Connect with us


      
ಸಿನೆಮಾ

ಮಲಯಾಳಂ ನಟ ದಿಲೀಪ್ ಮನೆ ಮೇಲೆ ಪೊಲೀಸ್ ಅಧಿಕಾರಿಗಳ ದಾಳಿ: ಶೋಧಕಾರ್ಯ

Vanitha Jain

Published

on

ಮಲಯಾಳಂ ನಟ ದಿಲೀಪ್ ಮನೆ ಮೇಲೆ ಪೊಲೀಸ್ ಅಧಿಕಾರಿಗಳ ದಾಳಿ: ಶೋಧಕಾರ್ಯ

ಆಲುವಾ: ಜನೆವರಿ 13 (ಯು.ಎನ್.ಐ.) 2017ರ ಮಲಯಾಳಂ ನಟಿ ಭಾವನಾ ಮೆನನ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಕೇರಳದ ಎರ್ನಾಕುಲಂನ ಆಲುವಾದಲ್ಲಿರುವ ಮಲಯಾಳಂ ನಟ ದಿಲೀಪ್ ಮನೆ ಮೇಲೆ ಕೇರಳ ಪೊಲೀಸರು ದಾಳಿ ನಡೆಸಿದ್ದಾರೆ.

ನಿರ್ದೇಶಕ ಬಾಲಚಂದ್ರಕುಮಾರ್ ದಿಲೀಪ್ ವಿರುದ್ಧ ಮಾಡಿರುವ ಹೊಸ ಆರೋಪದ ತನಿಖೆಗಾಗಿ ಹೊಸದಾಗಿ ರಚಿಸಲಾದ ತಂಡವು ಈ ದಾಳಿಯ ನೇತೃತ್ವ ವಹಿಸಿದೆ. ನಟನ ನಿರ್ಮಾಣ ಸಂಸ್ಥೆ ‘ಗ್ರ್ಯಾಂಡ್ ಪ್ರೊಡಕ್ಷನ್ಸ್’ ಕಚೇರಿ ಮತ್ತು ಅವರ ಸಹೋದರ ಅನೂಪ್ ಅವರ ಮನೆ ಮೇಲೂ ದಾಳಿ ನಡೆಸಲಾಗುತ್ತಿದೆ.

ನ್ಯಾಯಾಲಯದ ಅನುಮತಿಯೊಂದಿಗೆ 20 ಸದಸ್ಯರ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ. ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ದಾಳಿ ಆರಂಭವಾಗಿದೆ.

ಇತ್ತೀಚೆಗಷ್ಟೇ ದಿಲೀಪ್ ಜೊತೆ ಜಗಳ ಮಾಡಿಕೊಂಡಿದ್ದ ಬಾಲಚಂದ್ರಕುಮಾರ್, ಲೈಂಗಿಕ ದೌರ್ಜನ್ಯಕ್ಕೊಳಗಾದ ನಟಿಯ ಕೆಲವು ತುಣುಕುಗಳನ್ನು ನಟನ ಬಳಿ ಇದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅಪಹರಣ ಪ್ರಕರಣದ ತನಿಖೆ ನಡೆಸುತ್ತಿರುವ ಕೆಲವು ಪೊಲೀಸ್ ಅಧಿಕಾರಿಗಳ ವಿರುದ್ಧ ತಾನಾಗಿಯೇ ಕ್ರಮ ಕೈಗೊಳ್ಳುವುದಾಗಿ ನಟ ಬೆದರಿಕೆ ಹಾಕಿದ್ದಾಗಿಯೂ ಕುಮಾರ್ ಹೇಳಿದ್ದಾರೆ.

ನಟಿ ಅಪಹರಣ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ತಂಡವು ಆರೋಪಿಯಾಗಿರುವ ದಿಲೀಪ್ ಹೊಸ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜನವರಿ 14ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

Share