Connect with us


      
ಸಿನೆಮಾ

ಶಬಾನಾ ಅಜ್ಮಿ ಜೊತೆಗಿನ ಫೋಟೋ ಹಂಚಿಕೊಂಡ ಧರ್ಮೇಂದ್ರ!

Iranna Anchatageri

Published

on

ಮುಂಬೈ: ಮೇ 12 (ಯು.ಎನ್‌.ಐ.) ಬಾಲಿವುಡ್‌ನ ಹೀಮ್ಯಾನ್ ಎಂದೆ ಪ್ರಸಿದ್ಧರಾಗಿರುವ ನಟ ಧರ್ಮೇಂದ್ರ ಅವರು ಶಬಾನಾ ಅಜ್ಮಿ ಅವರೊಂದಿಗಿನ ಅದ್ಭುತ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಈ ಇಳಿವಯಸ್ಸಿನಲ್ಲೂ ಧರ್ಮೇಂದ್ರ ಪ್ರಸ್ತುತ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಧರ್ಮೇಂದ್ರ ಅವರಲ್ಲದೆ, ಶಬಾನಾ ಅಜ್ಮಿ, ಜಯಾ ಬಚ್ಚನ್, ಆಲಿಯಾ ಭಟ್, ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಧರ್ಮೇಂದ್ರ ಅವರು ಟ್ವಿಟರ್‌ನಲ್ಲಿ ಶಬಾನಾ ಅಜ್ಮಿ ಅವರೊಂದಿಗೆ ಹಂಚಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಒಂದು ಸುಂದರ ಫೋಟೋವನ್ನು ಹೀಮ್ಯಾನ್ ಹಂಚಿಕೊಂಡಿದ್ದು, ಧರ್ಮೇಂದ್ರ ಮತ್ತು ಶಬಾನಾ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಯಿಂದ ಹಿಡಿದುಕೊಂಡಿದ್ದಾರೆ. ಈ ಚಿತ್ರವನ್ನು ಹಂಚಿಕೊಂಡಿರುವ ಧರ್ಮೇಂದ್ರ, ‘ನಾನು ಕ್ಯಾಮೆರಾದೊಂದಿಗೆ ಪ್ರೀತಿಸುತ್ತೇನೆ ಮತ್ತು ಬಹುಶಃ ನನ್ನೊಂದಿಗೆ ಕ್ಯಾಮೆರಾ ಇರಬಹುದು’ ಎಂದು ಬರೆದಿದ್ದಾರೆ.

Share