Connect with us


      
ಸಿನೆಮಾ

‘ಕಾಂತಾರ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ಡೇಟ್ ಫಿಕ್ಸ್

Vanitha Jain

Published

on

ಬೆಂಗಳೂರು: ಆಗಸ್ಟ್ 12 (ಯು.ಎನ್.ಐ.) ಬೆಲ್ ಬಾಟಮ್ ಸಿನಿಮಾದಲ್ಲಿ ಕಮಾಲ್ ಮಾಡಿದ್ದ ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಹಾಡು ಬಿಡುಗಡೆಯಾಗುತ್ತಿದ್ದು, ಈ ಸಂತಸವನ್ನು ಹೊಂಬಾಳೆ ಫಿಲಂಸ್ ಹಂಚಿಕೊಂಡಿದೆ.

ಈ ಸಿನಿಮಾದ ಸಿಂಗಾರ ಸಿರಿಯೆ – ಶಿವನೆದೆಯಲಿ ಲೀಲಾಳ ರಸಮಂಜರಿ ಎಂಬ ಮೊದಲ ವಿಡಿಯೋ ಹಾಡು ಸ್ವಾತಂತ್ರ್ಯ ದಿನಾಚರಣೆಯಂದು (ಆ.೧೫) ಮಧ್ಯಾಹ್ನ ೧೨.೫೮ಕ್ಕೆ ಬಿಡುಗಡೆಯಾಗುತ್ತಿದೆ. ಪ್ರಮೋದ್ ಮರವಂತೆ ಈ ಹಾಡನ್ನು ಬರೆದಿದ್ದು, ಗಾಯಕರಾದ ವಿಜಯ್ ಪ್ರಕಾಶ್, ಅನನ್ಯ ಭಟ್, ನಾಗರಾಜ್ ಪನರ್ ವಲ್ತೂರ್ ದನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಈ ಮಾಹಿತಿಯನ್ನು ಹೊಂಬಾಳೆ ಫಿಲಂಸ್ ಕೂ ವೇದಿಕೆಯಲ್ಲಿ ಹಂಚಿಕೊಂಡಿದ್ದು, The heart notes of Shiva & Leela ಸಿಂಗಾರ ಸಿರಿಯೆ – ಶಿವನೆದೆಯಲಿ ಲೀಲಾಳ ರಸಮಂಜರಿ ಬಿಡುಗಡೆಯಾಗುತ್ತಿದೆ ಎಂದು ಹೇಳಿದೆ.

ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದು, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಿಸಿದ್ದಾರೆ. ಕಾಂತಾರ ಚಲನಚಿತ್ರವು ಸೆಪ್ಟೆಂಬರ್ 30, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

Share