Connect with us


      
ದೇಶ

ವಿಮಾನಗಳ ಹಾರಾಟ ಜನವರಿ 31ರವರೆಗೆ ಸ್ಥಗಿತ

Vanitha Jain

Published

on

ನವದೆಹಲಿ, ಡಿಸೆಂಬರ್ 09(ಯು.ಎನ್.ಐ) ಒಮೈಕ್ರಾನ್ ಭೀತಿ ಹಿನ್ನೆಲೆ ಭಾರತವು ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟವನ್ನು 2022ರ ಜನವರಿ 31ರವರೆಗೆ ಸ್ಥಗಿತಗೊಳಿಸಿದೆ.

ಈ ಹಿಂದೆ ಕೊರೋನಾ ರೂಪಾಂತರಿ ಒಮೈಕ್ರಾನ್ ಹಾಗೂ ಹೆಚ್ಚುತ್ತಿರುವ ಕೊರೊನಾ ಹಿನ್ನೆಲೆ ಡಿಸೆಂಬರ್ 1 ರಂದು ವಿಮಾನಗಳ ಹಾರಾಟವನ್ನು ಡಿಸೆಂಬರ್ 15ರಿಂದ ಪುನಾರಂಭಿಸುವುದಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಹೇಳಿತ್ತು. ಆದರೆ ಪರಿಸ್ಥಿತಿ ಇನ್ನು ಕಳವಳಕಾರಿಯಾಗುತ್ತಿರುವ ಹಿನ್ನೆಲೆ ಡಿಜಿಸಿಎ ಗುರುವಾರ ಈ ನಿರ್ಧಾರ ತೆಗೆದುಕೊಂಡಿದೆ.

ಈ ಕುರಿತು ಡಿಜಿಸಿಎ ಹೊರಡಿಸಿರುವ ಸುತ್ತೋಲೆ, ಸಕ್ಷಮ ಪ್ರಾಧಿಕಾರವು ನಿಗದಿತ ಅಂತರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ಸೇವೆಗಳ ಅಮಾನತನ್ನು ಜನವರಿ 31, 2022 ರ 2359 ಗಂಟೆಗಳವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ಹೇಳಿದೆ.

ಕೊರೋನಾ ಹಿನ್ನೆಲೆ ಮಾರ್ಚ್ 23, 2020ರವರೆಗೆ ಭಾರತದಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿತ್ತು. ಆದರೆ ವಿಶೇಷ ಅಂತರಾಷ್ಟ್ರೀಯ ವಿಮಾನಗಳು ಮೇ 2020 ರಿಂದ ವಂದೇ ಭಾರತ್ ಮಿಷನ್ ಹಾಗೂ ಜುಲೈ 2020 ರಿಂದ ಆಯ್ದ ದೇಶಗಳೊಂದಿಗೆ ದ್ವಿಪಕ್ಷೀಯ ಏರ್‍ಬಬಲ್ ಒಪ್ಪಂದದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಭಾರತವು ಯುಎಸ್, ಯುಕೆ, ಯುಎಇ, ಕೀನ್ಯಾ ಭೂತಾನ್ ಮತ್ತು ಫ್ರಾನ್ಸ್ ಸೇರಿದಂತೆ 32 ದೇಶಗಳೊಂದಿಗೆ ಏರ್ ಬಬಲ್ ಒಪ್ಪಂದ ಮಾಡಿಕೊಂಡಿದೆ. ಇದರ ಅಡಿಯಲ್ಲಿ ಒಪ್ಪಂದ ಮಾಡಿಕೊಂಡ ದೇಶದೊಳಗೆ ಮಾತ್ರ ತಮ್ಮ ವಿಮಾನಯಾನ ಸೇವೆಯನ್ನು ಮುಮದುವರೆಸಬಹುದಾಗಿದೆ.

Share