Connect with us


      




ಕರ್ನಾಟಕ

ಕುಕ್ಕೆ ಕ್ಷೇತ್ರದಲ್ಲಿ ಇಂದಿನಿಂದ ಯಾವುದೇ ಸೇವೆಗಳು ನಡೆಯುವುದಿಲ್ಲ

UNI Kannada

Published

on

ಮಂಗಳೂರು, ಜ ೭(ಯುಎನ್ ಐ) ಸರಕಾರದ ಕೋವಿಡ್ ನಿಯಂತ್ರಣ ನಿಯಮಗಳಿಗೆ ಪೂರಕವಾಗಿ ಇಂದಿನಿಂದ ಮುಂದಿನ ಆದೇಶದ ತನಕ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಯಾವುದೇ ಸೇವೆಗಳು ನಡೆಯುವುದಿಲ್ಲ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ವಾರಾಂತ್ಯ ಕರ್ಫ್ಯೂ ಹೊರತು ಪಡಿಸಿ ಇತರ ದಿನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಇದೆ. ಶ್ರೀ ಸುಬ್ರಹ್ಮಣ್ಯ ಮತ್ತು ಪರಿವಾರ ದೇವರುಗಳ ನಿತ್ಯ ಪೂಜಾದಿ ಕಾರ್ಯಗಳು ಎಂದಿನಂತೆ ನಡೆಯಲಿದೆ.

ಶ್ರೀ ದೇವರ ದರ್ಶನಕ್ಕೆ ಒಂದು ಬಾರಿಗೆ ೫೦ ಮಂದಿ ಭಕ್ತರಿಗೆ ಮಾತ್ತ ಅವಕಾಶ ಇದೆ. ಭಕ್ತಾದಿಗಳು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಸಹಕರಿಸ ಬೇಕು ಎಂದು ಹೇಳಿಕೆಯಲ್ಲಿ ಅವರು ಮನವಿ ಮಾಡಿದ್ದಾರೆ.

Share