Connect with us


      




ಅಪರಾಧ

ಜೆಎನ್‌ಯು ; ಅರಣ್ಯ ಪ್ರದೇಶದಲ್ಲಿ ಕೊಳೆತ ಶವ ಪತ್ತೆ

Kumara Raitha

Published

on

ನವದೆಹಲಿ: ಜೂನ್‌ ೦೪ (ಯು.ಎನ್.‌ಐ.) ಜವಾಹರ್‌ ಲಾಲ್‌ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಆವರಣದಲ್ಲಿನ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಶವ ಪೂರ್ಣ ಕೊಳೆತಿದೆ. ಯಾರದು ಎಂಬುದು ಪತ್ತೆಯಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಅಪರಾಧ ಮತ್ತು ವಿಧಿವಿಜ್ಞಾನ ತಂಡದಿಂದ  ಪರಿಶೀಲನೆ ನಡೆದಿದೆ. ೪೦ ರಿಂದ ೪೫ ವರ್ಷ ವಯಸ್ಸಿನ ಮಹಿಳೆ ಶವ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ವಿಚಾರಣೆ ಪ್ರಕ್ರಿಯೆ ಆರಂಭಿಸಲಾಗಿದೆ. “ದೇಹವು ಜೆಎನ್‌ಯುನ ಯಾರದ್ದೂ ಅಲ್ಲ ಎಂದು ತೋರುತ್ತದೆ. ಯಮುನಾ ಹಾಸ್ಟೆಲ್ ಬಳಿಯ ಕಾಡಿನಲ್ಲಿ ಶವ ಪತ್ತೆಯಾಗಿದೆ. ಒಂದೆರಡು ವಿದ್ಯಾರ್ಥಿಗಳು ಕಾಡಿನಲ್ಲಿ ಸುತ್ತಾಡಲು ಹೋಗಿದ್ದರು, ಅಲ್ಲಿ ಅವರು ದುರ್ವಾಸನೆ ಬಂದ ಕಾರಣ ಅಧಿಕಾರಿಗಳಿಗೆ ತಿಳಿಸಿದರು ಎಂದು ವಿಶ್ವವಿದ್ಯಾನಿಲಯದ ಮೂಲಗಳು ಹೇಳಿವೆ.

Share