Connect with us


      
ಸಾಮಾನ್ಯ

ನವಜಾತ ಗಂಡುಮಗುವನ್ನ ಕಳೆದುಕೊಂಡ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ

Lakshmi Vijaya

Published

on

ಮ್ಯಾಂಚೆಸ್ಟರ್ (ಬ್ರಿಟನ್): ಏಪ್ರಿಲ್ 19 (ಯು.ಎನ್.ಐ.)  ಫುಟ್ ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅವರ ನವಜಾತ ಗಂಡುಮಗು ಸಾವನ್ನಪ್ಪಿದೆ. ತಮ್ಮ ಅವಳಿ ಮಕ್ಕಳಲ್ಲಿ ನವಜಾತ ಗಂಡು ಮಗು ಸಾನವನ್ನಪ್ಪಿದ್ದು ಹೆಣ್ಣುಮಗು ಬದುಕುಳಿದಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫುಟ್ ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.

ರೊನಾಲ್ಡೊ ತಮ್ಮ ಗೆಳತಿ ಜಾರ್ಜಿನಾ ರೋಡ್ರಿಗಸ್ ಅವರ ಜೊತೆ ಅವಳಿ ಮಕ್ಕಳ ಜನನದ ನಿರೀಕ್ಷೆಯಲ್ಲಿದ್ದರು. ಕಳೆದ ಅಕ್ಟೋಬರ್ ನಲ್ಲಿ ಈ ವಿಚಾರ ಹಂಚಿಕೊಂಡಿದ್ದರು.

ಆದರೆ ಇದೀಗ ನವಜಾತ ಗಂಡು ಮಗು ಸಾವನ್ನಪ್ಪಿದೆ ಎಂದು ಘೋಷಿಸಿದ್ದಾರೆ.

“ನಮ್ಮ ಗಂಡು ಮಗು ತೀರಿಕೊಂಡಿದೆ ಎಂದು ನಾವು ಘೋಷಿಸಬೇಕಾಗಿದೆ, ಇದು ಯಾವುದೇ ಪೋಷಕರು ಅನುಭವಿಸಬಹುದಾದ ದೊಡ್ಡ ನೋವು. ನಮ್ಮ ಹೆಣ್ಣು ಮಗುವಿನ ಜನನವು ಈ ಕ್ಷಣ ನಮಗೆ ಸ್ವಲ್ಪ ಬದುಕುವ ಶಕ್ತಿ, ಭರವಸೆ ಮತ್ತು ಸಂತೋಷ ನೀಡಿದೆ.  ವೈದ್ಯರು ಮತ್ತು ದಾದಿಯರಿಗೆ ಅವರ ಎಲ್ಲಾ ತಜ್ಞರ ಆರೈಕೆ ಮತ್ತು ಬೆಂಬಲಕ್ಕಾಗಿ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಈ ನಷ್ಟದಿಂದ ನಾವೆಲ್ಲರೂ ಕುಗ್ಗಿಹೋಗಿದ್ದೇವೆ. ಮತ್ತು ಈ ಕಷ್ಟದ ಸಮಯದಲ್ಲಿ ನಾವು ಗೌಪ್ಯತೆಯನ್ನು ಕೇಳುತ್ತೇವೆ. ನಮ್ಮ ಮಗುವೇ, ನೀವು ನಮ್ಮ ದೇವತೆ. ನಾವು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇವೆ” ಎಂದು ಪೋಸ್ಟ್ ಮಾಡಿದ್ದಾರೆ.

ಮ್ಯಾಂಚೆಸ್ಟರ್ ಯುನೈಟೈಡ್ ಸೇರಿದಂತೆ ಹಲವರು ರೊನಾಲ್ಡೊ ದುಃಖವನ್ನ ಹಂಚಿಕೊಂಡಿದ್ದಾರೆ.

Share