Connect with us


      




ಸಾಮಾನ್ಯ

ಕ್ರಿಕೆಟ್ ನೊಂದಿಗೆ ಲತಾ ಮಂಗೇಶ್ಕರ್ ಗಿದ್ದ ಅವಿನಾಭಾವ ಸಂಬಂಧ ಎಂಥದ್ದು ಗೊತ್ತಾ? 

UNI Kannada

Published

on

ಮುಂಬೈ: ಫೆಬ್ರವರಿ 07 (ಯು.ಎನ್.ಐ.) ಭಾರತ ಕ್ರಿಕೇಟ್ ತಂಡ ಮ್ಯಾಚ್ ಆಡುತ್ತಿದ್ದರೆ ಎಲ್ಲ ಕೆಲಸಗಳನ್ನು ಬದಿಗೊತ್ತಿ ಟಿವಿಗೆ ಅಂಟಿಕೊಳ್ಳುವ ಹುಚ್ಚು, ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ದಿನವಿಡೀ ಉಪವಾಸ, ಆಟಗಾರರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಬೆಂಬಲಿಸಿದ ಧ್ವನಿ, ಇಷ್ಟೆಲ್ಲಾ ಮಾಡಿದ್ದು ಒಬ್ಬ ಸಾಮಾನ್ಯ ಕ್ರಿಕೇಟ್ ಅಭಿಮಾನಿಯಾಗಿದ್ದರೆ ಆಶ್ಚರ್ಯವೇನು ಅನ್ನಿಸುತ್ತಿರಲಿಲ್ಲ. ಆದರೇ ಹಾಗೆ ಮಾಡುತ್ತಿದ್ದದ್ದೂ ಗಾನಕೋಗಿಲೆ, ಸಂಗೀತ ಲೋಕದ ಶಿಖರವನ್ನೇರಿರುವ ಭಾರತರತ್ನ ಲತಾ ಮಂಗೇಶ್ಕರ್.

ಸಚಿನ್ ತೆಂಡೂಲ್ಕರ್ 100ನೇ ಶತಕ ಭಾರಿಸಬೇಕೆಂದು ಪೂಜೆ ಮಾಡಿಸಿದ್ದೂ.. ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯಾಗಬಾರದು ಎಂದು ಕೋರಿಕೊಂಡಿದ್ದೂ, ಒಬ್ಬ ಮಹಾನ್ ಕ್ರಿಕೇಟ್ ಅಭಿಮಾನಿಯಾಗಿ ಸಾಧಾರಣ ಅಭಿಮಾನಿಯಂತೆ ಆಶಿಸುತ್ತಿದ್ದರೂ ಲತಾ ಮಂಗೇಶ್ಕರ್.  ಪ್ರಸ್ತುತ ಸ್ಥಿತಿಯಲ್ಲಿ ದೇಶದ ಬಿಸಿಸಿಐಗಿಂತ ಸಂಪತ್ಭರಿತ ಕ್ರೀಡಾ ಮಂಡಳಿ ಮತ್ತೊಂದಿಲ್ಲ, ಆದರೆ ಹಿಂದೆ ಒಮ್ಮೆ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಿಗೆ (1983) ನಗದು ಪ್ರೋತ್ಸಾಹಧನ ನೀಡಲು ಸಹ ಸಮರ್ಪಕ ಆರ್ಥಿಕ ಪರಿಸ್ಥಿತ ಸರಿಯಿಲ್ಲದಿದ್ದ ಸಂದರ್ಭದಲ್ಲಿ ನಾನಿದ್ದೇನೆ ಎಂದು ಮುಂದೆ ಬಂದಿದ್ದ ವ್ಯಕ್ತಿ ಶ್ರೇಷ್ಠ ಸಂಗೀತಗಾರ್ತಿ ಲತಾ ಮಂಗೇಶ್ಕರ್.

ಲತಾ ಅವರು ಭಾನುವಾರ ನಿಧನರಾದರು. ಕ್ರಿಕೆಟ್‌ನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಬಿಸಿಸಿಐ ಸೇರಿದಂತೆ ಎಲ್ಲಾ ಕ್ರೀಡಾ ಸಂಘಗಳು ಸಂತಾಪ ಸೂಚಿಸಿವೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ 100ನೇ ಶತಕ ಸಿಡಿಸಿದ ದಿನದಂದು ಅದನ್ನು ತಾನೇ ಸಾಧನೆ ಮಾಡಿದಷ್ಟು ಸಂತೋಷ ಪಟ್ಟಿದ್ದ ಅವರ ಅಂತ್ಯ ಕ್ರಿಯೆ ಸಂದರ್ಭದಲ್ಲಿ ಸಚಿನ್ ಹಾಜರಾಗಿದ್ದರು. ಜೊತೆಗೆ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ರೋಹಿತ್, ವಿರಾಟ್ ಮುಂತಾದ ಆಟಗಾರರು ಲತಾ ಮಂಗೇಶ್ಕರ್  ಅವರಿಗೆ ಸಂತಾಪ ಸೂಚಿಸಿದರು.

ಸಚಿನ್ ಬಾಯಿಂದ ಮೊಟ್ಟಮೊದಲ ಬಾರಿಗೆ ‘ಆಯ್’ (ತಾಯಿ) ಎಂಬ ಪದ ಕೇಳಿದಾಗ ಭಾವುಕರಾದ ಲತಾ ಮಂಗೇಶ್ಕರ್ ಅವರು ಕೊನೆಯ ಕ್ಷಣದವರೆಗೂ ಮಾಸ್ಟರ್ ಗೆ ತಾಯಿಯಂತೆ ಬೆನ್ನೆಲುಬಾಗೆ ನಿಂತಿದ್ದರು. ಸಚಿನ್ ಅವರು ಕ್ರೀಡ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಭಾರತ ರತ್ನ ನೀಡಬೇಕೆಂದು ಲತಾ ಮಂಗೇಶ್ಕರ್ ಬಹಿರಂಗವಾಗಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದರು.

ಭಾರತ ತಂಡಕ್ಕೆ ಲತಾಜಿ ಅವರ ಬೆಂಬಲಕ್ಕಾಗಿ ಬಿಸಿಸಿಐ ವಿಶೇಷವಾಗಿ ಎರಡು ವಿಐಪಿ ಟಿಕೆಟ್‌ಗಳನ್ನು ದೇಶಾದ್ಯಂತ ಎಲ್ಲಾ ಕ್ರಿಕೆಟ್ ಸ್ಟೇಡಿಯಂಗಳಲ್ಲಿ  ಕಾಯ್ದಿರಿಸುತ್ತಿದ್ದವು. ಅವರ ಕೊಡುಗೆ ಎಂದಿಗೂ ಮರೆಯಲಾಗದು ಎಂದು ಬಿಸಿಸಿಐ ಹೇಳಿಕೊಂಡಿತ್ತು.

 

Share