Connect with us


      
ಸಿನೆಮಾ

ನಾನು ಪ್ರತಿದಿನ ಎರಡು, ಮೂರು ಗಂಟೆಗಳ ಕಾಲ ಅಳುತ್ತಿದ್ದೆ: ನಟ ಸಂಜಯ್ ದತ್

Vanitha Jain

Published

on

ಮುಂಬೈ: ಏಪ್ರಿಲ್ 19 (ಯು.ಎನ್.ಐ.) ನಮಗೆಲ್ಲಾ ಗೊತ್ತಿರುವ ಹಾಗೆ ಬಾಲಿವುಡ್ ನಟ ಸಂಜಯ್ ದತ್ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದು ಬಂದವರು. ಇದೀಗ ಕೆಜಿಎಫ್ ಚಾಪ್ಟರ್ ೨ ಸಿನಿಮಾದ ಗೆಲುವಿನಲ್ಲಿ ನಲಿದಾಡುತ್ತಿದ್ದಾರೆ.

ಈ ವೇಳೆ ಸಂಜಯ್ ದತ್ ಅವರು ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರೊಂದಿಗಿನ ಇತ್ತೀಚಿನ ಪಾಡ್ ಕಾಸ್ಟ್‌ನಲ್ಲಿ, ಕ್ಯಾನ್ಸರ್ ಅನ್ನು ಹೇಗೆ ಎದುರಿಸಿದೆ ಎಂದು ವಿವರಿಸುತ್ತಾ, ನಾನು ಎರಡು ಮೂರು ಗಂಟೆಗಳ ಕಾಲ ಅಳುತ್ತಿದ್ದೆ ಎಂದು ತಮ್ಮ ನೋವಿನ ದಿನಗಳನ್ನು ನೆನೆಸಿಕೊಂಡಿದ್ದಾರೆ.

ನಾನು ಕ್ಯಾನ್ಸರ್ ನಿಂದ ಹೊರಬರಬೇಕಾಗಿತ್ತು. ಅದು ದೊಡ್ಡ ಸವಾಲು ಆಗಿತ್ತು. ನನ್ನ ಸಹೋದರಿ ನನ್ನ ಬಳಿ ಬಂದು ಹೇಳಿದರು. ಅದಕ್ಕೆ ನಾನು ಹೌದು ಕ್ಸಾನ್ಸರ್ ಬಂದಿದೆ ಏನೀವಾಗ? ಏನಾದರೂ ಮಾಡಬೇಕು ಎಂದೆನಿಸಿದರೂ ನಾನು ನನ್ನ ಜೀವನ, ನನ್ನ ಹೆಂಡತಿ, ಮಕ್ಕಳನ್ನು ನೆನೆದು ಎರಡು ಮೂರು ಗಂಟೆಗಳ ಕಾಲ ಅಳುತ್ತಿದ್ದೆ. ದುರ್ಬಲನಾಗುತ್ತಿದ್ದೆ ಎಂದು ಹೇಳಿದರು.

ನಂತರ ಅವರ ಚಿಕಿತ್ಸೆ ಕುರಿತು ಮಾತನಾಡುತ್ತಾ, ನನಗೆ ಕೂದಲು ಉದುರುತ್ತದೆ. ಬೇರೆ ಸಂಗತಿಗಳು ಘಟಿಸುತ್ತವೆ ಎಂದು ಹೇಳಿದರು. ವಾಂತಿ ಆಗುತ್ತದೆ ಎಂದರು. ಆಗ ನನಗೆ ಏನು ಆಗುವುದಿಲ್ಲ ಎಂದು ಹೇಳಿದೆ. ಕೂದಲು ಉದುರುವುದಿಲ್ಲ, ವಾಂತಿ ಆಗುವುದಿಲ್ಲ, ನಾನು ಮಲಗುವುದಿಲ್ಲ ಎಂದು ಹೇಳಿದೆ. ನನಗೆ ಕಿಮಿಯೋಥೆರಪಿ ನಡೆಯಿತು. ನಾನು ಪುನಃ ಬಂದು ಬೈಕ್ ಮೇಲೆ ಕುಳಿತೆ. ನಾನು ಸೈಕಲ್ ಓಡಿಸಿದೆ. ನಾನು ಪ್ರತಿದಿನ ಸೈಕಲ್ ಹೊಡೆಯುತ್ತಿದೆ. ಪ್ರತಿ ಕೀಮೋ ನಂತರ ನಾನು ಅದನ್ನು ಮಾಡಿದೆ. ಅದೊಂದು ಹುಚ್ಚು, ದುಬೈಗೆ ಕೀಮೋಗೆ ಹೋಗುತ್ತಿದ್ದೆ, ಆಮೇಲೆ ಬ್ಯಾಡ್ಮಿಂಟನ್ ಅಂಗಳಕ್ಕೆ ಹೋಗಿ ಎರಡು-ಮೂರು ಗಂಟೆ ಆಡುತ್ತಿದ್ದೆ ಎಂದು ಆ ದಿನಗಳನ್ನು ಮೆಲುಕು ಹಾಕಿದರು.

Share