Connect with us


      




ದೇಶ

ಮನೀಶ್ ಸಿಸೋಡಿಯಾ ಮಂಡಿಸಿದ ‘ಉದ್ಯೋಗ ಬಜೆಟ್’;ಎಷ್ಟು ಲಕ್ಷ ಮಂದಿಗೆ ಉದ್ಯೋಗ ಭರವಸೆ? ಇಲ್ಲಿದೆ ಮಾಹಿತಿ

Vanitha Jain

Published

on

ಲಕ್ನೋ: ಮಾರ್ಚ್ 26 (ಯು.ಎನ್.ಐ.) ದೆಹಲಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಮನೀಶ್ ಸಿಸೋಡಿಯಾ ಅವರು ಮಾರ್ಚ್ 26 ರ ಶನಿವಾರ ದೆಹಲಿ ಅಸೆಂಬ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಎಂಟನೇ ಬಜೆಟ್ ಅನ್ನು ಮಂಡಿಸಿದರು.

ಮನೀಶ್ ಸಿಸೋಡಿಯಾ ಅವರು 2022-23 ನೇ ಸಾಲಿಗೆ 75,800 ಕೋಟಿ ರೂಪಾಯಿಗಳ ಬಜೆಟ್ ಆಗಿದ್ದು, ಇದು 2014-15ರಲ್ಲಿ 30,940 ಕೋಟಿ ರೂ.ಗಳಿದ್ದ ಬಜೆಟ್ ಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ.

ದೆಹಲಿಯ ಈ ವರ್ಷದ ಬಜೆಟ್ ಅನ್ನು ಸಿಸೋಡಿಯಾ ‘ಉದ್ಯೋಗ ಬಜೆಟ್’ ಎಂದು ಬಣ್ಣಿಸಿದ್ದಾರೆ. ಅಸೆಂಬ್ಲಿಯಲ್ಲಿ, ಮನೀಶ್ ಸಿಸೋಡಿಯಾ ಅವರು, “ನಾವು ಮಂಡಿಸುತ್ತಿರುವ ಎಂಟನೇ ಬಜೆಟ್ ಇದು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಏಳು ಬಜೆಟ್ ಗಳು ದೆಹಲಿ ಶಾಲೆಗಳನ್ನು ಉತ್ತಮಗೊಳಿಸಿವೆ, ಎಲ್ಲರಿಗೂ ವಿದ್ಯುತ್ ಸೌಲಭ್ಯ ಕಲ್ಪಿಸಿವೆ. ವಿದ್ಯುತ್ ಬಿಲ್‌ಗಳು ಕಡಿಮೆಯಾಗಿವೆ ಮತ್ತು ಮೆಟ್ರೋವನ್ನು ವಿಸ್ತರಿಸಲಾಗಿದೆ ಎಂದು ವಿವರಣೆ ನೀಡಿದರು.

ಹಿಂದಿನ ಸರ್ಕಾರಗಳು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ವಿಫಲವಾಗಿವೆ. ಆದರೆ ಎಎಪಿ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ಎಎಪಿ ಸರ್ಕಾರ 1 ಲಕ್ಷದ 78 ಸಾವಿರ ಯುವಕರಿಗೆ ಖಾಯಂ ಉದ್ಯೋಗ ನೀಡಿದೆ ಎಂದು ಹೇಳಿದರು. ಬಜೆಟ್ ಅಧಿವೇಶನದಲ್ಲಿ ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಕೂಡ ವಿಧಾನಸಭೆಯಲ್ಲಿ ಉಪಸ್ಥಿತರಿದ್ದರು.

5 ವರ್ಷಗಳಲ್ಲಿ 20 ಲಕ್ಷ ಮಂದಿಗೆ ಉದ್ಯೋಗವಕಾಶ; ವಲಯಗಳಲ್ಲಿ ಹೊಸ ಉದ್ಯೋಗಗಳ ರಚನೆ

– ಚಿಲ್ಲರೆ ವಲಯ
– ಆಹಾರ ಮತ್ತು ಪಾನೀಯಗಳು
– ಲಾಜಿಸ್ಟಿಕ್ ಮತ್ತು ಸರಬರಾಜು ಸರಪಳಿ
– ಪ್ರಯಾಣ ಮತ್ತು ಪ್ರವಾಸೋದ್ಯಮ
– ಮನರಂಜನೆ
– ನಿರ್ಮಾಣ
– ರಿಯಲ್ ಎಸ್ಟೇಟ್
– ಹಸಿರು ಶಕ್ತಿ (ಗ್ರೀನ್ ಎನರ್ಜಿ)

2022-23 ಕ್ಕೆ ಸಿಸೋಡಿಯಾ 75,800 ಕೋಟಿ ರೂ. ಬಜೆಟ್ ಅನ್ನು ಪ್ರಸ್ತುತಪಡಿಸಿದರು. 2021-22ನೇ ಹಣಕಾಸು ವರ್ಷದ ಬಜೆಟ್ ಗಾತ್ರ 69,000 ಕೋಟಿ ರೂ. 2022-23ರ ಬಜೆಟ್ ಗಾತ್ರವು ಹಿಂದಿನ ವರ್ಷಕ್ಕಿಂತ 9.86 ಶೇಕಡಾ ಹೆಚ್ಚಾಗಿದೆ. ಇದು ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಎಂಟನೇ ಸತತ ಬಜೆಟ್ ಆಗಿದೆ. 2022-23ರ ಬಜೆಟ್ “ರೋಜ್ಗಾರ್ ಬಜೆಟ್” ಎಂದು ಸಿಸೋಡಿಯಾ ಹೇಳಿದ್ದಾರೆ. ದೆಹಲಿಯ ತಲಾ ಆದಾಯವು ರಾಷ್ಟ್ರೀಯ ಸರಾಸರಿಗಿಂತ ಶೇಕಡಾ 2.7 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಆರೋಗ್ಯ ಕಾರ್ಡ್

ದೆಹಲಿ ನಿವಾಸಿಗಳಿಗೆ ಆರೋಗ್ಯ ಕಾರ್ಡ್ ನೀಡಲಾಗುವುದು. ಇದನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡಲಾಗುತ್ತದೆ. ಈ ಯೋಜನೆಗೆ 160 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಸಿಸೋಡಿಯಾ ಹೇಳಿದರು. ವಂಶ ವೃಕ್ಷ, ಆರೋಗ್ಯ ಇತಿಹಾಸವನ್ನು ಆರೋಗ್ಯ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ಇದು ದೆಹಲಿ ನಿವಾಸಿಗಳಿಗೆ ಉತ್ತಮ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ.

Share