Connect with us


      




ದೇಶ

ಇಬ್ಬರು ದಲಿತರ ಹಿಂಸಿಸಿದ ಪಂಚಾಯತ್ ಚುನಾವಣಾ ಅಭ್ಯರ್ಥಿ; ವಿಡಿಯೋ ವೈರಲ್

Vanitha Jain

Published

on

ಔರಂಗಾಬಾದ್, ಡಿಸೆಂಬರ್ 13, (ಯು.ಎನ್.ಐ) ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಪಂಚಾಯತ್ ಮುಖ್ಯಸ್ಥರ ಹುದ್ದೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಚುನಾವಣೆಯಲ್ಲಿ ಪರಾಭವಗೊಂಡ ಕಾರಣ ಇಬ್ಬರು ದಲಿತರ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ಅವರನ್ನು ಬಂಧಿಸಲಾಗಿದೆ.

ಅಭ್ಯರ್ಥಿ ಬಲವಂತ್ ಸಿಂಗ್ ಅವರು ತಮ್ಮ ಸೋಲಿಗೆ ದಲಿತ ಸಮುದಾಯವೇ ಕಾರಣ ದೂಷಿಸಿ ದಲಿತರು ಮತ ಹಾಕಲಿಲ್ಲ ಎಂದು ಆರೋಪಿಸಿ ಸಮುದಾಯದ ಇಬ್ಬರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಲವಂತ್ ಅವರು ಹಣ ನೀಡಿದರೂ ಮತಹಾಕಲಿಲ್ಲ ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಕೇಳಬಹುದು. ಅಲ್ಲದೇ ಇಬ್ಬರು ದಲಿತ ವ್ಯಕ್ತಿಗಳನ್ನು ಅವಾಚ್ಯವಾಗಿ ನಿಂದಿಸಿದಲ್ಲದೇ ಕಿವಿಗಳನ್ನು ಹಿಡಿದುಕೊಂಡು ಬಸ್ಕಿ ಹೊಡೆಸಿರುವುದನ್ನು ಸಹ ವಿಡಿಯೋದಲ್ಲಿ ನೊಡಬಹುದು. ಇದಲ್ಲದೇ ಇಬ್ಬರಲ್ಲಿ ಒಬ್ಬನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಲ್ಲದೇ ನೆಲದ ಮೇಲೆ ಉಗುಳುವಂತೆ ಹೇಳಿ ಆತನ ಕುತ್ತಿಗೆ ಹಿಡಿದು ಬಲವಂತವಾಗಿ ನೆಲಕ್ಕೆ ಉಗಿದ ಉಗುಳನ್ನು ನೆಕ್ಕುವಂತೆ ಹೇಳಿ ಹಿಂಸಿಸುವುದನ್ನು ಸಹ ಕಾಣಬಹುದು.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಲ್ವಂತ್ ಅವರು, ಇಬ್ಬರು ವ್ಯಕ್ತಿಗಳು ಕುಡಿದು ಗಲಾಟೆ ಮಾಡುತ್ತಿದ್ದರು. ಹಾಗಾಗಿ ಅವರನ್ನು ಶಿಕ್ಷಿಸಿದೆ ಎಂದು ಹೇಳಿದಂರು. ಆದರೆ ಮತ ಹಾಕಲು ಹಣ ನೀಡಿರುವುದರ ಬಗ್ಗೆ ಆದರೂ ಮತಹಾಕದಿರುವ ಕುರಿತು ಅಸಮಾಧಾನ ಹೊರಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಂತೇಶ್ ಕುಮಾರ್ ಮಿಶ್ರಾ ಅವರ ನಿರ್ದೇಶನದ ಮೇರೆಗೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಿಶ್ರಾ ಹೇಳಿದ್ದಾರೆ.

Share