Published
4 months agoon
By
Vanitha Jainಮುಂದಿನ ದಿನಗಳಲ್ಲಿ ಕೊರೋನಾ ವೈರಸ್ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳಲ್ಲಿ ಖರೀದಿಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಖರೀದಿಸಲು ಅನುಮೋದನೆ ನೀಡಿದೆ.
ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮಗಳು-2019 ರ ಅಡಿಯಲ್ಲಿ ನಿಯಮಿತ ಮಾರುಕಟ್ಟೆಗೆ ಡಿಸಿಜಿಐ ಅನುಮೋದನೆಯನ್ನು ನೀಡಿದೆ.
ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳಿಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಷರತ್ತುಬದ್ಧ ಮಾರುಕಟ್ಟೆಗೆ ಒಪ್ಪಿಗೆ ಸೂಚಿಸಿದ್ದು, ಮೆಡಿಕಲ್ ಸ್ಟೋರ್ಗಳಲ್ಲಿ ಲಸಿಕೆಗಳು ಲಭ್ಯವಿರುವುದಿಲ್ಲ. ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳು ಈ ಲಸಿಕೆಗಳನ್ನು ಖರೀದಿಸಲು ಮತ್ತು ಅವುಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ವ್ಯಾಕ್ಸಿನೇಷನ್ ಡೇಟಾವನ್ನು ಡಿಸಿಜಿಐಗೆ ಸಲ್ಲಿಸಬೇಕು ಮತ್ತು ಡೇಟಾವನ್ನು ಕೋವಿನ್ (CoWIN) ಅಪ್ಲಿಕೇಶನ್ನಲ್ಲಿ ನವೀಕರಿಸಬೇಕಾಗುತ್ತದೆ.
ನಿಯಮಿತ ಮಾರುಕಟ್ಟೆ ಅನುಮೋದನೆ ಪಡೆದ ನಂತರ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಬೆಲೆಯನ್ನು ಪ್ರತಿ ಡೋಸ್ ಗೆ 275 ರೂ ಮತ್ತು ಹೆಚ್ಚುವರಿ ಸೇವಾ ಶುಲ್ಕ 150 ರೂ.ಗೆ ಮಿತಿಗೊಳಿಸಲಾಗುವುದು. ಲಸಿಕೆಗಳನ್ನು ಕೈಗೆಟುಕುವಂತೆ ಮಾಡಲು ಬೆಲೆಯನ್ನು ಮಿತಿಗೊಳಿಸಲು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್ಪಿಪಿಎ) ಕಾರ್ಯ ನಿರ್ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ, ಕೋವ್ಯಾಕ್ಸಿನ್ ಪ್ರತಿ ಡೋಸ್ ಗೆ ರೂ. 1,200 ವೆಚ್ಚವಾಗುತ್ತದೆ ಆದರೆ ಕೋವಿಶೀಲ್ಡ್ ರೂ. 150 ಸೇವಾ ಶುಲ್ಕ ಸೇರಿದಂತೆ ಖಾಸಗಿ ಸೌಲಭ್ಯಗಳಲ್ಲಿ ರೂ. 780 ಆಗಿದೆ.
ಜನವರಿ 19 ರಂದು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ ಸಿಒ) ನ ಕೋವಿಡ್-19 ಕುರಿತ ವಿಷಯ ತಜ್ಞರ ಸಮಿತಿಯು (ಎಸ್ಇಸಿ) ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್ಐಐ) ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೋವಾಕ್ಸಿನ್ ಗೆ ನಿಯಮಿತ ಮಾರುಕಟ್ಟೆ ಅನುಮೋದನೆಯನ್ನು ಬಳಸಲು ಶಿಫಾರಸು ಮಾಡಿದ ನಂತರ ಈ ಅನುಮೋದನೆ ಬಂದಿದೆ. ಜನವರಿ 3, 2021ರಂದು ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಗೆ ತುರ್ತು ಬಳಕೆಯ ಅಧಿಕಾರ (ಇಯುಎ) ನೀಡಲಾಗಿದೆ.
“ನೆಹರೂ ಅವರು ಅಸ್ಸಾಂ ಅನ್ನು ಪಾಕಿಸ್ತಾನಕ್ಕೆ ಕೊಡಲು ಮುಂದಾಗಿದ್ದರು”
ಯುಪಿ ರಸ್ತೆ ಅಪಘಾತದಲ್ಲಿ 9 ಮಂದಿ ಸಾವು: ಧನಸಹಾಯ ಘೋಷಿಸಿದ ಮೋದಿ
ನಮಗೆ ಯಾವಾಗಲೂ ಜನರು ಮೊದಲು: ಪೆಟ್ರೋಲ್ ಬೆಲೆ ಇಳಿಸಿದ ಬಳಿಕ ಪ್ರಧಾನಿ ಮೋದಿ ಹೇಳಿಕೆ
ಜನಸಾಮಾನ್ಯರಿಗೆ ಗುಡ್ ನ್ಯೂಸ್; ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ!
ಜ್ಞಾನವಾಪಿ ಮಸೀದಿಯ ಶಿವಲಿಂಗದ ಬಗ್ಗೆ ಪೋಸ್ಟ್ ಹಾಕಿದ್ದ ಪ್ರಾಧ್ಯಾಪಕರಿಗೆ ಜಾಮೀನು ಮಂಜೂರು
ಅಕ್ರಮ ಫ್ಲಾಟ್ ನಿರ್ಮಾಣ: ನೋಟಿಸ್ ಜಾರಿ ಮಾಡಿದ ಬಿಎಂಸಿ