Connect with us


      
ಸಿನೆಮಾ

ವರ್ಮಾ ನಿರ್ಮಿತ ಸಲಿಂಗಕಾಮಿ ಕುರಿತ ಚಿತ್ರ ತರೆಗಪ್ಪಳಿಸಲು ಸಿದ್ಧ !

Kumara Raitha

Published

on

ಬೆಂಗಳೂರು: ಮಾರ್ಚ್‌ ೦೩ (ಯು.ಎನ್.‌ಐ.)   ವಿವಾದಾತ್ಮಕ ನಿರ್ದೇಶಕ, ನಿರ್ಮಾಪಕ ಎಂದೇ ಖ್ಯಾತರಾದ ರಾಮಗೋಪಾಲ್‌ ವರ್ಮಾ ಅವರು ನಿರ್ಮಿಸಿರುವ ಡೇಂಜರಸ್‌ ಖತ್ರಾ ಸಿನೆಮಾ ಸದ್ಯದಲ್ಲಿಯೇ ತೆರೆ ಕಾಣಲು ಸಿದ್ಧವಾಗಿದೆ.

ಈ ಸಿನೆಮಾವನ್ನು ವೀಕ್ಷಿಸಿದ ಸೆನ್ಸಾರ್‌ ಮಂಡಳಿ ಸಾರ್ವಜನಿಕರ ವೀಕ್ಷಣೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಅನುಮತಿ ನೀಡಿದೆ. ಸಲಿಂಗಕಾಮಿಗಳ ಕುರಿತ ಚಿತ್ರಕಥೆ ಹೊಂದಿರುವ ಸಿನೆಮಾಕ್ಕೆ ಪ್ರಾಪ್ತವಾಗಿದೆ.

ಚಿತ್ರದ ಪೋಸ್ಟರ್‌ ಗಳನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿರುವ ವರ್ಮಾ ಅವರು ೨೦೨೨ರ ಏಪ್ರಿಲ್‌ ೮ ರಂದು  ಡೇಂಜರಸ್‌ ಖತ್ರಾ ಸಿನೆಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ.  ಇದು ಸಲಿಂಗಕಾಮಿ ಕಥೆ ಕಾರಣ ವಯಸ್ಕರ ವೀಕ್ಷಣೆಗೆ ಅರ್ಹವಾಗುವ ಎ ಪ್ರಮಾಣ ಪತ್ರ ಪಡೆದಿದೆ. ಇದು ಇಬ್ಬರು ಮಹಿಳೆಯರ ಪ್ರೇಮಕಥೆ ಹೊಂದಿದೆ. ಸೆಕ್ಷನ್‌ ೩೭೭ ರದ್ದಾದ ನಂತರ ಸಲಿಂಗಕಾಮ ಕಾನೂನು ಬಾಹಿರವಲ್ಲ. ಭಾರತದ ಮೊದಲ ಲೆಸ್ಬೀಯನ್‌ ಸಿನೆಮಾಕ್ಕೆ ಎ ಸರ್ಟಿಫಿಕೇಟ್‌ ಸಿಕ್ಕಿರುವುದು ಖುಷಿ ನೀಡಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಪುರುಷ ಪ್ರಧಾನ ಸಮಾಜದಿಂದ ಬೇಸರಗೊಂಡ ಇಬ್ಬರು ಮಹಿಳೆಯರು ಪರಸ್ಪರ ಆಕರ್ಷಿತರಾಗುತ್ತಾರೆ. ಅವರ ಸ್ನೇಹ ಸಲಿಂಗಕಾಮಕ್ಕೆ ತಿರುಗುತ್ತದೆ. ಈ ಕ್ರೈಮ್‌ ಥ್ರಿಲರ್‌ ಸಿನೆಮಾ ಹಾಟ್ ದೃಶ್ಯಗಳನ್ನು ಒಳಗೊಂಡಿದೆ. ಹಾಟ್‌ ತಾರೆಯರೆಂದೆ ಹೆಸರಾದ ಅಪ್ಸರಾ ರಾಣಿ ಮತ್ತುನೈನಾ ಗಂಗೂಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ಕಥಾವಸ್ತುವು ಈ ಪುರುಷ ಪ್ರಧಾನ ಸಮಾಜದಿಂದ ಬೇಸತ್ತ ಮತ್ತು ಒಬ್ಬರನ್ನೊಬ್ಬರು ಸೆಳೆಯುವ ಇಬ್ಬರು ಮಹಿಳೆಯರ ಪ್ರೀತಿಯ ಸುತ್ತ ಸುತ್ತುತ್ತದೆ. ಈ ಕ್ರೈಮ್ ಥ್ರಿಲ್ಲರ್-ನಾಟಕ ಚಲನಚಿತ್ರವು ಕೆಲವು ಅತ್ಯಂತ ಧೈರ್ಯಶಾಲಿ ಮತ್ತು ನಿಕಟ ದೃಶ್ಯಗಳನ್ನು ಒಳಗೊಂಡಿದೆ. ಸೌತ್ ಚಿತ್ರರಂಗದ ಹಾಟ್ ಸೈರನ್ ಗಳಾದ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Share