Connect with us


      
ದೇಶ

ಯಮುನಾ ನದಿಯಲ್ಲಿ ಅಮೋನಿಯಾ ಮಾಲಿನ್ಯ: ನೀರು ಪೂರೈಕೆಯಲ್ಲಿ ವ್ಯತ್ಯಯ

Bindushree Hosuru

Published

on

ನವದೆಹಲಿ: ನ. 7 (ಯುಎನ್ಐ) ಯಮುನಾ ನದಿಯಲ್ಲಿ ಅಮೋನಿಯಾ ಮಾಲಿನ್ಯದ ಪ್ರಮಾಣ ಹೆಚ್ಚಾದ ಹಿನ್ನೆಲೆ ದೆಹಲಿಯ ಹಲವು ಭಾಗಗಳಲ್ಲಿ ಭಾನುವಾರ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಸೋನಿಯಾ ವಿಹಾರ್, ಭಾಗೀರಥಿ, ವಜೀರಾಬಾದ್, ಚಂದ್ರವಾಲ್ ಮತ್ತು ಓಖ್ಲಾ ಡಬ್ಲ್ಯುಟಿಪಿಗಳಿಂದ ನೀರನ್ನು ಸಂಸ್ಕರಿಸುವುದರ ಮತ್ತು ಪಂಪ್ ಮಾಡುವುದರ ಮೇಲೆ ಇದು ಪರಿಣಾಮ ಬೀರಿದೆ ಎಂದು ದೆಹಲಿ ಜಲ ಮಂಡಳಿ (ಡಿಜೆಬಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ದೆಹಲಿಯಾದ್ಯಂತ ನೀರಿನ ಕೊರತೆಯನ್ನು ನೀಗಿಸಲು ಡಿಜೆಬಿ ಕ್ರಮಗಳನ್ನು ಕೈಗೊಂಡಿದೆ ಎಂದು ಮಂಡಳಿಯು ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ರಾತ್ರಿಯಿಂದ ನೀರು ಸರಬರಾಜು ಮಾಡಲಾಗಿಲ್ಲ. ನಾವು ನೀರನ್ನು ಸಂಗ್ರಹಿಸಿ ಇಟ್ಟುಕೊಂಡಿಲ್ಲ. ನೀರು ಯಾವಾಗ ಪೂರೈಕೆಯಾಗುತ್ತದೆ ಎಂಬುದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಕಟ್ವಾರಿಯಾ ಸರೈ ನಿವಾಸಿ ನರೇಂದರ್ ಹೇಳಿದ್ದಾರೆ

“ನಮಗೆ ನಿನ್ನೆಯಿಂದ ನೀರು ಪೂರೈಕೆ ಇಲ್ಲ. ಅಲ್ಲದೇ ಈ ರೀತಿ ಪ್ರತಿ 2 ತಿಂಗಳಿಗೊಮ್ಮೆ ಸಂಭವಿಸುತ್ತದೆ. ಟ್ಯಾಪ್ ನೀರು ಹಳದಿಯಾಗಿರುತ್ತದೆ. ಆದ್ದರಿಂದ ನಾವು ಅಂಗಡಿಗಳಿಂದ ನೀರನ್ನು ಖರೀದಿಸಬೇಕಾಗಿದೆ” ಎಂದು ಯಮುನಾ ವಿಹಾರ್ ನಿವಾಸಿ ನೀತಿ ವರ್ಮಾ ಹೇಳಿದ್ದಾರೆ.

ಪೂರ್ವ ದೆಹಲಿ, ಈಶಾನ್ಯ ದೆಹಲಿ, ದಕ್ಷಿಣ ದೆಹಲಿ, ಮಾಳವೀಯ ನಗರ. ಸಾಕೇತ್, ಪುಷ್ಪ್ ವಿಹಾರ್, ಕತ್ವಾರಿಯಾ ಸರೈ, ಲಾಡೋ ಸರೈ, ಖಿರ್ಕಿ, ಸೈದುಲಾಜಾಬ್, ಗೋಕುಲ್‌ಪುರಿ, ಸೋನಿಯಾ ವಿಹಾರ್, ಬಾಬರ್‌ಪುರ್, ತಾಹಿರ್‌ಪುರ್, ದಿಲ್ಶಾದ್ ಗಾರ್ಡನ್, ನಂದನಗರಿ, ಶಾಹದಾರ, ಲಕ್ಷ್ಮಿ ನಗರ, ಚಿತ್ರ ವಿಹಾರ್, ಗೀತಾ ಕಾಲೋನಿ, ನ್ಯೂ ಕೊರೋಲಿ, ಮಯೂರ್ ವಿಹಾರ್ ಪ್ರದೇಶ, , ದಲ್ಲುಪುರ, ತ್ರಿಲೋಕಪುರಿ, ಸೂರಜ್ಮಲ್ ವಿಹಾರ್, ಕಾಂತಿ ನಗರ, ಯಮುನಾ ವಿಹಾರ್, ಕರವಾಲ್ ನಗರ ಇನ್ನೂ ಇತರ ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾಗಿದೆ.

Continue Reading
Share