Published
6 months agoon
By
UNI Kannadaಜೋಹಾನ್ಸ್ಬರ್ಗ್, ಜ 6(ಯುಎನ್ ಐ) ದಕ್ಷಿಣ ಆಫ್ರಿಕಾ ವಿರುದ್ದ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ನಲ್ಲಿ ಚೇತೇಶ್ವರ ಪೂಜಾರ ಅರ್ಧಶತಕ ಸಿಡಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕಳಪೆ ಫಾರ್ಮ್ ಕಾಯ್ದುಕೊಂಡಿರುವ ಪೂಜಾರ ಅವರಿಗೆ ಈ ಅರ್ಧಶತಕ ಕೊಂಚ ಸಮಾಧಾನ ತಂದಿದೆ ಈ ಕ್ರಮದಲ್ಲಿ ಮೂರನೇ ದಿನದಾಟದ ಬಳಿಕ ಮಾತನಾಡಿರುವ ಪೂಜಾರ ಕುತೂಹಲಕರ ಮಾತುಗಳನ್ನಾಡಿದ್ದಾರೆ. ಫಾರ್ಮ್ನಲ್ಲಿ ಇಲ್ಲದಿದ್ದರೂ ಇಷ್ಟು ಸಮಯ ತಮ್ಮ ಬೆಂಬಲಕ್ಕೆ ನಿಂತಿರುವ ತಂಡದ ಮ್ಯಾನೇಜ್ಮೆಂಟ್ಗೆ ಪೂಜಾರ ಕೃತಜ್ಞತೆ ಹೇಳಿದ್ದಾರೆ.
ಕಳೆದೊಂದು ವರ್ಷದಿಂದ ತಮ್ಮ ವಿರುದ್ಧ ಬರುತ್ತಿರುವ ಟೀಕೆಗಳ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂದು ಪೂಜಾರ ಹೇಳಿದ್ದಾರೆ. “ಟೀಮ್ ಮ್ಯಾನೇಜ್ಮೆಂಟ್ ಯಾವಾಗಲೂ ನನ್ನನ್ನು ಬೆಂಬಲಿಸುತ್ತದೆ, ಆದ್ದರಿಂದ ಹೊರಗಿನಿಂದ ನನ್ನ ವಿರುದ್ಧದ ಟೀಕೆಗಳಿಗೆಹೆದರುವುದಿಲ್ಲ. ಕೋಚಿಂಗ್ ಸಿಬ್ಬಂದಿ, ನಾಯಕ, ಆಟಗಾರರು ಎಲ್ಲರೂ ನಮಗೆ ಬೆಂಬಲ ನೀಡುತ್ತಿದ್ದಾರೆ. ನಾನು ಕಠಿಣವಾಗಿ ಆಡುತ್ತೇನೆ. ಕೆಲ ಸಂದರ್ಭಗಳಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ ಅಂತಹ ಸಮಯದಲ್ಲಿ ನಮ್ಮ ವಿರುದ್ದ ಇಂತಹ ಟೀಕೆಗಳು ಸಹಜ ಎಂದು ಪೂಜಾರ ಹೇಳಿದ್ದಾರೆ. ಒಬ್ಬ ಕ್ರಿಕೆಟಿಗನಾಗಿ ಇವುಗಳಿಗೆ ತಲೆಕೆಡಿಸಿಕೊಳ್ಳದೆ ನಮ್ಮ ಕೆಲಸ ನಾವು ಮಾಡಬೇಕು ಎಂದು ನುಡಿದಿದ್ದಾರೆ. ಈ ಪಂದ್ಯದಲ್ಲಿ 86 ಎಸೆತ ಎದುರಿಸಿದ ಪೂಜಾರ 53 ರನ್ ಗಳಿಸಿದರು.
41ನೇ ವಸಂತಕ್ಕೆ ಕಾಲಿಟ್ಟ ಎಂ.ಎಸ್ ಧೋನಿ
ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ: ಬ್ಯಾಟ್ಸ್ ಮನ್ ರುತುರಾಜ್ ಗಾಯಕ್ವಾಡ್ ಗೆ ಅವಕಾಶ ಇಲ್ವಂತೆ ಯಾಕೆ?
ಇಂಗ್ಲೆಂಡ್- ಭಾರತ ನಡುವೆ ಮರುನಿಗದಿ ಮಾಡಿದ್ದ 5 ನೇ ಟೆಸ್ಟ್ ಪಂದ್ಯ; ಇಂಗ್ಲೆಂಡ್ ಗೆ ಗೆಲುವು, ಸರಣಿ ಸಮಬಲ
ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಯ್ಕೆ ಮಾಡದಿರುವ ನಿರ್ಧಾರ ಪ್ರಶ್ನಿಸಿದ ಪಾಕ್ ಮಾಜಿ ಕ್ರಿಕೆಟಿಗ
ವಿಂಬಲ್ಡನ್ ಮಿಶ್ರ ಡಬಲ್ಸ್: ಸೆಮಿಫೈನಲ್ ತಲುಪಿದ ಸಾನಿಯಾ ಮಿರ್ಜಾ ಮತ್ತು ಮೇಟ್ ಪಾವಿಕ್ ಜೋಡಿ
3000 ಮೀಟರ್ನಲ್ಲಿ ಹೊಸ ರಾಷ್ಟ್ರೀಯ ದಾಖಲೆ ಮಾಡಿದ ಅಥ್ಲಿಟ್ ಪಾರುಲ್ ಚೌಧರಿ