Connect with us


      




ಕ್ರೀಡೆ

NZ vs BAN: ಡಬಲ್‌ ಸೆಂಚುರಿಯೊಂದಿಗೆ ಅಬ್ಬರಿಸಿದ ನ್ಯೂಜಿಲೆಂಡ್ ನಾಯಕ

UNI Kannada

Published

on

ಬಾರ್ಬಾಡಾಸ್‌, ಜ 10 (ಯುಎನ್‌ ಐ) – ಕಿಂಗ್‌ಸ್ಟನ್‌ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ದ್ವಿಶತಕದೊಂದಿಗೆ ಅಬ್ಬರಿಸಿದ್ದಾರೆ. ಟೆಸ್ಟ್‌ ಪಂದ್ಯಗಳಲ್ಲಿ ಇದು ಅವರ ಎರಡನೇ ದ್ವಿಶತಕವಾಗಿರುವುದು ವಿಶೇಷ. 373 ಎಸೆತಗಳನ್ನು ಎದುರಿಸಿದ ಲ್ಯಾಥಮ್ 34 ಬೌಂಡರಿ, 2 ಸಿಕ್ಸರ್ ನೆರವಿನಿಂದ 252 ರನ್ ಗಳಿಸಿದರು. ಇನ್ನೂ ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ಸ್ ಅನ್ನು 521-6ಕ್ಕೆ ಡಿಕ್ಲೇರ್ ಮಾಡಿಕೊಂಡಿತು.

ಲ್ಯಾಥಮ್ ಜೊತೆಗೆ ಕಾನ್ವೇ ಕೂಡ ಶತಕ ಬಾರಿಸಿದ್ದರಿಂದ ನ್ಯೂಜಿಲೆಂಡ್ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಯಿತು. ಟಾಮ್ ಲ್ಯಾಥಮ್ (252), ಕಾನ್ವೇ (109) ಹಾಗೂ ಬ್ಲಂಡೆಲ್ (57) ನ್ಯೂಜಿಲೆಂಡ್ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸ್ಕೋರರ್‌ಗಳು. ಬಾಂಗ್ಲಾದೇಶದ ಬೌಲರ್‌ಗಳಲ್ಲಿ ತಸ್ಕಿನ್ ಅಹ್ಮದ್ 4 ವಿಕೆಟ್ ಪಡೆದರೆ, ಶರೀಫುಲ್ ಇಸ್ಲಾಂ ಒಂದು ವಿಕೆಟ್ ಪಡೆದರು. ಇನ್ನೂ ಮೊದಲ ಟೆಸ್ಟ್‌ನಲ್ಲಿ ಎದುರಾದ ಸೋಲಿಗೆ ಈ ಗೆಲುವಿನೊಂದಿಗೆ ಸೇಡು ತೀರಿಸಿಕೊಳ್ಳಲು ನ್ಯೂಜಿಲೆಂಡ್ ಕಾಯುತ್ತಿದೆ

Share