Connect with us


      
ಕೃಷಿ

ಸಾಕು ಪ್ರಾಣಿಗಳಿಗೆ ರೋಗವೆ? ಕರೆ ಮಾಡಿ 1962..

Iranna Anchatageri

Published

on

ಬೆಂಗಳೂರು: ಮೇ 05 (ಯು.ಎನ್.ಐ.) ಪಶುಸಂಗೋಪನಾ ಇಲಾಖೆಗೆ 1000 ವೈದ್ಯರ ಅಗತ್ಯ ಇದ್ದು, 400 ಪಶುವೈದ್ಯರ ನೇಮಕಕ್ಕೆ ಪ್ರಕ್ರಿಯೆ ನಡೆದಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹ್ವಾಣ್ ಹೇಳಿದರು.

ವಿಕಾಸ ಸೌಧದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೆರವಿನಿಂದ 275 ಪಶು ಸಂಜೀವಿನೀ ಅಂಬುಲೆನ್ಸ್ ಅನ್ನು ಪ್ರತಿ ವಿಧಾನಸಭಾ ಕೇಂದ್ರಗಳಿಗೆ ಒಂದು ವಾಹನ ನೀಡಲಾಗುವುದು. 44 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, ತುರ್ತು ಸೇವೆಗೆ 1962 ಗೆ ಕರೆ ಮಾಡಬೇಕು. ಯಾವುದೇ ರೈತರು ಕರೆ ಮಾಡಿದರೆ ನಮ್ಮ ಅಂಬುಲೆನ್ಸ್ ಸೇವೆಗೆ ಹಾಜರಾಗಲಿದ್ದು, ಕೇಂದ್ರ ಮತ್ತು ರಾಜ್ಯದ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಮೇ 7 ರಂದು ಕೇಂದ್ರ ಸಚಿವರು ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ನಾನು ಸಚಿವನಾದ ಮೇಲೆ ಪಶು ಸಂಜೀವಿನಿ, ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಲಾಗಿದೆ 12000. ಜಾನುವಾರು ರಕ್ಷಣೆ ಮಾಡಲಾಗಿದೆ, 6000 ಪ್ರಕರಣಗಳು ದಾಖಲಾಗಿವೆ. ಗೋಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ 100 ಗೋಶಾಲೆ ಮಾಡುವುದು ಸರ್ಕಾರದ ಗುರಿ ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 47 ಪಶು ವೈದ್ಯರು, 79. ಪಶು ವೈದ್ಯಕೀಯ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆದಿದೆ ಎಂದರು.

ಲಸಿಕಾ ಅಭಿಯಾನ, ಪಶುಗಳ ಕಾಲುಬಾಯಿ ರೋಗ ನಿಯಂತ್ರಣ ಮಾಡಲಾಗಿದೆ. ಪ್ರಾಣಿ ಕಲ್ಯಾಣ ಸಹಾಯವಾಣಿ 8277100200 ನಿರಂತರ ಸೇವೆ ಮಾಡಲಾಗುತ್ತಿದೆ. 75000 ದೂರವಾಣಿ ಕರೆಗಳು ಬಂದಿವೆ. ಇಲಾಖೆಯಲ್ಲಿ ಬಡ್ತಿ ನೀಡಿ ಪುನಾರಚನೆ ಮಾಡಲಾಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ರೈತರಿಗೆ 5 ರೂ. ಹಾಲಿನ ಪ್ರೋತ್ಸಾಹ ನೀಡಲಾಗುತ್ತಿದೆ.
ಆತ್ಮನಿರ್ಭರ ಗೋಶಾಲೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಅದಕ್ಕಾಗಿ ಯುಪಿ, ಗುಜರಾತ್ ಪ್ರವಾಸ ಮಾಡಿ ಮಾಹಿತಿ ಪಡೆದುಕೊಂಡು ಬಂದಿದ್ದೇನೆ. ಪುಣ್ಯಕೋಟಿ ಯೋಜನೆ ಅಡಿ ಎಲ್ಲ ಜನಪ್ರತಿನಿಧಿಗಳು ದತ್ತು ತೆಗೆದುಕೊಳ್ಳುವ ಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಪಿಎಸ್ ಐ ನೇಮಕಾತಿಗೆ ಸಂಬಂಧಿಸಿದಂತೆ ನಾನು ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ನೇಮಕಾತಿಯಲ್ಲಿ ಅನ್ಯಾಯ ಆಗುತ್ತಿದೆ ಎಂದು ಅಳಲು ತೋಡಿಕೊಂಡರು. ನಮ್ಮ ಭಾಗದ ಶಾಸಕರು ಎಲ್ಲರೂ ಮನವಿ ಮಾಡಿದರು. ಮಾಧ್ಯಮಗಳಲ್ಲಿಯೂ ಈ ಬಗ್ಗೆ ಸುದ್ದಿ ಬರುತ್ತಿತ್ತು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪತ್ರ ಬರೆದಿದ್ದೇನೆ. ನನ್ನ ಬಳಿ ಯಾವುದೇ ದಾಖಲೆ ಇದೆ ಅಂತ ಹೇಳಿಲ್ಲ. ಪ್ರಿಯಾಂಕ್ ಖರ್ಗೆ ದಾಖಲೆ ತೋರಿಸುತ್ತಿದ್ದಾರೆ. ಅದಕ್ಕೆ ಅವರಿಗೆ ನೊಟಿಸ್ ಕೊಟ್ಟಿದ್ದಾರೆ. ನನಗೂ ನೊಟಿಸ್ ಕೊಟ್ಟರೆ ಕೊಡಲಿ. ಕಾಂಗ್ರೆಸ್ ನವರಿಗೆ ಮಾಡಲು ಬೇರೆ ಯಾವುದೆ ಕೆಲಸ ಇಲ್ಲ ಅದಕ್ಕೆ ಆರೊಪ ಮಾಡುತ್ತಿದ್ದಾರೆ. ಅಶ್ವತ್ಥ್ ನಾರಾಯಣ ವಿರುದ್ದವೂ ಅನಗತ್ಯ ಆರೋಪ ಮಾಡುತ್ತಿದ್ದಾರೆ.

Share