Published
1 week agoon
ಉದಯ್ಪುರ್ (ರಾಜಸ್ತಾನ್) ಮೇ ೧೩ (ಯು.ಎನ್.ಐ.) ಕಾಂಗ್ರೆಸ್ ಪಕ್ಷ ರಾಜಸ್ತಾನದ ಉದಯ್ಪುರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಚಿಂತನಾ ಶಿಬಿರದಲ್ಲಿ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್ ಖುಷಿಖುಷಿಯಾಗಿದ್ದಾರೆ.
ಇಂದು ಅವರಿಬ್ಬರೂ ಚಿಂತನಾ ಶಿಬಿರ ಉದ್ಘಾಟನೆಯಾದ ನಂತರ ದೊರೆತ ಬಿಡುವಿನ ವೇಳೆಯಲ್ಲಿ ಭೇಟಿಯಾದರು. ಇಷ್ಟರೊಳಗಾಗಲೇ ಹಿರಿಯ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಮಧ್ಯಸ್ಥಿಕೆಯಿಂದ ಅವರಿಬ್ಬರ ನಡುವಿನ ಮಾತಿನ ಸಮರದ ವಿಷಯ ತಿಳಿಯಾಗಿತ್ತು. ಭೇಟಿಯಾದ ಕೂಡಲೇ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರು ಡಿಕೆಶಿ ಹೆಗಲ ಮೇಲೆ ಕೈ ಹಾಕಿ ತುಂಬು ನಗೆ ಚೆಲ್ಲಿದರು. ಪ್ರತಿಯಾಗಿ ಶಿವಕುಮಾರ್ ವಿಶ್ವಾಸ ನಗೆ ಬೀರಿದರು.
ಈ ಕ್ಷಣವನ್ನು ಅವರಿಬ್ಬರ ಅಭಿಮಾನಿಗಳು ಸೆರೆ ಹಿಡಿದು ಟ್ವೀಟ್ ಮಾಡಿದ್ದಾರೆ. ಈ ಚಿತ್ರವನ್ನು ಖ್ಯಾತ ನಟಿ, ಕಾಂಗ್ರೆಸಿನ ಮಾಜಿ ಸಂಸದೆ ರಮ್ಯ ಅವರು ಟ್ವೀಟ್ ಮಾಡಿದ್ದು ಇವರಿಬ್ಬರೂ ಹೀಗೆ ಇರುವುದು ಒಳ್ಳೆಯದು ಎಂಬಂತೆ “ಗುಡ್ ಜಾಬ್ ಎಂದಿದ್ದಾರೆ.
ರಾಜ್ಯದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯ್ ಹಾಗೂ ಕಾಂಗೆಸಿನ ಎಂ.ಬಿ. ಪಾಟೀಲ್ ಭೇಟಿ ನಡೆದಿದೆ ಎಂಬಂತೆ ಡಿ.ಕೆ. ಶಿವಕುಮಾರ್ ಮಾತನಾಡಿದ್ದರು. ಇದರಿಂದ ಸ್ವತಃ ಕಾಂಗ್ರಸ್ ಪಕ್ಷಕ್ಕೆ ಹಾಗೂ ಎಂ.ಬಿ. ಪಾಟೀಲರಿಗೆ ಮುಜುಗರವಾಗಿತ್ತು. ಭೇಟಿಯನ್ನು ನಿರಾಕರಿಸಿದ್ದರೂ ಡಿಕೆಶಿ ಹೀಗೆ ಹೇಳಿಕೆ ಕೊಟ್ಟಿದ್ದನ್ನು ಅವರ ಬಳಿ ಚರ್ಚಿಸುತ್ತೇನೆ ಎಂದು ಎಂ.ಬಿ. ಪಾಟೀಲ್ ಪ್ರಬುದ್ಧವಾಗಿ ಉತ್ತರಿಸಿದ್ದನ್ನು ಸ್ಮರಿಸಬಹುದು̤
Good job @rssurjewala @KBByju 👏🏽 👏🏽 https://t.co/JvzFi5hXnN
— Divya Spandana/Ramya (@divyaspandana) May 13, 2022
ಕೊನೆಗೂ ಸಿಕ್ತು ಜಾಮೀನು.. 2 ವರ್ಷದ ಬಳಿಕ ಜೈಲಿಂದ ಹೊರಬಂದ ಅಜಂಖಾನ್
ಸುನೀಲ್ ಜಖರ್ ಬಿಜೆಪಿಗೆ ಸೇರ್ಪಡೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಸಾಮೂಹಿಕ ನಾಯಕತ್ವ ಇಲ್ಲದೇ ಕಾಂಗ್ರೆಸ್ ಗೆಲ್ಲುವುದು ಸಾಧ್ಯವೇ ?
ಶರದ್ ಪವಾರ್ ವಿರುದ್ಧ ಪೋಸ್ಟ್; ಸಿನಿಮಾ ನಟಿಗೆ ನ್ಯಾಯಾಂಗ ಬಂಧನ
ಒಂದೇ ದಿನ ಕಾಂಗ್ರೆಸ್ ಗೆ ಡಬಲ್ ಶಾಕ್! ಶಾಸಕ ಸ್ಥಾನಕ್ಕೆ ರಾಜಸ್ತಾನ ಸಿಎಂ ಆಪ್ತ ರಾಜೀನಾಮೆ
ರಾಜೀವ್ ಗಾಂಧಿ ಹತ್ಯೆ ಕೇಸ್ ಅಪರಾಧಿಯ ಬಿಡುಗಡೆ ‘ನೋವು ಮತ್ತು ನಿರಾಶದಾಯಕ’: ಕಾಂಗ್ರೆಸ್