Published
6 months agoon
ಅಬುಧಾಬಿ, ನ 7 (ಯುಎನ್ಐ) ವೆಸ್ಟ್ ಇಂಡೀಸ್ ಸೆಮಿಫೈನಲ್ ರೇಸ್ ನಿಂದ ಔಟ್ ಆಗಿದೆ. ಅಬುಧಾಬಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತು. ಈ ಸೋಲಿನೊಂದಿಗೆ ಕೆರಿಬಿಯನ್ ತಂಡ ಮುಂದಿನ ವರ್ಷದ ಟಿ20 ವಿಶ್ವಕಪ್ನ ಸೂಪರ್-12 ಹಂತಕ್ಕೆ ನೇರವಾಗಿ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.
ಸೂಪರ್-12ರಲ್ಲಿ ನೇರ ಟಿಕೆಟ್ ಪಡೆದ ತಂಡಗಳು!
ಈ ಬಾರಿಯ ಟಿ-20 ವಿಶ್ವಕಪ್ ರೋಚಕ ತಿರುವುಗಳೊಂದಿಗೆ ಅಂತಿಮ ಘಟ್ಟದ ಹೊಸ್ತಿಲಿಗೆ ಬಂದು ನಿಂತಿದೆ. ಗ್ರೂಪ್ 1ರಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಸೆಮಿಪೈನಲ್ ನಲ್ಲಿ ಆಡುವ ಎರಡು ತಂಡಗಳಾಗಿವೆ. ಅದರಂತೆ ಗ್ರೂಪ್ 2ರಿಂದ ಈಗಾಗಲೇ ಪಾಕಿಸ್ತಾನ ತನ್ನ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಆದರೆ, ಇನ್ನೊಂದು ಟೀಮ್ ಯಾವುದು ಅನ್ನೋದು ಇಂದು ನಿರ್ಧಾರವಾಗುವ ಸಾಧ್ಯತೆ ಇದೆ.
ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೂ ಚಾನ್ಸ್
ಮತ್ತೊಂದೆಡೆ, ಮುಂದಿನ ಆವೃತ್ತಿಗೆ ಟಿ-20 ವಿಶ್ವಕಪ್ ಸೂಪರ್ 12ರ ಹಂತಕ್ಕೆ ನೇರವಾಗಿ ಅರ್ಹತೆ ಪಡೆಯುವ ಟೀಮ್ ಗಳ ಕುರಿತಂತೆ ಐಸಿಸಿ ನಿರ್ಧಾರ ಕೈಗೊಂಡಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಅಪ್ ಕಮಿಂಗ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ತಂಡಗಳು ಸೂಪರ್ 12ರ ಘಟ್ಟಕ್ಕೆ ನೇರವಾಗಿ ಅರ್ಹತೆ ಪಡೆದುಕೊಂಡಿವೆ.
ಐಸಿಸಿ ನಿಯಮಗಳ ಪ್ರಕಾರ ಪ್ರಸಕ್ತ ಟಿ20 ವಿಶ್ವಕಪ್ನಿಂದ ಸೂಪರ್-12ರ 8 ತಂಡಗಳು ಮುಂದಿನ ಆವೃತ್ತಿಗೆ ಅರ್ಹತೆ ಪಡೆಯಲಿವೆ. T20 ವಿಶ್ವಕಪ್ 2021 ರ ವಿಜೇತ, ರನ್ನರ್-ಅಪ್ ಆಗಿರುವ 8 ಟೀಮ್ ಗಳನ್ನು ಆಯ್ಕೆ ಮಾಡಿಕೊಂಡಿರಲಾಗಿರುತ್ತದೆ. ಅಲ್ಲದೆ, ನವೆಂಬರ್ 15 ರೊಳಗೆ ಐಸಿಸಿ ಪ್ರಕಟಿಸಲಿರುವ ಪುರುಷರ T-20 ಶ್ರೇಯಾಂಕದ ಆಧಾರದ ಮೇಲೆ ಇತರ 6 ತಂಡಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ.
ನವೆಂಬರ್ 15 ಕಟ್ಆಫ್ ದಿನಾಂಕ
ಐಸಿಸಿ ನವೆಂಬರ್ 15 ಅನ್ನು T20 ವಿಶ್ವಕಪ್ 2021 ಗೆ ಅರ್ಹತೆ ದಿನಾಂಕವನ್ನಾಗಿ ನಿಗದಿಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ಜೊತೆಗೆ ಈ ವರ್ಷ ಸೂಪರ್-12 ಆಡುತ್ತಿರುವ ಶ್ರೀಲಂಕಾ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳು ಮುಂದಿನ ಟಿ-20 ವಿಶ್ವಕಪ್ನಲ್ಲಿ ಮೊದಲ ಸುತ್ತನ್ನು ಆಡಬೇಕಾಗುವ ಸಾಧ್ಯತೆ ಇದೆ.
ಥಾಮಸ್ ಕಪ್ ಗೆದ್ದ ಕನ್ನಡಿಗ ಲಕ್ಷ್ಯ ಸೇನ್ ಗೆ 5 ಲಕ್ಷ ರೂ. ಬಹುಮಾನ: ಸಿಎಂ ಬೊಮ್ಮಾಯಿ
ಮಿನಿ ಒಲಿಂಪಿಕ್ಸ್ ಗೆ ಅದ್ಧೂರಿ ಚಾಲನೆ
ಥಾಮಸ್ ಕಪ್ ಗೆಲುವು: ಬೆಂಗಳೂರಿಗ ಲಕ್ಷ್ಯ ಸೇನ್ಗೆ ರಾಜ್ಯ ಸರಕಾರದಿಂದ ಸನ್ಮಾನ
ಥಾಮಸ್ ಕಪ್ ಗೆದ್ದ ಭಾರತ: ಮುಖ್ಯಮಂತ್ರಿಗಳಿಂದ ಅಭಿನಂದನೆ
ಥಾಮಸ್ ಕಪ್ ಗೆದ್ದ ಭಾರತ: ಮೋದಿ ಅಭಿನಂದನೆ -1 ಕೋಟಿ ಬಹುಮಾನ!
ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ!