Connect with us


      
ರಾಜಕೀಯ

ನಾರಾಯಣಗುರು ಟ್ಯಾಬ್ಲೋಗೆ ನಿರಾಕರಣೆ; ಕಾಂಗ್ರೆಸ್‌ ಆಕ್ರೋಶ

Kumara Raitha

Published

on

ಬೆಂಗಳೂರು: ಜನೆವರಿ ೨೬ (ಯು.ಎನ್.‌ಐ.) ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ನಾರಾಯಣ ಗುರು ಟ್ಯಾಬ್ಲೋಗೆ ಅವಕಾಶ ನಿರಾಕರಣೆಯಾಗಿರುವುದಕ್ಕೆ ರಾಜ್ಯ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಪಕ್ಷದ ನಾಯಕರು ಹೇಳಿಕೆ ನೀಡಿದ್ದಾರೆ.

ನಾರಾಯಣಗುರು ಒಬ್ಬ ದಾರ್ಶನಿಕರು. ಕೇರಳದಲ್ಲಿ ಜಾತೀಯತೆ ಹೆಚ್ಚಿತ್ತು. ನಂಬೂದರಿಗಳ ದೌರ್ಜನ್ಯ ಹೆಚ್ಚಾಗಿತ್ತು. ಕೆಳಗಿನವರನ್ನು ಅಸ್ಪೃಶ್ಯರ  ರೀತಿ ನೋಡ್ತಿದ್ರು. ಗುರುಗಳು ಇದರ ವಿರುದ್ಧ ಚಳುವಳಿ ಆರಂಭಿಸಿದ್ರು. ಮನುಷ್ಯರೆಲ್ಲ ಒಂದೇ ದೇವರು ಒಬ್ಬನೇ ಎಂದ್ರು. ನೀವೇ ದೇಗುಲ ಕಟ್ಟಿ ಪೂಜೆ ಮಾಡಿ ಎಂದ ಇದ್ದರು. ಜನರಲ್ಲಿ ಜಾಗೃತಿ ಮೂಡಿಸಿದ್ದವರು. ಅಂತಹ ವ್ಯಕ್ತಿ ಟ್ಯಾಬ್ಲೋವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಪೆರೇಡ್ ನಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಅಕ್ಷಮ್ಯ ಅಪರಾಧ ವೆಸಗಿದೆ. ಜನರು ಇವತ್ತು ಪ್ರತಿಭಟನೆ ನಡೆಸ್ತಿದ್ದಾರೆ. ಅವರಿಗೆ ನೋವಾಗಿದೆ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ  ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ನಾವು ಬಿಟ್ಟು ಹೋದವರನ್ನ ಸೇರಿಸಿಕೊಳ್ತೇವೆಂದು ಎಲ್ಲಿ ಹೇಳಿದ್ದೇವೆ ? ಕಾಂಗ್ರೆಸ್ ಸಿದ್ಧಾಂತ ಒಪ್ಪಿಬಂದವರಿಗೆ ಸ್ವಾಗತ. ಇದನ್ನೇ ನಾನೂ ಹೇಳಿದ್ದೇನೆ. ಕಾಂಗ್ರೆಸ್ ಬಿಟ್ಟವರನ್ನ ಸೇರಿಸಿಕೊಳ್ಳಲ್ಲ. ಅಸೆಂಬ್ಲಿಯಲ್ಲೇ ನಾನು ಈ ಬಗ್ಗೆ ಹೇಳಿದ್ದೇನೆ. ನಾನು ನಾನಾಗಿ ಯಾರ ಜೊತೆ ಮಾತನಾಡಲ್ಲ. ಅವರಾಗಿ ಬಂದರೆ ಮಾತ್ರ ಮಾತನಾಡ್ತೇನೆ. ನಾನು ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ. ಅವರ ಹೇಳಿಕೆಗೆ ಮಾತನಾಡಲ್ಲ. ನೋ ನೋ ನಾನು ಮಾತನಾಡಲ್ಲ ಎಂದು ಪುನರುಚ್ಛರಿಸಿದರು.

ವಿಧಾನಸಭೆ ಚುನಾವಣೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,  ನನಗೆ ಎಲ್ಲ ಕಡೆ ನಿಲ್ಲಿ ಅಂತಾರೆ. ಕೋಲಾರ,ಕೊಪ್ಪಳ,ಚಾಮರಾಜಪೇಟೆಯಲ್ಲೂ ನಿಲ್ಲಿ ಅಂತಾರೆ. ಚಾಮುಂಡೇಶ್ವರಿಯಲ್ಲೂ ನಿಲ್ಲಿ ಅಂತಾರೆ. ವರುಣಾದಲ್ಲೂ ನಿಲ್ಲಿ ಅಂತಾರೆ ನಾನೇ ಬೇಡ ಅಂತ ಸುಮ್ಮನಾಗಿದ್ದೇನೆ ಎಂದರು.

ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಅದಕ್ಕೆ ನಾರಾಯಣಗುರು ಸ್ಥಬ್ಧ ಚಿತ್ರ ಕಳಿಸಲಾಗಿತ್ತು. ಆದರೆ  ಕೇಂದ್ರ ಸರ್ಕಾರ ಸ್ಥಬ್ಧ ಚಿತ್ರ ತಿರಸ್ಕರಿಸಿದೆ. ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಹಿರಿಯರನ್ನ ಕಡೆಗಣಿಸಿದೆ. ತಮಿಳುನಾಡಿನ ವೀರಬೊಮ್ಮನ್ ಕೂಡ ಕಡೆಗಣಿಸಿದೆ. ಒನ್ ನೇಷನ್,ಒನ್ ಕಲ್ಚರ್ ಅಂತಾರೆ. ಆದರೆ ನಾರಾಯಣಗುರುಗಳ ಸ್ಥಬ್ಧ ಚಿತ್ರವನ್ನ ತಿರಸ್ಕರಿಸಿದ್ದಾರೆ. ಪ್ರಧಾನಿ ಮೋದಿಯವರು ಕ್ಷಮೆಕೇಳಬೇಕು ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ್‌ ಆಗ್ರಹಿಸಿದ್ದಾರೆ.

Share