Published
6 days agoon
ನವದೆಹಲಿ: ಮೇ ೧೪ (ಯು.ಎನ್.ಐ.) ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿಯ ಕಟ್ಟಡ ಬೆಂಕಿ ದುರಂತದಲ್ಲಿ ೨೭ ಮಂದಿ ಸಾವನ್ನಪ್ಪಿದ್ದು, ೧೯ ಮಂದಿ ಕಾಣೆಯಾಗಿದ್ದಾರೆ.
ಈಗಾಗಲೇ ದೆಹಲಿ ಪೊಲೀಸರು ಬೆಂಕಿ ದುರಂತಕ್ಕೀಡಾದ ವಾಣಿಜ್ಯ ಕಟ್ಟದದ ಮಾಲೀಕರಾದ ವರುಣ್ ಗೋಯಲ್ ಮತ್ತು ಸತೀಶ್ ಗೋಯಲ್ ಅವರುಗಳನ್ನು ಅಪರಾಧಿ ನರಹತ್ಯೆಯ ಆರೋಪದ ಮೇಲೆ ಬಂಧಿಸಿದ್ದಾರೆ. ಇವರ ತಂದೆ ಅಮರನಾಥ್ ಗೋಯೆಲ್ ಸಹ ಬೆಂಕಿಯಲ್ಲಿ ಸಿಲುಕಿ ಮೃತರಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ಬಂದಿದ್ದರು ಎನ್ನಲಾಗಿದೆ.
ಬೆಂಕಿ ದುರಂತಕ್ಕೀಡಾದ ಕಟ್ಟಡದಿಂದ ೫೦ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಘಟನಾ ಸ್ಥಳಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿದ್ದಾರೆ. ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ತಲಾ ೨ ಲಕ್ಷ ರೂಪಾಯಿ ತುರ್ತು ಪರಿಹಾರ ಘೋಷಿಸಿದ್ದಾರೆ.
ಬೆಂಕಿ ದುರಂತಕ್ಕೀಡಾದ ಕಟ್ಟಡದ ಒಳಗೆ ಮೇಲ್ನೋಟ್ಟಕ್ಕೆ ಗುರುತು ಸಹ ಸಿಗಲಾರದಷ್ಟು ಸುಟ್ಟು ಹೋಗಿರುವ ಶವಗಳು ಪತ್ತೆಯಾಗಿವೆ. ಇವುಗಳು ನಿಖರವಾಗಿ ಯಾವಯಾವ ವ್ಯಕ್ತಿಗಳ ದೇಹದ ಅವಶೇಷಗಳೆಂದು ಪತ್ತೆಹಚ್ಚಲು ವಿಧಿವಿಜ್ಞಾನ ತಂಡದ ತಜ್ಞರು ಡಿಎನ್ಎ ಪರೀಕ್ಷೆ ನಡೆಸಲಿದ್ದಾರೆ ಎನ್ನಲಾಗಿದೆ.
ಗಾಯಾಳುಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಕಟ್ಟಡದ ಒಳಗೆ ಇನ್ನೂ ಶೋಧ ಕಾರ್ಯಾಚರಣೆ ಮುಂದುರಿದಿದೆ. ಇದರಿಂದ ದುರಂತದಲ್ಲಿ ಮೃತಪಟ್ಟ ಇನ್ನೂ ಕೆಲವಾರು ವ್ಯಕ್ತಿಗಳ ಶವಗಳು ಪತ್ತೆಯಾಗಬಹುದು ಎಂದು ಹೇಳಲಾಗಿದೆ. ಪೊಲೀಸರು ಈಗಾಗಲೇ ಎಫ್ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ ೩೦೪, ೩೦೮, ೧೨೦, ೩೪ರ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಮಧ್ಯ, ಪೂರ್ವ ಯುರೋಪ್ನಲ್ಲಿ ಮಾನವ ಕಳ್ಳಸಾಗಣೆ ಗ್ಯಾಂಗ್ ಪತ್ತೆ
ಕಸ್ಟಡಿ ಸಾವು: 6 ಪೊಲೀಸರ ಬಂಧನ
ತೆಲಂಗಾಣದಲ್ಲಿ ಮರ್ಯಾದೆಗೇಡು ಹತ್ಯೆ ಕೇಸ್; ಅಪರಾಧಿಗಳ ಪರ ನಿಲ್ಲುವುದಿಲ್ಲ ಎಂದ ಓವೈಸಿ
ಆನೆಬೇಟೆ ಪ್ರಕರಣಗಳು; ತನಿಖಾ ತಂಡ ರಚಿಸಿದ ಮದ್ರಾಸ್ ಹೈಕೋರ್ಟ್
‘ಘೋಸ್ಟ್ ಗನ್’ಗಳ ನಿಯಂತ್ರಣಕ್ಕೆ ನೂತನ ಎಟಿಎಫ್ ಮುಖ್ಯಸ್ಥರ ನೇಮಕ; ಬಿಡೆನ್ ಕ್ರಮ
ಬೆಂಗಳೂರು ಚೂರಿ ಇರಿತ: ಮೂವರು ಆರೋಪಿಗಳ ಬಂಧನ