Published
5 months agoon
ಬೆಳಗಾವಿ: (ಸುವರ್ಣ ವಿಧಾನಸೌಧ) ಡಿಸೆಂಬರ್ ೧೩ (ಯು.ಎನ್.ಐ.) ಸಿಡಿಎಸ್ ಬಿಪಿನ್ ರಾವತ್ ಸಾವಿನ ಹಿಂದೆ ದುಷ್ಟಶಕ್ತಿ ಇದೆಯೋ ಇಲ್ಲವೋ ಎಂದು ತಿಳಿಯಲು ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಸೂಕ್ತ ತನಿಖೆ ಅಗತ್ಯವಿದೆ ಎಂದು ಸಚಿವ ಕೆ,ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟರು.
ಅವರಿಂದು ಬೆಳಗಾವಿ ಸುವರ್ಣ ವಿಧಾಬಸೌಧದಲ್ಲಿ ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದರು. ಸೂಕ್ತ ತನಿಖೆ ಆಗದೇ ಇದ್ದರೆ ಅಸಮಾಧಾನ – ಅನುಮಾನ ಹಾಗೆ ಉಳಿಯುತ್ತದೆ ಎಂದ ಅವರು ಕೆಲವರು ಬಿಪಿನ್ ರಾವತ್ ಸಾವಿನ ಬಗ್ಗೆ ವಿಕೃತ ಟ್ವೀಟ್ ಗಳನ್ನು ಮಾಡಿದ್ದಾರೆ. ಇದನ್ನು ರಾಜ್ಯದ ಮುಖ್ಯಮಂತ್ರಿ ಸಹ ಖಂಡಿಸಿದ್ದಾರೆ ಎಂದು ಹೇಳಿದರು.
ಬಿಪಿನ್ ರಾವತ್ ಭಾರತದ ಬಾಹುಬಲಿ. ರಾವತ್ ಹೆಸರು ಕೇಳುತ್ತಿದ್ದಂತೆ ಶತ್ರುಗಳ ಎದೆ ನಡುಗುತ್ತಿತ್ತು ರಕ್ಷಣಾ ವ್ಯವಸ್ಥೆ ಈ ಮಹಾನ್ ವ್ಯಕ್ತಿಯ ಕೈಯಲ್ಲಿತ್ತು. ಅವರು ದೊಡ್ಡ ಚಾಣಕ್ಯ .ಇಂಥ ವ್ಯಕ್ತಿಯ ಸಾವು ದೊಡ್ಡ ದುರಂತ ಎಂದು ಅಭಿಪ್ರಾಯಪಟ್ಟರು.