Connect with us


      
ಸಿನೆಮಾ

ಲೈಗರ್ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್

UNI Kannada

Published

on

Vijay Devarakonda

ಹೈದರಬಾದ್ : ಡಿಸೆಂಬರ್ 16 (ಯು.ಎನ್.ಐ.) ಪೂರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ನಟನೆಯ ಬಹುಬಾಷ ಚಿತ್ರ “ಲೈಗರ್” ಚಿತ್ರ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಕೊನೆಗೂ ಬಹಿರಂಗಪಡಿಸಿದೆ.

ಕೊನೆಯ ಹಂತದ ಚಿತ್ರೀಕರಣ ಶರವೇಗದಿಂದ ನಡೆಯುತ್ತಿದೆ. ಈ ಸಂದರ್ಭದಲ್ಲಿ ಚಿತ್ರ ತಂಡ ಬಿಡುಗಡೆಯ ದಿನಾಂಕವನ್ನ ಇಂದು ಪ್ರಕಟಿಸಿದೆ. ಮುಂದಿನ ವರ್ಷ ಆಗಸ್ಟ್ 25ಕ್ಕೆ ಪ್ರಪಂಚಾದ್ಯಂತ ಚಿತ್ರ ಬಿಡುಗಡೆಗೆ ಸಿದ್ದತೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಇದೆ ಡಿಸೆಂಬರ್ 31ರಂದು ಚಿತ್ರದ ಸ್ಪೆಷಲ್ ಗ್ಲಿಮ್ಸೆ ಬಿಡುಗಡೆಯಾಗಲಿದೆ.

ಬಾಕ್ಸಿಂಗ್ ಪ್ರಧಾನ ಅಂಶವಾಗಿರುವ ಈ ಚಿತ್ರದಲ್ಲಿ ನಟ ವಿಜಯ್ ದೇವರಕಂಡ ಕಿಕ್ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಥಾ ನಾಯಕಿಯಾಗಿ ಅನನ್ಯ ಪಾಂಡೆ ಜೊತೆಯಾಗಲಿದ್ದಾರೆ.

Share