Connect with us


      




ದೇಶ

ಮೊದಲು ಕೇಂದ್ರ ಗೃಹಸಚಿವರ ಮನೆ ಮೇಲೆ ‘ಬುಲ್ಡೋಜರ್’ ಓಡಿಸಿ: ವಿಪಕ್ಷಗಳ ವಾಗ್ದಾಳಿ

Lakshmi Vijaya

Published

on

ನವದೆಹಲಿ: ಏಪ್ರಿಲ್ 20 (ಯು.ಎನ್.ಐ.) ಹನುಮಜಯಂತಿ ಮೆರವಣಿಗೆ ವೇಳೆ ನವದೆಹಲಿಯ ಜಹಾಂಗೀರ್ ಪುರಿಯಲ್ಲಿ ಹಿಂಸಾಚಾರ ಘಟನೆ ಬೆನ್ನಲ್ಲೇ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗಿಳಿದ ಬಿಜೆಪಿ ಆಡಳಿತದ ಕ್ರಮವನ್ನ ವಿಪಕ್ಷಗಳು ಕಟುವಾಗಿ ಟೀಕಿಸಿವೆ.

 “ದ್ವೇಷದ ಬುಲ್ಡೋಜರ್” ಅನ್ನು ಸ್ವಿಚ್ ಆಫ್ ಮಾಡುವಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ,  ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರೆ, ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ಗೃಹ ಸಚಿವ ಅಮಿತ್ ಶಾ ಕೋಮುಗಲಭೆಗಳನ್ನು ರೂಪಿಸುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿ, ಮೊದಲು ಅವರ ಮನೆಯನ್ನು ಕೆಡವುವಂತೆ ಗುಡುಗಿದರು.

“ಗೃಹ ಸಚಿವರೇ ಈ ಗಲಭೆಗಳನ್ನು ರೂಪಿಸುತ್ತಿದ್ದಾರೆ. ನೀವು ಬುಲ್ಡೋಜರ್ ಅನ್ನು ಬಳಸಲು ಬಯಸಿದರೆ, ಗೃಹ ಸಚಿವರ ಮನೆಯನ್ನು ಕೆಡವಲು ಅದನ್ನು ಬಳಸಿ. ಆಗ ಗಲಭೆಗಳು ನಿಲ್ಲುತ್ತವೆ” ಎಂದು ಎಎಪಿ ನಾಯಕ ರಾಘವ್ ಚಡ್ಡಾ ಹೇಳಿದರು.

ನಗರಸಭೆಯಲ್ಲಿ 15 ವರ್ಷಗಳ ಕಾಲ ಬಿಜೆಪಿ ಆಡಳಿತ ನಡೆಸಿದ್ದು, ಅವರ ನಾಯಕರು ಲಂಚ ಪಡೆದು ಅಕ್ರಮ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಂದು ಈ ಅಕ್ರಮ ಕಟ್ಟಡಗಳನ್ನು ಕೆಡವಲು ಹೊರಟಿರುವ ಅವರು, ಲಂಚ ಪಡೆದ ಬಿಜೆಪಿ ಮುಖಂಡರ ಮನೆಗಳನ್ನೂ ಕೆಡವಬೇಕು ಎಂದು ಎಎಪಿಯ ರಾಘವ್ ಚಡ್ಡಾ ಒತ್ತಾಯಿಸಿದರು.

ದೇಶಾದ್ಯಂತ ಕಲ್ಲಿದ್ದಲು ಕೊರತೆಯ ಬಗ್ಗೆ ರಾಹುಲ್ ಗಾಂಧಿ ಪ್ರಸ್ತಾಪಿಸುತ್ತಾ,  “ದ್ವೇಷದ ಬುಲ್ಡೋಜರ್‌ಗಳನ್ನು ಆಫ್ ಮಾಡಿ ಮತ್ತು ವಿದ್ಯುತ್ ಸ್ಥಾವರಗಳನ್ನು ಆನ್ ಮಾಡಿ” ಎಂದು ಪ್ರಧಾನಿ ಮೋದಿ ಅವರಿಗೆ ಟ್ವಿಟರ್ ನಲ್ಲಿ ತಿರುಗೇಟು ನೀಡಿದ್ದಾರೆ.

Share