Published
6 months agoon
ನವದೆಹಲಿ: ನ. 8 (ಯುಎನ್ಐ) ದೇಶದಲ್ಲಿ ಇದುವರೆಗೆ ನೀಡಲಾಗಿರುವ ಕೋವಿಡ್-19 ಲಸಿಕೆ ಪ್ರಮಾಣ ಸೋಮವಾರ 109 ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಂಜೆ 7 ಗಂಟೆಯವರೆಗೆ 54 ಲಕ್ಷಕ್ಕೂ ಹೆಚ್ಚು ಡೋಸ್ಗಳನ್ನು ನೀಡಲಾಗಿದೆ. ಕೋವಿಡ್-19ಗೆ ತುತ್ತಾಗುತ್ತಿರುವ ದೇಶದ ಅತ್ಯಂತ ದುರ್ಬಲ ಜನಸಂಖ್ಯೆಯನ್ನು ರಕ್ಷಿಸಲು ಲಸಿಕೆ ಒಂದು ಸಾಧನವಾಗಿದೆ ಎಂದು ಸಚಿವಾಲಯ ಹೇಳಿದೆ.
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಮೂಲಕ ದೇಶಾದ್ಯಂತ ಲಸಿಕಾ ಅಭಿಯಾನವನ್ನು ಜನವರಿ 16 ರಂದು ಪ್ರಾರಂಭಿಸಲಾಯಿತು. ಮುಂಚೂಣಿ ಕೆಲಸಗಾರರಿಗೆ ಲಸಿಕೆಯನ್ನು ಫೆಬ್ರವರಿ 2 ರಿಂದ ಪ್ರಾರಂಭವಾಯಿತು.
ದೇಶದಲ್ಲಿ ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾರಿಗೂ ಲಸಿಕೆಯನ್ನು ಹಾಕಲು ಪ್ರಾರಂಭಿಸಲಾಯಿತು. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಅವಕಾಶ ನೀಡುವ ಮೂಲಕ ಲಸಿಕಾ ಅಭಿಯಾನವನ್ನು ಸರ್ಕಾರ ಇನ್ನಷ್ಟು ವಿಸ್ತರಿಸಲು ನಿರ್ಧರಿಸಿತು.
ಕೋವಿಡ್ ಸಾವು; ಕೇಂದ್ರ ಸರ್ಕಾರದ ಸುಳ್ಳು ನಾಚಿಕೆಗೇಡು: ಖರ್ಗೆ
4ನೇ ಅಲೆಯ ಭೀತಿ: ಸಿಎಂ ನೇತೃತ್ವದಲ್ಲಿ ಕೋವಿಡ್ ಸಭೆ
ದೇಶದಲ್ಲಿ ನಿನ್ನೆಗಿಂತ ಮತ್ತೆ ಏರಿಕೆ ಕಂಡ ಕೊರೊನಾ ಕೇಸ್
ಕೊರೊನಾ ಕಂಟ್ರೋಲ್ ಗೆ ನಿರಂತರವಾಗಿ ಸ್ವಿಮ್ಮಿಂಗ್ ಪೂಲ್ ಗೆ ನೀರು ತುಂಬಿಸುವ ಐಡಿಯಾ; ನೀರಿನ ಬಿಲ್ ನೋಡಿ ಶಾಕ್!
ಐಐಟಿ ಮದ್ರಾಸ್ ಕ್ಯಾಂಪಸ್ ನಲ್ಲಿ ಮತ್ತೆ 18 ಮಂದಿಗೆ ಕೊರೊನಾ ಸೋಂಕು
ವಯಸ್ಕರರಿಗೂ ಉಚಿತ ಬೂಸ್ಟರ್ ಡೋಸ್; ಕೊರೊನಾ ಕಂಟ್ರೋಲ್ ಗೆ ದೆಹಲಿ ಸರ್ಕಾರ ಘೋಷಣೆ