Published
6 months agoon
By
UNI Kannadaಜೋಹಾನ್ಸ್ಬರ್ಗ್, ಜ 3( ಯುಎನ್ ಐ) ಟೆಸ್ಟ್ ಸರಣಿಯ ಭಾಗವಾಗಿ ಜೋಹಾನ್ಸ್ಬರ್ಗ್ನಲ್ಲಿ ಭಾರತ – ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಪಂದ್ಯ ಸೋಮವಾರ ಆರಂಭವಾಗಲಿದೆ. ಆದರೆ, ಮೊದಲ ಟೆಸ್ಟ್ ನಲ್ಲಿ ಪರಾಭವಗೊಂಡಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಕ್ವಿಂಟನ್ ಡಿ ಕಾಕ್ ರೂಪದಲ್ಲಿ ಬಿಗ್ ಶಾಕ್ ನೀಡಿದ್ದು ಗೊತ್ತೇ ಇದೆ. ಡಿಕಾಕ್ ತಮ್ಮ ಟೆಸ್ಟ್ ನಿವೃತ್ತಿಯನ್ನು ಹಠಾತ್ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಈ ಸಂಬಂಧ ದಕ್ಷಿಣ ಆಫ್ರಿಕಾ ಮುಖ್ಯ ಕೋಚ್ ಮಾರ್ಕ್ ಬೌಚರ್ ಪ್ರತಿಕ್ರಿಯಿಸಿದ್ದು, ಡಿಕಾಕ್ ಅವರ ಈ ನಿರ್ಧಾರವನ್ನು ಗೌರವಿಸುತ್ತೇವೆ. ಆದರೆ ಅವರು ಇಷ್ಟು ಬೇಗ ನಿವೃತ್ತಿಯಾಗಲಿದ್ದಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಟೆಸ್ಟ್ ಮಾದರಿಯಲ್ಲಿ ಡಿಕಾಕ್ ಅವರ ಅತ್ಯುತ್ತಮ ದಾಖಲೆಗಾಗಿ ಬೌಚರ್ ಮೆಚ್ಚುಗೆ ವ್ಯಕ್ತಪಡಿಸಿದರು.
“ಆ ವಯಸ್ಸಿನಲ್ಲಿ ಡಿಕಾಕ್ ನಿವೃತ್ತಿ ಘೋಷಿಸಲಿದ್ದಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ನಾವು ಈಗಲೂ ಅದೇ ಆಘಾತದಲ್ಲಿದ್ದೇವೆ. ಅವರ ವೈಯಕ್ತಿಕ ಕಾರಣಗಳನ್ನು ನಾವು ಗೌರವಿಸುತ್ತೇವೆ. ನಾವು ಈಗ ಸರಣಿಯ ಮಧ್ಯದಲ್ಲಿದ್ದೇವೆ. ಸರಣಿಯತ್ತ ಗಮನ ಹರಿಸಬೇಕಾಗಿದೆ. ಡಿಕಾಕ್ ಅವರ ಸ್ಥಾನಕ್ಕೆ ಬಂದಿರುವ ಯುವ ಆಟಗಾರ ತಮ್ಮ ಆಟವನ್ನು ಸುಧಾರಿಸಿಕೊಂಡಿದ್ದಾರೆ. ಅದ್ಬುತವಾದ ಟೆಸ್ಟ್ ಕೆರಿಯರ್ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಡಿಕಾಕ್ ಸ್ಥಾನದಲ್ಲಿ ಕೈಲ್ ವೇರ್ರಿಯನ್ ತಂಡಕ್ಕೆ ಆಗಮಿಸಲಿದ್ದಾರೆ. ಅವರು ತಮ್ಮ ಆಟ ಉತ್ತಮ ಪಡಿಸಿಕೊಂಡಿದ್ದಾರೆ. ಅವರಿಗೆ ಅಂತಿಮ ತಂಡದಲ್ಲಿ ಸ್ಥಾನ ಲಭ್ಯವಾಗದಿದ್ದರೂ ತಂಡದಲ್ಲಿ ಬಹಳ ಸಮಯದಿಂದ ಇದ್ದಾರೆ, ಆ ಅನುಭವದೊಂದಿಗೆ ಮುಂದುವರಿಯಲಿದ್ದಾರೆ ಎಂದು ನಾನು ಭಾವಿಸಿದ್ದೇನೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಇತಿಹಾಸ ನಿರ್ಮಿಸುವ ನಿರೀಕ್ಷೆಯಲ್ಲಿದೆ.
ಚೊಚ್ಚಲ ರಣಜಿ ಟ್ರೋಫಿ ಮುಡಿಗೇರಿಸಿಕೊಂಡ ಮಧ್ಯಪ್ರದೇಶ; ಆರ್ ಸಿಬಿ .. ಆರ್ ಸಿಬಿ ಎಂಬ ಕೂಗು
ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಕೋವಿಡ್ ಸೋಂಕು!
ಕ್ರಿಕೆಟ್: ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಪಂದ್ಯಗಳು ಸೋನಿಯಲ್ಲಿ ಪ್ರಸಾರ
ಕ್ರಿಕೆಟಿಗ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದರ್ಪಣೆ ಮಾಡಿ 15 ವರ್ಷ! ಖುಷಿಯಲ್ಲಿ ಆರ್ ಎಸ್
ವಿಶ್ವ ಈಜು ಚಾಂಪಿಯನ್ಶಿಪ್: ಕೈ ಮುರಿದುಕೊಂಡ ಆಸ್ಟ್ರೇಲಿಯಾದ ಈಜುಗಾರ್ತಿ!
ತಂಡಕ್ಕೆ ಆಯ್ಕೆಯಾಗಲಿಲ್ಲವೆಂದು ಪಾಕ್ ಕ್ರಿಕೆಟಿಗ ಆತ್ಮಹತ್ಯೆ ಯತ್ನ