Published
8 months agoon
By
UNI Kannadaನವದೆಹಲಿ, ಜನವರಿ (ಯು.ಎನ್.ಐ.) ಜಿಎಸ್ಟಿ ಗುಪ್ತಚರ ನಿರ್ದೇಶನಾಲಯ (DGGI) ದೇಶದ ಕೆಲವು ದೊಡ್ಡ ಕ್ರಿಪ್ಟೋಕರೆನ್ಸಿ ಸೇವಾ ಪೂರೈಕೆದಾರರ ಮೇಲೆ ಪ್ರಮುಖ ಕ್ರಮ ಕೈಗೊಂಡಿದ್ದು, ಭಾರಿ ತೆರಿಗೆ ವಂಚನೆ ಮಾಡಿರುವ ಶಂಕೆಯ ಮೇರೆಗೆ ಮಹಾನಿರ್ದೇಶನಾಲಯ ಈ ಕಂಪನಿಗಳ ಕಚೇರಿ ಹಾಗೂ ಆವರಣಗಳ ಮೇಲೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ದೊಡ್ಡ ಪ್ರಮಾಣದ ತೆರಿಗೆ ವಂಚನೆಗಾಗಿ 49.20 ಕೋಟಿ ದಂಡ ವಿಧಿಸಿದ್ದ ಕ್ರಿಪ್ಟೋಕರೆನ್ಸಿ ವಿನಿಮಯ ಸೇವಾ ಪೂರೈಕೆದಾರ ವಾಝಿರೆಕ್ಸ್ ಕಂಪೆನಿ ಮೇಲೂ ಡೈರೆಕ್ಟರೇಟ್ ಜನರಲ್ ಆಫ್ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ ಇಂಟೆಲಿಜೆನ್ಸ್ (DGGI) ದಾಳಿ ನಡೆಸಿದೆ.
ಜಿಎಸ್ಟಿ ಇಲಾಖೆಯ ಮುಂಬೈ ತಂಡವು ವಾಝಿರೆಕ್ಸ್ನ ವ್ಯವಹಾರ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಿದಾಗ, 40.5 ಕೋಟಿ ರೂಪಾಯಿಗಳ ಜಿಎಸ್ಟಿ ವಂಚನೆಯನ್ನು ಪತ್ತೆ ಹಚ್ಚಿತ್ತು. ದಂಡ ಮತ್ತು ಬಡ್ಡಿಯಾಗಿ ಕಂಪನಿಯಿಂದ ಒಟ್ಟು 49.20 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.