Published
6 months agoon
ನಿಕೋಸಿಯಾ : ಜನೆವರಿ 09 (ಯು.ಎನ್.ಐ.) ಕೊರೊನಾ ವೈರಸ್ನ ಒಮೈಕ್ರಾನ್ ರೂಪಾಂತರಿ ಬಳಿಕ ಈಗ ಡೆಲ್ಟಾಕ್ರಾನ್ ಹೊಸ ತಳಿ ಪತ್ತೆಯಾಗಿದೆ. ಮಧ್ಯಪ್ರಾಚ್ಯ ದೇಶವಾದ ಸೈಪ್ರಸ್ನಲ್ಲಿ ‘ಡೆಲ್ಟಾಕ್ರಾನ್’ ಕಂಡುಬಂದಿದ್ದು, ಇದು ಒಮೈಕ್ರಾನ್ ಮತ್ತು ಡೆಲ್ಟಾದ ಮಿಶ್ರ ರೂಪ ಎಂದು ಹೇಳಲಾಗುತ್ತಿದೆ.
ಪತ್ತೆಯಾಗಿರುವ ಹೊಸ ತಳಿಯ ಜೆನಿಟಿಕ್ ಹಿನ್ನೆಲೆ ಡೆಲ್ಟಾ ರೂಪಾಂತರದಂತೆಯೇ ಇದ್ದು, ಒಮೈಕ್ರಾನ್ನ ಕೆಲವು ಮ್ಯುಟೇಷನ್ ಗಳು ಅದರಲ್ಲಿ ಕಂಡುಬಂದಿವೆ. ಆದರೆ, ಸದ್ಯಕ್ಕೆ ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ. ಸೈಪ್ರಸ್ನಲ್ಲಿ ತೆಗೆದ 25 ಮಾದರಿಗಳಲ್ಲಿ ಒಮೈಕ್ರಾನ್ನ 10 ರೂಪಾಂತರಗಳು ಕಂಡುಬಂದಿವೆ. ಈ ಮಾದರಿಗಳಲ್ಲಿ 11 ಮಂದಿ ವೈರಸ್ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನುಳಿದ 14 ಮಾದರಿಗಳು ಸಾಮಾನ್ಯ ಜನರಿಂದ ಪಡೆಯಲಾಗಿತ್ತು ಎಂದು ಯರುಶೆಲಮ್ ಪೋಸ್ಟ್, ಸೈಪ್ರಸ್ ಮೇಲ್ ಅನ್ನು ಉಲ್ಲೇಖಿಸಿ ವರದಿ ಮಾಡಿದೆ.
ಸೈಪ್ರಸ್ ವಿಶ್ವವಿದ್ಯಾನಿಲಯದ ಬಯೋಟೆಕ್ನಾಲಜಿ ಮತ್ತು ಮಾಲಿಕ್ಯುಲರ್ ವೈರಾಲಜಿ ಲ್ಯಾಬ್ನ ಮುಖ್ಯಸ್ಥ ಡಾ. ಲಿಯೊಂಡಿಯೋಸ್ ಕೊಸ್ಟ್ರಿಯಾಕಿಸ್, ಈ ರೂಪಾಂತರವು ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಹೆಚ್ಚಿನ ಪರಿಣಾಮ ತೋರಿಸಿದೆ. ಈ ಹೊಸ ರೂಪಾಂತರದ ಜೆನಿಟಿಕ್ ಹಿನ್ನೆಲೆ ಡೆಲ್ಟಾದಂತೆಯೇ ಇದೆ ಎಂದು ಒತ್ತಿ ಹೇಳಿದ ಅವರು, ಇದರೊಂದಿಗೆ ಒಮೈಕ್ರಾನ್ ನ ಕೆಲವು ರೂಪಾಂತರಗಳು ಸಹ ಅದರಲ್ಲಿ ಕಂಡುಬಂದಿವೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಸೈಪ್ರಸ್ ದೇಶದ ಆರೋಗ್ಯ ಸಚಿವ ಮಿಚಾಲಿಸ್ ಹಾಜಿಪಾಂಡೆಲಾಸ್ ಅವರು, ಹೊಸ ರೂಪಾಂತರಿ ಸದ್ಯಕ್ಕೆ ಆತಂಕಕ್ಕೆ ಕಾರಣವಲ್ಲ ಎಂದು ಹೇಳಿದ್ದಾರೆ.
ಹೊಸ ರೂಪಾಂತರಿಯನ್ನು ಆವಿಷ್ಕಾರ ಮಾಡಿದ ವಿಜ್ಞಾನಿಗಳ ಬಗ್ಗೆ ಸಚಿವರು ಈ ವೇಳೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಆದರೆ, ಈ ಹೊಸ ರೂಪಾಂತರದ ವೈಜ್ಞಾನಿಕ ಹೆಸರನ್ನು ಇನ್ನೂ ಘೋಷಣೆ ಮಾಡಿಲ್ಲ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೂ ಯಾವುದೇ ಎಚ್ಚರಿಕೆಯನ್ನೂ ನೀಡಿಲ್ಲ.
ಇಂಗ್ಲೆಂಡ್ನ ಮುಂದಿನ ಪ್ರಧಾನಿ ಸುಧಾಮೂರ್ತಿ ಅಳಿಯ!?
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ
ಇಂದು ರಾಜೀನಾಮೆ ನೀಡಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ನ್ಯಾಟೊ ಅಲ್ಲದ ಪ್ರಮುಖ ಮಿತ್ರ ರಾಷ್ಟ್ರವಾಗಿ ಅಫ್ಘಾನಿಸ್ತಾನದ ಸ್ಥಾನಮಾನವನ್ನು ರದ್ದುಗೊಳಿಸಲು ಬಿಡೆನ್ ಪತ್ರ
ಇರಾನ್ ಬೆದರಿಕೆ ವಿರುದ್ಧ ಇಸ್ರೇಲ್ಗೆ ಯುಎಸ್ ಬೆಂಬಲ
ಇಟಲಿಯಲ್ಲಿ ಹಿಮನದಿ ಕುಸಿತ: ಸಾವಿನ ಸಂಖ್ಯೆ 9ಕ್ಕೆ ಏರಿಕೆ