Published
6 months agoon
ಬೆಂಗಳೂರು: ನವೆಂಬರ್ 08 (ಯು.ಎನ್.ಐ.) ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರು ನ್ಯಾಯಾಲಯ ಮುಂದೆ ಹಾಜರಾಗಿ ಪೀಠದ ಕ್ಷಮೆ ಕೋರಿದ್ದಾರೆ.
ನ್ಯಾಯಾಲಯದ ಆದೇಶದಂತೆ ಸಂಬಂಧಿಸಿದ ಕಲಾಪಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಪೀಠದ ಮುಂದೆ ಹಾಜರಾಗಿರಲಿಲ್ಲ. ಇದು ಬೇಜಾವಾಬ್ದಾರಿಯುತ ನಡವಳಿಕೆ ಎಂದು ಭಾವಿಸಿದ ಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿ ಇಂದು ಮಧ್ಯಾಹ್ನ ಪೀಠದ ಮುಂದೆ ಹಾಜರಾದರು.
ಡಿಮ್ಹಾನ್ಸ್ಗೆ ವೈದ್ಯಕೀಯ ಮೇಲ್ವಿಚಾರಕ/ಅಧೀಕ್ಷಕರನ್ನು ಹತ್ತು ದಿನಗಳಲ್ಲಿ ನೇಮಕ ಮಾಡಲಾಗುವುದು ಎಂದು ಎಜಿ ತಿಳಿಸಿದ್ದಾರೆ. ಎಷ್ಟು ದಿನಗಳಲ್ಲಿ ಡಿಮ್ಹಾನ್ಸ್ನಲ್ಲಿ ಎಂಆರ್ಐ ಯಂತ್ರಗಳನ್ನು ಅಳವಡಿಸಲಾಗುವುದು ಮತ್ತು ಇದುವರೆಗೆ ಏಕೆ ತಡವಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಎರಡು ದಿನಗಳಲ್ಲಿ ಅಫಿಡವಿಟ್ ಸಲ್ಲಿಸಬೇಕು. ಎಜಿ ಕೋರಿಕೆ ಆಧರಿಸಿ ಪ್ರಕರಣವನ್ನು ಮುಂದೂಡಲಾಗುತ್ತಿದೆ ಎಂದು ನ್ಯಾಯಲಯ ತಿಳಿಸಿತು.
ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ಸಂಬಂಧ ವೈಯಕ್ತಿಕ ಅಫಿಡವಿಟ್ ಸಲ್ಲಿಸಬೇಕು. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಹಾಜರಾಗಬೇಕಿಲ್ಲ ಎಂದು ಆದೇಶದಲ್ಲಿ ದಾಖಲಿಸಿಕೊಂಡಿರುವ ಪೀಠವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ಜ್ಞಾನವಾಪಿ ಮಸೀದಿ ಸಮೀಕ್ಷೆ; ಕೊಳದಲ್ಲಿ ಶಿವಲಿಂಗ ಪತ್ತೆ: ವಕೀಲರ ಹೇಳಿಕೆ
ಜ್ಞಾನವಾಪಿ ಮಸೀದಿ; ಮೂರನೇ ದಿನಕ್ಕೆ ಸರ್ವೇ
ಜ್ಞಾನವಾಪಿ ಮಸೀದಿ; ಮುಂದುವರಿದ ಸಮೀಕ್ಷೆ ಕಾರ್ಯ
ಜ್ಞಾನವಾಪಿ ಶೃಂಗಾರ್ ಗೌರಿ ಸಂಕೀರ್ಣ ಸಮೀಕ್ಷೆ ತಡೆಗೆ ಸುಪ್ರೀಂ ನಿರಾಕರಣೆ
ತಾಜ್ಮಹಲ್ ಕೊಠಡಿ ಸಮೀಕ್ಷೆ; ಅರ್ಜಿ ತಿರಸ್ಕರಿಸಿದ ಕೋರ್ಟ್
ಜ್ಞಾನವಾಪಿ ಮಸೀದಿ ; ಮೇ ೧೭ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ: ನ್ಯಾಯಾಲಯ