Connect with us


      
ಕ್ರೀಡೆ

ind Vs Sa 2nd Test: ಟೀಂ ಇಂಡಿಯಾಗೆ ಬಿಗ್ ಶಾಕ್… ಎರಡನೇ ಟೆಸ್ಟ್‌ ನಿಂದ ಕೊಹ್ಲಿ ದೂರ

UNI Kannada

Published

on

ಜೋಹಾನ್ಸ್‌ ಬರ್ಗ್‌ , ಜ 3(ಯುಎನ್‌ ಐ)- ದಕ್ಷಿಣ ಆಫ್ರಿಕಾದ ಭದ್ರಕೋಟೆ ಸೆಂಚುರಿಯನ್ ನಲ್ಲಿ ಸಾಧಿಸಿದ ಜಯದ ವಿಶ್ವಾಸದೊಂದಿಗೆ ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾ ಸಜ್ಜಾಗಿದೆ. ಮೊದಲ ಟೆಸ್ಟ್‌ನಲ್ಲಿ ಸೀಮರ್‌ಗಳ ಬಲದಿಂದ ಐತಿಹಾಸಿಕ ಗೆಲುವು ಸಾಧಿಸಿರುವ ಭಾರತ ತಂಡ, ಅದೇ ವೇಗವನ್ನು ಮುಂದುವರಿಸುವ ನಿರೀಕ್ಷೆಯಲ್ಲಿದೆ. ಆದರೆ.. ನಾಯಕ ವಿರಾಟ್ ಕೊಹ್ಲಿ ಅನಿರೀಕ್ಷಿತವಾಗಿ ಪಂದ್ಯದಿಂದ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಉಪ ನಾಯಕ ಕೆಎಲ್ ರಾಹುಲ್ ಆಯ್ಕೆಯಾಗಿದ್ದಾರೆ. ಟಾಸ್ ಗೆದ್ದ ರಾಹುಲ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಕೊಹ್ಲಿ ಬದಲಿಗೆ ಹನುಮ ವಿಹಾರಿ ಅಂತಿಮ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Share