Connect with us


      
ಕ್ರೀಡೆ

ಬೆಂಗಳೂರಲ್ಲಿ ಕ್ರಿಕೆಟ್ ಪಂದ್ಯ: ಸಂಚಾರ ಬದಲಾವಣೆ

Iranna Anchatageri

Published

on

ಬೆಂಗಳೂರು: ಜೂನ್ 18 (ಯು.ಎನ್.ಐ.) ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಮಧ್ಯೆ ಐದನೇ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದೆ. ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣದ ಸುತ್ತ ಭಾರಿ ಟ್ರಾಫಿಕ್ ಉಂಟಾಗುವ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಕ್ರಿಕೆಟ್ ಪಂದ್ಯದ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ವಾಹನಗಳಲ್ಲಿ ಬರುವುದರಿಂದ ಕೆ ಎಸ್ ಸಿ ಎ ಸ್ಟೇಡಿಯಂ ಸುತ್ತಮುತ್ತಲಿನ ರಸ್ತೆಗಳ ಸುಗಮ ವಾಹನ ಸಂಚಾರ ದೃಷ್ಟಿಯಿಂದ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 12:30ರವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

 

Continue Reading
Click to comment

Leave a Reply

Your email address will not be published.

Share