Connect with us


      
ಕ್ರೀಡೆ

ವಿರಾಟ್‌ ಕೊಹ್ಲಿ… ಮಾಧ್ಯಮಗಳ ಮುಂದೆ ಏಕೆ ಬರುತ್ತಿಲ್ಲ…! ದ್ರಾವಿಡ್‌ ವಿವರಣೆ

UNI Kannada

Published

on

ಜೋಹಾನ್ಸ್‌ ಬರ್ಗ್‌, ಜ 3(ಯುಎನ್‌ ಐ) ದಕ್ಷಿಣ ಆಫ್ರಿಕಾ ಪ್ರವಾಸ ಆರಂಭವಾದ ಬಳಿಕ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮಾಧ್ಯಮಗಳಮುಂದೆ ಬಾರದಿರಲು, ಅವರ 100ನೇ ಟೆಸ್ಟ್ ಪಂದ್ಯ ಕಾರಣವಾಗಿದೆ. ಆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವುದಾಗಿ ತಮಗೆ ತಿಳಿಸಿದ್ದಾರೆ ಎಂದು ಹೆಡ್‌ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

‘ದಕ್ಷಿಣ ಆಫ್ರಿಕಾ ಪ್ರವಾಸದ ಆರಂಭದಿಂದಲೂ ಈವರೆಗೆ ಕೊಹ್ಲಿ ಮಾಧ್ಯಮಗಳ ಮುಂದೆ ಬರದಿರುವುದಕ್ಕೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ. ಈ ವಿಷಯದಲ್ಲಿ ನಾನು ಅವರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, 100ನೇ ಟೆಸ್ಟ್ ದಿನದಂದು ಸುದ್ದಿಗಾರರೊಂದಿಗೆ ಮಾತನಾಡುವುದಾಗಿ ನನಗೆ ಹೇಳಿದ್ದಾರೆ. ಆಗ ನೀವು ಅವರಿಗೆ ಎಷ್ಟು ಪ್ರಶ್ನೆಗಳನ್ನು ಬೇಕಾದರೂ ಕೇಳಬಹುದು ಎಂದು ರಾಹುಲ್ ತಿಳಿಸಿದ್ದಾರೆ. ಆದೇ ರೀತಿ ತಾವು ಪಂದ್ಯಗಳ ಫಲಿತಾಂಶವನ್ನು ನಿರ್ಧರಿಸಲು ಸಾಧ್ಯವಿಲ್ಲ ತಂಡವನ್ನು ಉತ್ತಮ ಪ್ರದರ್ಶನಕ್ಕಾಗಿ ಸಿದ್ಧಗೊಳಿಸಬಹುದು ಅಷ್ಟೆ ಎಂದು ದ್ರಾವಿಡ್ ನುಡಿದಿದ್ದಾರೆ.

ಏತನ್ಮಧ್ಯೆ, ಜನವರಿ 11 ರಂದು ಕೇಪ್ ಟೌನ್‌ನಲ್ಲಿ ಪ್ರಾರಂಭವಾಗುವ ಮೂರನೇ ಅಂತಿಮ ಟೆಸ್ಟ್‌ನಲ್ಲಿ ಕೊಹ್ಲಿ 100 ನೇ ಟೆಸ್ಟ್ ಮೈಲಿಗಲ್ಲು ತ ಲುಪಲಿದ್ದಾರೆ. ಟಿ-20 ವಿಶ್ವಕಪ್ ಬಳಿಕ ಆ ಮಾದರಿ ನಾಯಕತ್ವದಿಂದ ಕೆಳಗಿಳಿದಿದ್ದ ಕೊಹ್ಲಿ, ಏಕದಿನ ತಂಡದ ನಾಯಕತ್ವದಿಂದ ಆಯ್ಕೆದಾರರು ಅವರನ್ನು ತೆಗೆದುಹಾಕಿದಾಗ ವಿವಾದಸೃಷ್ಟಿಯಾಗಿದೆ. ದಕ್ಷಿಣ ಆಫ್ರಿಕಾ ಸರಣಿಗೆ ತಂಡದ ಆಯ್ಕೆಗೆ ಕೇವಲ 90 ನಿಮಿಷಗಳ ಮೊದಲು ಏಕದಿನ ನಾಯಕತ್ವದಿಂದ ಕೈಬಿಡುವ ಬಗ್ಗೆ ನನಗೆ ತಿಳಿಸಲಾಯಿತು ಎಂದು ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಟ್ವೆಂಟಿ-20 ನಾಯಕನಾಗಿ ಮುಂದುವರಿಯುವಂತೆ ಮಂಡಳಿ ತಮಗೆ ಯಾವುದೇ ಮನವಿ ಮಾಡಿರಲಿಲ್ಲ ಎಂದು ಅವರು ಹೇಳಿದ್ದರು. ಆದರೆ, ವಿರಾಟ್ ಹೇಳಿಕೆಗೆ ಬಿ ಸಿ ಸಿ ಐ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದೆ. ಮಂಡಳಿ ಸದಸ್ಯರೆಲ್ಲರೂ ಕೊಹ್ಲಿ ಅವರನ್ನು ಟಿ 20 ನಾಯಕರಾಗಿ ಮುಂದುವರಿಯಬೇಕೆಂದು ಬಯಸಿದ್ದರು ಎಂದು ಅಧ್ಯಕ್ಷ ಸೌರಭ್ ಗಂಗೂಲಿ, ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಹೇಳಿರುವುದು ಗಮನಾರ್ಹ

Share