Connect with us


      




ದೇಶ

ಪರಿಚಯವಿರುವ ವ್ಯಕ್ತಿಯಿಂದಲೇ ಮಹಿಳೆಯ ಕೊಲೆ; ಬೆಚ್ಚಿಬಿದ್ದ ಜನತೆ

Vanitha Jain

Published

on

ನವದೆಹಲಿ: ಏಪ್ರಿಲ್ 22 (ಯು.ಎನ್.ಐ.) 24 ವರ್ಷದ ಮಹಿಳೆಯೊಬ್ಬರು ಆಕೆಯ ಪರಿಚಯವಿರುವ ವ್ಯಕ್ತಿಯಿಂದಲೇ ಅವಳ ಮಕ್ಕಳ ಎದುರು ಹತ್ಯೆಯಾದ ಘಟನೆ ನೈಋತ್ಯ ದೆಹಲಿಯಲ್ಲಿ ನಡೆದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

ಮೃತ ಮಹಿಳೆಯನ್ನು ಆರತಿ ಎಂದು ತಿಳಿದು ಬಂದಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಪರಾರಿಯಾಗಿರುವ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಮಹಿಳೆಯೊಬ್ಬರು ಹತ್ಯೆಯಾಗಿರುವ ಬಗ್ಗೆ ಎಂದು ಮಧ್ಯಾಹ್ನ 2:00 ಗಂಟೆಗೆ ಸಾಗರ್ ಪುರ್ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿತು. ನಾವು ತಕ್ಷಣ ಸ್ಥಳಕ್ಕೆ ತಲುಪಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದರು.

ಪ್ರಾಥಮಿಕ ತನಿಖೆಯ ಪ್ರಕಾರ ಮಹಿಳೆ ಮತ್ತು ಆರೋಪಿಗಳು ಮತ್ತು ಮಹಿಳೆಯು ಈ ಹಿಂದೆ ನೆಲೆಸಿದ್ದ ಸ್ಋಳದಲ್ಲಿ ನೆರೆಹೊರೆಯವರಾಗಿದ್ದರು. ಆದರೆ, ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಯನ್ನು ಗುರುತಿಸಿ, ಪತ್ತೆ ಹಚ್ಚಿ ಬಂಧಿಸಲು ತಂಡ ರಚಿಸಲಾಗಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share