತಿಲ್ಲ. ನಾಳೆ ನಡೆಯಲಿರುವ ಟಿ-20 ವಿಶ್ವಕಪ್ ಫೈನಲ್ ನಲ್ಲಿ ಸೇಡು ತೀರಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಿದೆ. ಎರಡೂ ತಂಡಗಳು ಒಮ್ಮೆಯೂ ಟಿ20 ವಿಶ್ವಕಪ್ ಗೆದ್ದಿಲ್ಲ. ಟಿ20 ವಿಶ್ವಕಪ್ನ ಇತಿಹಾಸದಲ್ಲಿ ಉಭಯ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು.