Connect with us


      
ಕ್ರೀಡೆ

SA vs IND: ರಿಷಬ್ ಪಂತ್‌ಗೆ ಭಾರಿ ಆಘಾತ !

Published

on

ಕೇಪ್‌ ಟೌನ್‌, ಜ 8(ಯುಎನ್‌ ಐ) ಜೋಹಾನ್ಸ್‌ಬರ್ಗ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಜಯ ಸಾಧಿಸಿರುವುದು ಗೊತ್ತೇಇದೆ. ಇದರಿಂದ ಮೂರು ಟೆಸ್ಟ್‌ಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-1 ರಿಂದ ಸಮಬಲದಲ್ಲಿದೆ. ಈ ಕ್ರಮದಲ್ಲಿ ಸರಣಿ ವಿಜೇತರನ್ನು ನಿರ್ಧರಿಸುವ ಅಂತಿಮ ಟೆಸ್ಟ್ ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಜನವರಿ 11 ರಿಂದ ಕೇಪ್ ಟೌನ್‌ನಲ್ಲಿ ನಡೆಯಲಿದೆ. ಆದರೆ, ಗಾಯದ ಸಮಸ್ಯೆಯಿಂದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಅಂತಿಮ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಒಂದು ವೇಳೆ . ಕೊಹ್ಲಿ ಫೈನಲ್ ತಂಡ ಪ್ರವೇಶಿಸಿದರೆ, ಹನುಮ ವಿಹಾರಿ ಮತ್ತೊಮ್ಮೆ ಬೆಂಚ್‌ಗೆ ಸೀಮಿತವಾಗಲಿದ್ದಾರೆ.

ಎರಡನೇ ಟೆಸ್ಟ್ ನಲ್ಲಿ ಕೊಹ್ಲಿ ಸ್ಥಾನದಲ್ಲಿ ಹನುಮ ವಿಹಾರಿಗೆ ಸ್ಥಾನ ಕಲ್ಪಿಸಲಾಗಿತ್ತು. ಈ ನಡುವೆ … ಜೋಹಾನ್ಸ್ ಬರ್ಗ್ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ರಿಷಬ್ ಪಂತ್ ವಿಕೆಟ್ ಕಳೆದುಕೊಂಡ ರೀತಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ಕ್ರಮದಲ್ಲಿ ಮೂರನೇ ಟೆಸ್ಟ್‌ನಲ್ಲಿ ಆತನನ್ನು ತಂಡದಿಂದ ಹೊರಗಿಟ್ಟು ಅನುಭವಿ ವಿಕೆಟ್‌ ಕೀಪರ್ ವೃದ್ಧಿಮಾನ್ ಸಹಾಗೆ ಅವಕಾಶ ನೀಡಬೇಕೆಂದು ಎಂದು ಮಾಜಿಯೊಬ್ಬರು ಸಲಹೆ ನೀಡಿದ್ದಾರೆ. ಇದರೊಂದಿಗೆ ಕೇಪ್ ಟೌನ್ ಟೆಸ್ಟ್ ನಲ್ಲಿ ಪಂತ್‌ ಅವರನ್ನು ಬದಲಾಯಿಸಲು ಕೊಹ್ಲಿ, ಕೋಚ್ ದ್ರಾವಿಡ್ ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ. ಕಳೆದ ಕೆಲ ವರ್ಷಗಳಿಂದ ರಿಷಬ್ ಪಂತ್ ಉತ್ತಮ ಫಾರ್ಮ್‌ನಲ್ಲಿಲ್ಲ ಪ್ರಸಕ್ತ ಸರಣಿಯಲ್ಲಿ ಪಂತ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಟ್ಟು 59 ರನ್ ಗಳಿಸಿದ್ದಾರೆ.

ಕ್ರೀಡೆ

ಆಸ್ಟ್ರೇಲಿಯಾ ಗಡಿಪಾರು; ದುಬೈಗೆ ಬಂದಿಳಿದ ಜೊಕೊವಿಕ್!

Published

on

ದುಬೈ : ಜನೆವರಿ 17 (ಯು.ಎನ್.ಐ.) ಆಸ್ಟ್ರೇಲಿಯಾ ಗಡಿಪಾರು ಮಾಡಿದ ಬಳಿಕ ನೊವಾಕ್ ಜೊಕೊವಿಕ್ ದುಬೈಗೆ ಬಂದಿಳಿದಿದ್ದಾರೆ. ಆಸ್ಟ್ರೇಲಿಯಾ ಫೆಡರಲ್ ನ್ಯಾಯಾಲಯವು ಪಬ್ಲಿಕ್ ಗ್ರೌಂಡ್ಸ್ ಆಧಾರದ ಮೇಲೆ ಟೆನಿಸ್ ತಾರೆ ಜೊಕೊವಿಕ್ ವೀಸಾ ರದ್ದುಗೊಳಿಸಿರುವುದನ್ನು ಸರ್ವಾನುಮತದಿಂದ ಎತ್ತಿಹಿಡಿದಿತ್ತು. ಕೋರ್ಟ್ ತೀರ್ಪಿನ ಬಳಿಕ ಜೊಕೊವಿಕ್ ತಾನು ಅತ್ಯಂತ ನಿರಾಶೆಗೊಂಡಿದ್ದೇನೆ ಎಂದು ಹೇಳಿದ್ದರು.
ಅತ್ತ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ನಡೆಯುತ್ತಿದ್ದಂತೆ, ಇತ್ತ ಪುರುಷರ ಹಾಲಿ ಚಾಂಪಿಯನ್ ಆಗಿರುವ ಜೊಕೊವಿಕ್ ಎಮಿರೇಟ್ಸ್ ವಿಮಾನದ ಮೂಲಕ ಮಾಸ್ಕ್ ಧರಿಸಿ, 2 ಬ್ಯಾಗ್‌ಗಳನ್ನು ಹೊತ್ತುಕೊಂಡು ದುಬೈಗೆ ಬಂದಿಳಿದಿದ್ದಾರೆ. ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ನ ತೀರ್ಪಿನ ಬಳಿಕ ಅತ್ಯಂತ ನಿರಾಶಗೊಂಡಿದ್ದ ಜೊಕೊವಿಕ್, ಮೆಲ್ಬೋರ್ನ್‌ನ ಟುಲ್ಲಾಮರೀನ್ ವಿಮಾನ ನಿಲ್ದಾಣದಿಂದ ಎಮಿರೇಟ್ಸ್ ಫ್ಲೈಟ್ EK409 ಸ್ಥಳೀಯ ಸಮಯ ರಾತ್ರಿ 10:51ಕ್ಕೆ ದುಬೈಗೆ ಟೇಕ್ ಆಫ್ ಆದರು. ಆತನೊಂದಿಗೆ ಸಹಾಯಕರು ಹಾಗೂ ಅಧಿಕಾರಗಳು ಇದ್ದರು.
ಕಳೆದ 11 ದಿನಗಳಲ್ಲಿ ಎರಡು ಬಾರಿ ಆಸ್ಟ್ರೇಲಿಯಾದ ಸರ್ಕಾರವು ಜೊಕೊವಿಕ್ ಅವರ ವೀಸಾವನ್ನು ಕ್ಯಾನ್ಸಲ್ ಮಾಡಿ, ಬಂಧನದಲ್ಲಿರಿಸಿತ್ತು. ಕೊರೊನಾ ಲಸಿಕೆ ಪಡೆಯದೆ ನೊವಾಕ್ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಭಾಗವಹಿಸಲು ಪಟ್ಟು ಹಿಡಿದಿದ್ದರು. ಆದರೆ, ಆಸ್ಟ್ರೇಲಿಯಾ ಸರ್ಕಾರ ವ್ಯಾಕ್ಸಿನ್ ಪಡೆಯ ಜೊಕೊವಿಕ್ ಗೆ ಯಾವುದೇ ರೀತಿಯ ವಿನಾಯಿತಿ ನೀಡದೆ ವೀಸಾ ಕ್ಯಾನ್ಸಲ್ ಮಾಡಿತ್ತು. ಅಲ್ಲದೆ ಕೋರ್ಟ್ ನಲ್ಲಿ ಸೋಲು ಕಂಡ ನಂತರ ಆಸ್ಟ್ರೇಲಿಯಾ ಸರ್ಕಾರ ನೊವಾಕ್ ಅವರನ್ನು ಗಡಿಪಾರು ಮಾಡಿತ್ತು.

Continue Reading

ಕ್ರೀಡೆ

“ಅಹಂ ಬಿಟ್ಟು ವಿರಾಟ್ ಹೊಸ ನಾಯಕನನ್ನು ಬೆಂಬಲಿಸಬೇಕು” – ಕಪಿಲ್ ದೇವ್

Published

on

ಹೊಸದಿಲ್ಲಿ : ಜನೆವರಿ 16 (ಯು.ಎನ್.ಐ.) ವಿರಾಟ್ ಕೊಹ್ಲಿ ಶನಿವಾರ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೊಹ್ಲಿ ಕೇವಲ ಟೆಸ್ಟ್ ತಂಡದ ನಾಯಕರಾಗಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಕೊಹ್ಲಿ ಭಾರತ ತಂಡದ ಸಾರಥ್ಯ ತೊರೆದಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವಕ್ಕ ಗುಡ್ ಬೈ ಹೇಳಿದ ಬಳಿಕ, ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕಠಿಣ ಶಬ್ದಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕೊಹ್ಲಿ ಅಹಂ ಬಿಟ್ಟು ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ ಎಂದಿದ್ದಾರೆ.
ವಿರಾಟ್ ನಿರ್ಧಾರಕ್ಕೆ ಸ್ವಾಗತ
ಮಿಡ್ ಡೇ ಆಂಗ್ಲ ಪತ್ರಿಕೆಯೊಂದಿಗೆ ಮಾತನಾಡಿದ ಕಪಿಲ್, ನಾಯಕತ್ವ ತೊರೆಯುವ ವಿರಾಟ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಟಿ-20 ತಂಡದ ನಾಯಕತ್ವವನ್ನು ತೊರೆದಾಗಿನಿಂದ ಕೋಹ್ಲಿ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತುಂಬಾ ಚಿಂತೆ ಹಾಗೂ ಒತ್ತಡದಲ್ಲಿ ವಿರಾಟ್ ಕೊಹ್ಲಿ ಕಾಣುತ್ತಿದ್ದರು. ಆದ್ದರಿಂತ ನಾಯಕತ್ವ ತ್ಯಜಿಸುವ ನಿರ್ಧಾರ ಕೈಗೊಳ್ಳುವುದರಿಂದ ಅವರು ಗ್ರೌಂಡ್ ನಲ್ಲಿ ಮುಕ್ತವಾಗಿ ಆಡಲು ಸಾಧ್ಯವಾಗುತ್ತದೆ ಎಂದರು.
ಕೊಹ್ಲಿಯಿಂದ ಯೋಚಿಸಿ ನಿರ್ಧಾರ
ಇಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೊಹ್ಲಿ ಯೋಚಿಸಿರಬಹುದು ಎಂದು ಕಪಿಲ್ ಹೇಳಿದ್ದಾರೆ. “ವಿರಾಟ್ ಒಬ್ಬ ಪ್ರಬುದ್ಧ ವ್ಯಕ್ತಿ. ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅವರು ಯೋಚಿಸಿದ್ದಾರೆಂಬ ಖಾತ್ರಿ ಇದೆ. ಬಹುಶಃ ಅವರು ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವವನ್ನು ಎಂಜಾಯ್ ಮಾಡಲು ಸಾಧ್ಯವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಬೆಂಬಲಿಸಬೇಕು” ಎಂದರು.
ಅಹಂಕಾರವನ್ನು ತೊರೆಯಬೇಕು
ವಿರಾಟ್ ಅಹಂ ಬಿಟ್ಟು ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ. ಈ ಹಿಂದೆ ಸುನಿಲ್ ಗವಾಸ್ಕರ್ ತನ್ನ ಅಡಿಯಲ್ಲಿ ಆಡಿದ್ದರು ಎಂದು ಕಪಿಲ್ ನೆನಪು ಮಾಡಿಕೊಂಡರು. “ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ಮೊಹಮ್ಮದ್ ಅಜರುದ್ದೀನ್ ಅಡಿಯಲ್ಲಿ ತಾನು ಆಡಿದ್ದೇನೆ. ಎಂದಿಗೂ ನಾನು ಅಹಂಕಾರವನ್ನು ಹೊಂದಿರಲಿಲ್ಲ. ವಿರಾಟ್ ತನ್ನ ಅಹಂಕಾರವನ್ನು ಬಿಟ್ಟು ಯುವ ಕ್ರಿಕೆಟಿಗನ ಅಡಿಯಲ್ಲಿ ಆಡಬೇಕಾಗಿದೆ. ಇದು ಅವರಿಗೆ ಮತ್ತು ಭಾರತೀಯ ಕ್ರಿಕೆಟ್‌ಗೆ ನೆರವಾಗಲಿದೆ. ಹೊಸ ನಾಯಕನಿಗೆ ವಿರಾಟ್ ಮಾರ್ಗದರ್ಶನ ನೀಡಬೇಕು. ಬ್ಯಾಟ್ಸ್‌ಮನ್ ಆಗಿ ವಿರಾಟ್‌ನನ್ನು ಟೀಮ್ ಇಂಡಿಯಾ ಕಳೆದುಕೊಳ್ಳಲು ಸಾಧ್ಯವಿಲ್ಲ” ಎಂದು ಕಪಿಲ್ ಹೇಳಿದರು..

Continue Reading

ಕ್ರೀಡೆ

ವಿರಾಟ್‌ನ ಫೋಟೋ ಹಂಚಿಕೊಂಡು ಅನುಷ್ಕಾ ಹೇಳಿದ್ದೇನು ಗೊತ್ತಾ?

Published

on

ಹೊಸದಿಲ್ಲಿ : ಜನೆವರಿ 16 (ಯು.ಎನ್.ಐ.) ಭಾರತ ತಂಡದ ಟೆಸ್ಟ್ ಸಾರಥ್ಯ ತೊರೆದ ವಿರಾಟ್ ಕೊಹ್ಲಿ ಬಗ್ಗೆ ಅನುಷ್ಕಾ ಹೇಳಿದ್ದೇನು? ಎಲ್ಲ ಕ್ರೀಡಾಪ್ರೇಮಿಗಳಿಗೆ ಈ ಒಂದು ಕುತೂಹಲ ಇದ್ದೆ ಇದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ಕೆಲವು ದಿನಗಳಿಂದ ವಿರಾಟ್ ಕೊಹ್ಲಿ ಕ್ರಿಕೆಟ್ ಜೀವನದಲ್ಲಿ ಅನೇಕ ಏರಿಳಿತಗಳು ಕಾಣಿಸಿಕೊಂಡಿದ್ದವು.

ಇತರರಿಗೆ ಹೋಲಿಕೆ ಮಾಡಿದ್ರೆ ಇಷ್ಟು ಕಡಿಮೆ ಅವಧಿಯಲ್ಲಿ 70ಕ್ಕೂ ಹೆಚ್ಚು ಶತಕಗಳನ್ನು ಬಾರಿಸಿದ್ದರೂ ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅವರಲ್ಲಿ ಕಾಣಿಸಿಕೊಂಡಿತ್ತು. ಇದಲ್ಲದೇ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋತ ನಂತರ ಕೊಹ್ಲಿ ನಾಯಕತ್ವದ ಬಗ್ಗೆ ಹಲವು ಪ್ರಶ್ನೆಗಳ ಎದ್ದಿದ್ದವು. ಇದಾದ ಬಳಿಕ ದಿಢೀರಂತ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ವಿರಾಟ್ ನಾಯಕತ್ವ ತೊರೆದ ಬಳಿಕ ಅವರ ಪತ್ನಿ ಮತ್ತು ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯ ಭಾವನೆಗಳು ಹೇಗೆ ಇದ್ದವು ಅನ್ನೋದರ ಬಗ್ಗೆ ಹಂಚಿಕೊಂಡಿದ್ದಾರೆ.

ವಿರಾಟ್ ನ ನಗುವಿನ ಫೋಟೋವನ್ನು ಅನುಷ್ಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅದರಡಿ “ಧೋನಿ ಕ್ರಿಕೆಟ್ ಗೆ ವಿದಾಯ ಹೇಳಿದಾಗ ನೀವು 2014ರಲ್ಲಿ ಭಾರತೀಯ ಟೆಸ್ಟ್ ತಂಡದ ನಾಯಕರಾಗಿದ್ದೀರಿ ಎಂದು ಹೇಳಿದ ದಿನ ನನಗೆ ನೆನಪಿದೆ. ಬಳಿಕ ನಾನು, ನೀವು ಮತ್ತು ಧೋನಿ ಈ ಬಗ್ಗೆ ಮಾತುಕತೆ ನಡೆಸಿದ್ದೆವು. ಇನ್ನು ಮುಂದೆ ನಿನ್ನ ಗಡ್ಡ ಎಷ್ಟು ಬೇಗ ಬೆಳ್ಳಗಾಗುತ್ತೆ ನೋಡು ಎಂದು ಧೋನಿ ಹೇಳಿದ್ದರು. ಈ ಮಾತಿಗೆ ಅಂದು ನಾವೆಲ್ಲ ತುಂಬಾ ನಕ್ಕಿದ್ದೆವು. ಅಂದಿನಿಂದ ನಿಮ್ಮ ಗಡ್ಡ ಬೆಳ್ಳಗಾಗುವುದನ್ನು ನಾನು ನೋಡಿದ್ದೇನೆ. ಗಡ್ಡ ಬಿಳಿಯಾಗುವುದಷ್ಟೇ ಅಲ್ಲ, ಉಳಿದೆಲ್ಲ ವಿಚಾರಗಳ ಬಗ್ಗೆ ಕಂಡುಕೊಂಡಿದ್ದೇನೆ. ಭಾರತ ಕ್ರಿಕೆಟ್ ತಂಡದ ನಾಯಕನಾಗಿ ನಿಮ್ಮ ಬೆಳವಣಿಗೆ ಮತ್ತು ಸಾಧನೆಗಳ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ಅದಕ್ಕಿಂತ ಹೆಚ್ಚಾಗಿ, ನಿಮ್ಮ ಆಂತರಿಕ ಬೆಳವಣಿಗೆಯ ಬಗ್ಗೆಯೂ ತುಂಬಾ ಹೆಮ್ಮೆ ಇದೆ.

https://www.instagram.com/p/CYyUQ-ksZk8/?utm_source=ig_embed&ig_rid=e7b0fdf8-39c1-4dd6-8b8a-15f9370ac327

2014 ರಲ್ಲಿ ನೀವು ತುಂಬಾ ಚಿಕ್ಕವರಾಗಿದ್ದಾಗ ಒಳ್ಳೆಯ ಉದ್ದೇಶಗಳು, ಸಕಾರಾತ್ಮಕ ಗುರಿಗಳು ನಿಮ್ಮನ್ನು ಇಂದಿಗೂ ಜೀವನದಲ್ಲಿ ಮುನ್ನಡೆಸುತ್ತವೆ. ನೀವು ಎದುರಿಸಿದ ಬಹಳಷ್ಟು ಸವಾಲುಗಳು ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೂ ಸೇರಿವೆ. ಬಹುಶಃ ಇದುವೇ ಜೀವನ ಹೌದಲ್ಲವೇ? ನಿಮ್ಮ ಅನುಭವವನ್ನು ಹಾಗೂ ಬಲದೊಂದಿಗೆ ಭಾರತ ತಂಡದ ಪ್ರತಿ ಜಯದಲ್ಲಿ ಧಾರೆ ಎರೆದಿದ್ದೀರಿ. ಕೆಲವು ಪಂದ್ಯಗಳ ಸೋಲಿನ ಬಳಿಕ ನಿಮ್ಮ ಪಕ್ಕದಲ್ಲಿ ಕುಳಿತು ಕಣ್ಣೀರು ಹರಿಯುವುದನ್ನು ನೋಡಿದ್ದೇನೆ. ಪಂದ್ಯ ಸೋಲಲು ಕಾರಣ ಏನು? ಹೇಗೆ ಸುಧಾರಿಸಬಹುದಿತ್ತು ಅನ್ನೋ ಬಗ್ಗೆ ನೀವು ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿದ್ದೀರಿ. ನಿಮ್ಮ ರೀತಿಯಲ್ಲೇ ಉತ್ಸಾಹ ಹಾಗೂ ಲೆಕ್ಕಾಚಾರ ಬೇರೆಯವರಿಂದಲೂ ನಿರೀಕ್ಷೆ ಮಾಡಿದ್ದೀರಿ. ನೀವು ಯಾವಾಗ್ಲೂ ಅಸಾಂಪ್ರದಾಯಿಕ ಮತ್ತು ಬಹಿರಂಗವಾಗಿಯೂ ಇದೇ ರೀತಿ ಕಾಣಿಸಿಕೊಳ್ಳುತ್ತೀರಿ” ಎಂದು ಅನುಷ್ಕಾ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಕೈಗೊಳ್ಳುವ ಪ್ರತಿಯೊಂದು ಪ್ರವಾಸದಲ್ಲೂ ತಮ್ಮ ಕುಟುಂಬವನ್ನು ಕರೆದೊಯ್ಯುತ್ತಿದ್ದರು. ದುಬೈ ವರ್ಲ್ಡ್ ಕಪ್ ಟಿ-20ಯಲ್ಲೂ ಅನುಷ್ಕಾ ಶರ್ಮಾ ಹಾಗೂ ಮಗಳು ವಾಮಿಕಾ ಕೂಡ ಇದ್ದರು. ಅನೇಕ ಬಾರಿ ಗ್ರೌಂಡ್ ನಲ್ಲಿ ಅನುಷ್ಕಾ ತನ್ನ ಪತಿಯನ್ನು ಪ್ರೋತ್ಸಾಹಿಸುತ್ತಿದ್ದುದನ್ನು ನಾವೆಲ್ಲ ನೋಡಿದ್ದೇವೆ.

https://www.instagram.com/p/CYyUQ-ksZk8/?utm_source=ig_embed&ig_rid=e7b0fdf8-39c1-4dd6-8b8a-15f9370ac327

Continue Reading
Advertisement
ದೇಶ14 mins ago

ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

ಖುಂಟಿ: ಜನೆವರಿ 17 (ಯು.ಎನ್.ಐ.) ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು...

ದೇಶ18 mins ago

ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಮೋದಿ ಸಂತಾಪ

ರಾಯಗಡ: ಜನೆವರಿ ೧೭ (ಯು.ಎನ್.ಐ.) ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ....

ಕರ್ನಾಟಕ28 mins ago

ಪಿಎಂಎಫ್ಎಂಇ ಯೋಜನೆಗೆ ಶೇ.15 ರಷ್ಟು ರಾಜ್ಯದಿಂದ ಹೆಚ್ಚುವರಿ ಸಹಾಯಧನ

ಬೆಂಗಳೂರು: ಜನೆವರಿ 17 (ಯು.ಎನ್.ಐ.)ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪಿಎಂಎಫ್ಎಂಇ ಯೋಜನೆಗೆ...

ಬೆಂಗಳೂರು45 mins ago

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಕೋವಿಡ್

ಬೆಂಗಳೂರು, ಜ ೧೭(ಯುಎನ್ ಐ) ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆಆರ್ ಟಿ...

ದೇಶ60 mins ago

ಉಪಯುಕ್ತ ಮಾಹಿತಿ ; 5 ಸಾವಿರ ಅಲ್ಲ, ಕೇವಲ ₹260 ರಲ್ಲಿ ಒಮೈಕ್ರಾನ್ ಪತ್ತೆ ಹಚ್ಚಿ!

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಪ್ರತಿ ದಿನ ಒಮೈಕ್ರಾನ್ ಸೋಂಕು ದೇಶದಲ್ಲಿ ವೇಗವಾಗಿ ಹರಡಲಾರಂಭಿಸಿದೆ. ಕೊರೊನಾ ರೂಪಾಂತರಗಳಿಗಿಂತ ಒಮೈಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ನೊಂದಿಗೆ...

ದೇಶ60 mins ago

ಐಐಟಿ ಬಾಂಬೆಯ ವಿದ್ಯಾರ್ಥಿ ಆತ್ಮಹತ್ಯೆ

ಮುಂಬೈ: ಜನೆವರಿ 17  (ಯು.ಎನ್.ಐ.) ಐಐಟಿ ಬಾಂಬೆಯ ವಿದ್ಯಾರ್ಥಿ ಸೋಮವಾರ ಮುಂಜಾನೆ ಇಲ್ಲಿನ ಪೊವೈ ಕ್ಯಾಂಪಸ್ ನಲ್ಲಿರುವ ತನ್ನ ಹಾಸ್ಟೆಲಿನ ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ...

ಕರ್ನಾಟಕ1 hour ago

ಕೋವಿಡ್‌ ಸೋಂಕು ಹೆಚ್ಚು; ಸಾವು ಕಡಿಮೆ:‌ ಸಚಿವ ಅಶೋಕ್

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚಾಗಿದೆ.  ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆ ಇದೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ತಿಳಿಸಿದರು....

ಆರೋಗ್ಯ2 hours ago

ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೨ ಲಕ್ಷ ೫೮ ಸಾವಿರ ಕೋವಿಡ್ ಪ್ರಕರಣ

ನವದೆಹಲಿ,ಜ ೧೭(ಯು ಎನ್ ಐ)ದೇಶದಲ್ಲಿ ಈವರೆಗೆ ೮ ಸಾವಿರದ ೨೦೯ ಕೋವಿಡ್-೧೯ ರೂಪಾಂತರಿ ಒಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ ಶೇಕಡ ೬ರಷ್ಟು ಪ್ರಕರಣಗಳು...

ಕರ್ನಾಟಕ2 hours ago

ಗಾಂಧಿ ಕುರಿತು ಸಂದೇಹ, ಪ್ರಶ್ನೆಗಳಿವೆಯೇ ?

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ಗಾಂಧಿ ವಿಚಾರ ವೇದಿಕೆಯು ಗಾಂಧೀಜಿ ಅವರ ಕುರಿತ ಎಲ್ಲ ಸಂದೇಹಗಳಿಗೆ ಉತ್ತರ ರೂಪಿಯಾದ ಪುಸ್ತಕವನ್ನು ಪ್ರಕಟಿಸಲು ಯೋಜಿಸಿದ್ದು, ಸಾರ್ವಜನಿಕರಿಂದ ಪ್ರಶ್ನೆಗಳನ್ನು ಆಹ್ವಾನಿಸಿದೆ....

ವಾಣಿಜ್ಯ2 hours ago

ವಿಶ್ವ ಆರ್ಥಿಕ ವೇದಿಕೆಯ ದಾವೂಸ್ ಸಭೆಯಲ್ಲಿಂದು ರಾತ್ರಿ ಪ್ರಧಾನಿ ಮೋದಿ ಭಾಷಣ

ನವದೆಹಲಿ, ಜ ೧೭(ಯುಎನ್ ಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾತ್ರಿ ೮.೩೦ಕ್ಕೆ ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಸಭೆಯಲ್ಲಿ ’ಜಗತ್ತಿನ ಸ್ಥಿತಿಗತಿ’ ಕುರಿತು ವಿಶೇಷ...

ಟ್ರೆಂಡಿಂಗ್

Share