Connect with us


      
ಕರ್ನಾಟಕ

ಇಂಧನ ಇಲಾಖೆ: 1385 ಅಭ್ಯರ್ಥಿಗಳಿಗೆ ಏಕಕಾಲಕ್ಕೆ ನೇಮಕ ಆದೇಶ

Iranna Anchatageri

Published

on

ಬೆಂಗಳೂರು: ಜೂನ್ 29 (ಯು.ಎನ್.ಐ.) ಬಸವರಾಜ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ನೇಮಕಗೊಂಡ ನಂತರ ಇದೇ ಮೊದಲ ಬಾರಿಗೆ ಸರಕಾರಿ ಇಲಾಖೆಯ ನೇಮಕ ಪ್ರಕ್ರಿಯೆಯ ಅಂತಿಮ ಫಲಶೃತಿ ನೀಡುವುದಕ್ಕೆ ಇಂಧನ‌ ಇಲಾಖೆ ಸಜ್ಜಾಗಿದೆ.

ಕೆಪಿಟಿಸಿಎಲ್ ಹಾಗೂ ವಿವಿಧ ಎಸ್ಕಾಂ ವ್ಯಾಪ್ತಿಯಲ್ಲಿ ಖಾಲಿ ಇದ್ದ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗೆ ಆಯ್ಕೆಗೊಂಡ ೧೩೮೫ ಅರ್ಹ ಅಭ್ಯರ್ಥಿಗಳಿಗೆ ಗುರುವಾರ ಆದೇಶ ಪತ್ರ ನೀಡಲಾಗುತ್ತದೆ.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಇಂಧನ ಸಚಿವ ವಿ.ಸುನೀಲ್ ಕುಮಾರ್ ನೇಮಕ ಆದೇಶವನ್ನು ಹಸ್ತಾಂತರಿಸಲಿದ್ದಾರೆ.

ಅತ್ಯಂತ ಪಾರದರ್ಶಕವಾಗಿ ಈ ನೇಮಕ ಪ್ರಕ್ರಿಯೆ ನಡೆಸಲಾಗಿದ್ದು, ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದ ರೀತಿಯಲ್ಲಿ ನೇಮಕ ಪ್ರಕ್ರಿಯೆ ನಡೆಸಿದ್ದೇವೆ. ೧೩೮೫ ಅಭ್ಯರ್ಥಿಗಳಿಗೆ ಏಕಕಾಲಕ್ಕೆ ನೇಮಕ ಆದೇಶ ನೀಡಲಾಗುತ್ತಿದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ನಡೆದ ಮೊದಲ ಸರಕಾರಿ ನೇಮಕ ಆದೇಶ ವಿತರಣೆ ಕಾರ್ಯಕ್ರಮ ಇದಾಗಲಿದೆ.

Share