Connect with us


      
ದೇಶ

ಒಬ್ಬಂಟಿ ತಾಯಿ ಮಕ್ಕಳು ತಾಯಿಯ ಜಾತಿ ಪ್ರಮಾಣ ಪತ್ರ ಆಧರಿಸಿ ಜಾತಿ ಪ್ರಮಾಣ ಪತ್ರ ಪಡೆಯಬಹುದು!

Vanitha Jain

Published

on

ನವದೆಹಲಿ: ಜನೆವರಿ 06(ಯು.ಎನ್.ಐ.) ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಒಬ್ಬಂಟಿ ತಾಯಿಯ ಜಾತಿ ಪ್ರಮಾಣ ಪತ್ರದ ಮೇಲೆ ನೀಡಲಾದ ಮೊದಲ ಜಾತಿ ಪ್ರಮಾಣಪತ್ರವನ್ನು ಒಂಟಿ ತಾಯಿಯ ಮಗುವಿಗೆ ಹಸ್ತಾಂತರಿಸಿದರು.

ದೆಹಲಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಒಂಟಿ ತಾಯಿಯ ಮಗು ತನ್ನ ತಾಯಿಯ ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಜಾತಿ ಪ್ರಮಾಣಪತ್ರವನ್ನು ಪಡೆದಿರುವುದು ಇದೇ ಮೊದಲು. ಈ ಮಾದರಿಯಲ್ಲಿ ಮೊದಲ ಜಾತಿ ಪ್ರಮಾಣ ಪತ್ರ ಪಡೆದ ತಾಯಿಯೇ ಗೀತಾದೇವಿ. ಕಳೆದ ಎಂಟು ವರ್ಷಗಳ ನಂತರ ಕೊನೆಗೂ ಜಾತಿಪ್ರಮಾಣ ಪತ್ರ ಲಭ್ಯವಾಗಿದೆ.

ದೆಹಲಿ ಸರ್ಕಾರದ ಪ್ರಕಾರ, ಈ ಹಿಂದೆ, ಎಸ್ ಸಿ/ಎಸ್ ಟಿ ಜಾತಿ ಪ್ರಮಾಣಪತ್ರಗಳನ್ನು ತಂದೆಯ ಜಾತಿ ಪ್ರಮಾಣಪತ್ರ ಅಥವಾ ತಂದೆಯ ಕಡೆಯ ಪ್ರಮಾಣಪತ್ರಗಳನ್ನು ಆಧರಿಸಿ ಮಾತ್ರ ನೀಡಲಾಗುತ್ತಿತ್ತು. ಇದರಿಂದಾಗಿ ಅನೇಕ ಒಂಟಿ ತಾಯಂದಿರು ತಮ್ಮ ಮಕ್ಕಳಿಗೆ ಎಸ್ ಸಿ/ಎಸ್ ಟಿ ಜಾತಿ ಪ್ರಮಾಣಪತ್ರಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ.

ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ವಿಶೇಷ್ ರವಿ ಅವರು ದೆಹಲಿಯ ಎಸ್‍ಸಿ/ಎಸ್‍ಟಿ ಕಲ್ಯಾಣಕ್ಕಾಗಿ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಇಲಾಖೆಯೊಂದಿಗೆ ಈ ವಿಷಯವನ್ನು ಚರ್ಚಿಸಿದರು. ಕಂದಾಯ ಇಲಾಖೆ ಅಧಿಕಾರಿಗಳಿಗೆ ಸರಣಿ ಪತ್ರ ಬರೆದು ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿ ಕೊನೆಗೂ ಈ ನಿರ್ಧಾರಕ್ಕೆ ಬರಲಾಯಿತು.

2020ರಲ್ಲಿ ಒಂಟಿ ಎಸ್‍ಸಿ/ಎಸ್‍ಟಿ ತಾಯಂದಿರ ನೋವನ್ನು ಎತ್ತಿ ಹಿಡಿದ ಅವರು ದೆಹಲಿ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಒಂಟಿ ತಾಯಿಯ ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಎಸ್‍ಸಿ/ಎಸ್‍ಟಿ ಜಾತಿ ಪ್ರಮಾಣಪತ್ರ ನೀಡುವ ವಿಧಾನವನ್ನು ತಿದ್ದುಪಡಿ ಮಾಡುವ ಸುತ್ತೋಲೆಯನ್ನು ಜುಲೈ, 2020, ಜಿಎನ್‍ಟಿಯು ದೆಹಲಿಯ ಕಂದಾಯ ಸಚಿವರ ಪೂರ್ವಾನುಮತಿಯೊಂದಿಗೆ ನೀಡಿತು.

Share