Connect with us


      
ಕ್ರೀಡೆ

ಸಚಿನ್ ತೆಂಡೂಲ್ಕರ್ ಕಠಿಣ ನಿರ್ಣಯ… ಅಭಿಮಾನಿಗಳಿಗೆ ನಿರಾಸೆ

UNI Kannada

Published

on

ಮುಂಬೈ, ಜ 9(ಯುಎನ್‌ ಐ) – ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಮುಂಬರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಆಡದಿರುವ ಕಠಿಣ ನಿರ್ಧಾರ ತೆಗೆದು ಕೊಂಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸಚಿನ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಜನವರಿ 20 ರಿಂದ 29 ರವರೆಗೆ ಒಮನ್‌ನಲ್ಲಿ ನಡೆಯಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022 ರಲ್ಲಿ ಇಂಡಿಯಾ ಮಹಾರಾಜಾಸ್‌ ತಂಡದ ಪರವಾಗಿ ಸಚಿನ್‌ ಆಡಬೇಕಿತ್ತು.

ಆದರೆ, ಪ್ರಸ್ತುತ ಲೀಗ್‌ನಲ್ಲಿ ಆಡಲು ಸಚಿನ್‌ ನಿರಾಕರಿಸಿರುವುದರಿಂದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಈ ಲೀಗ್‌ ನಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು, ಡ್ಯಾಶಿಂಗ್ ಆಟಗಾರರಾದ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮತ್ತಿತರರು ಮತ್ತೊಮ್ಮೆ ಒಗ್ಗೂಡಿ ಮೈದಾನಕ್ಕಿಳಿಯಲಿದ್ದಾರೆ. ಇಂಡಿಯಾದ ಮಹಾರಾಜಾಸ್‌ ಜೊತೆಗೆ ಏಷ್ಯನ್ ಲಯನ್ಸ್ , ವರಲ್ಡ್‌ ಜೆಯಂಟ್ಸ್‌ ತಂಡಗಳು ಲೀಗ್‌ನಲ್ಲಿ ಪೈಪೋಟಿ ನಡೆಸುತ್ತಿವೆ. ಏಷ್ಯನ್ ಕ್ರಿಕೆಟಿಗರು (ಅಫ್ರಿದಿ, ಜಯಸೂರ್ಯ, ಅಖ್ತರ್, ಮುರಳೀಧರನ್, ಇತ್ಯಾದಿ) ಪ್ರತಿನಿಧಿಸಲಿದ್ದಾರೆ. ಆದರೆ ವರಲ್ಡ್‌ ಜೆಯಂಟ್ಸ್‌ ಏಷ್ಯನ್ ಅಲ್ಲದ ಕ್ರಿಕೆಟಿಗರು (ಜಾಂಟಿ ರೋಡ್ಸ್, ಶೇನ್ ವಾರ್ನ್, ಶಾನ್ ಪೊಲಾಕ್, ಲಾರಾ, ಇತ್ಯಾದಿ) ವಿಶ್ವ ದೈತ್ಯರನ್ನು ಪ್ರತಿನಿಧಿಸಲಿದೆ.

Share