Published
5 months agoon
ಬೆಂಗಳೂರು: ಡಿ, 8 (ಯುಎನ್ಐ) ಒಮಿಕ್ರಾನ್ ವಿಚಾರವಾಗಿ ಜನರಲ್ಲಿ ಅನಗತ್ಯ ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಐಟಿ ಸೆಕ್ಟರ್, ಹೋಟೆಲ್ಗಳು ಸೇರಿದಂತೆ ಬಹುತೇಕ ವ್ಯವಹಾರಗಳು ಎಸಿಯಲ್ಲಿ ನಡೆಯುತ್ತವೆ. ಅವರ್ಯಾರು ವ್ಯವಹಾರ ಮಾಡುವಂತಿಲ್ಲವೇ? ಎಲ್ಲರೂ ಬಾಗಿಲು ಬಂದ್ ಮಾಡಬೇಕೇ? ರಾಜ್ಯದಲ್ಲಿ ಎಲ್ಲಿ ಸೋಂಕು ಹೆಚ್ಚಾಗಿದೆ? ಇಡೀ ರಾಜ್ಯದ ಆರ್ಥಿಕತೆಯನ್ನೇ ಹಾಳು ಮಾಡಲಾಗುತ್ತಿದೆ ಎಂದರು.
ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡುವಾಗ ದೇಶದ ಎಲ್ಲೆಡೆಯಂತೆ ಮಾಡಬೇಕು. ನಮಗೆ ವಿಶೇಷ ಮಾರ್ಗಸೂಚಿ ರೂಪಿಸಲು ಆಗುವುದಿಲ್ಲ. ಈಗಾಗಲೇ ಯಾರಿಗೆಲ್ಲಾ ನಷ್ಟ ಆಗಿದೆ ಅವರಿಗೆ ಪರಿಹಾರ ನೀಡಬೇಕು. ಇದುವರೆಗೂ ಯಾರಿಗೂ ಪರಿಹಾರ ನೀಡಿಲ್ಲ. ಕೋವಿಡ್ನಿಂದ ಮೃತಪಟ್ಟ 4 ಲಕ್ಷ ಜನರಲ್ಲಿ ಯಾರಿಗೂ ಪರಿಹಾರ ಕೊಟ್ಟಿಲ್ಲ. ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡಿಲ್ಲ. ಈಗ ಕೆಲವರು ಉಸಿರಾಡುತ್ತಿದ್ದಾರೆ. ಹೋಟೆಲ್ ಉದ್ಯಮ ನಷ್ಟದಲ್ಲಿದೆ. ಶೇ.90 ರಷ್ಟು ಹೋಟೆಲ್ಗಳಿಗೆ ಎಸಿ ಅಗತ್ಯ. ಶೇ.20 ರಷ್ಟು ಶಾಲೆಗಳು ಎಸಿಯಲ್ಲೇ ನಡೆಯುತ್ತಿವೆ. ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದರು.
ಯುಪಿ, ಗುಜರಾತ್ ಮಾದರಿ ಆಡಳಿತವಾದರೂ ಬರಲಿ: ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ
ಪ್ರಿಯಾಂಕ್ ಖರ್ಗೆಗೆ ನೋಟಿಸ್: ಸೆಡ್ಡು ಹೊಡೆದ ಡಿಕೆಶಿ!
ಸರ್ಕಾರವೇ ಈಶ್ವರಪ್ಪರನ್ನ ರಕ್ಷಣೆ ಮಾಡ್ತಿದೆ: ಡಿಕೆಶಿ ವಾಗ್ದಾಳಿ
ದೇಶ ಇಂದು ವಿವಿಧ ರೀತಿಯಲ್ಲಿ ಕವಲು ಹಾದಿಯಲ್ಲಿದೆ: ಡಿಕೆಶಿ
ಬಿಜೆಪಿ ಮಹಿಳಾ ವಿರೋಧಿ ಸರ್ಕಾರ – ಡಿ.ಕೆ.ಶಿವಕುಮಾರ್
ಇಂದಿನಿಂದ ಮೂರುದಿನಗಳ ಕಾಲ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುವುದಕ್ಕೆ ಕ್ಷಮೆ ಕೋರಿದ ಡಿಕೆಶಿ