Connect with us


      




ದೇಶ

ಪತ್ನಿಯ ಕೊನೆ ಆಸೆ ಈಡೇರಿಸಿದ ವೈದ್ಯ; 5 ಕೋಟಿ ಮೌಲ್ಯದ ಆಸ್ತಿ ದಾನ!

Published

on

ಹಿಮಾಚಲ ಪ್ರದೇಶ : ಜನೆವರಿ 15 (ಯು.ಎನ್.ಐ.) ಪತ್ನಿಯ ಕೊನೆ ಆಸೆ ಈಡೇರಿಸಲು ಪತಿ 5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ದಾನ ಮಾಡಿರುವ ಹೃದಯಸ್ಪರ್ಶಿ ಪ್ರೇಮಕಥೆ ಇದು.
ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಿವೃತ್ತ ವೈದ್ಯರೊಬ್ಬರು ತಮ್ಮ ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಲು ಕೋಟ್ಯಂತರ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಸರ್ಕಾರಕ್ಕೆ ನೀಡಿದ್ದಾರೆ. ವೈದ್ಯರಿಗೆ ಮಕ್ಕಳಿಲ್ಲದ ಕಾರಣ 5 ಕೋಟಿಗೂ ಹೆಚ್ಚು ಆಸ್ತಿ ದಾನ ಮಾಡಿದ್ದಾರೆ. ವೈದ್ಯರ ಉದಾರ ಮನೋಭಾವನೆಯು ಇಡೀ ಹಿಮಾಚಲ ಪ್ರದೇಶದ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಚರ್ಚೆಯಾಗುತ್ತಿದೆ.


ಜೋಳಸಪ್ಪಾಡ್ ಗ್ರಾಮದ 72 ವರ್ಷದ ವೈದ್ಯ ರಾಜೇಂದ್ರ ಕನ್ವರ್ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಪತ್ನಿ ಕೃಷ್ಣಾ ಕನ್ವರ್ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.  ಆದರೆ, ನಿವೃತ್ತ ವೈದ್ಯರ ಪತ್ನಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು. ಇಬ್ಬರೂ ಸಹ ಮಕ್ಕಳಿಲ್ಲದ ಕಾರಣ ತಮ್ಮ ಚರ ಮತ್ತು ಸ್ಥಿರ ಆಸ್ತಿಯನ್ನು ಸರ್ಕಾರಕ್ಕೆ ಕೊಡಬೇಕೆಂಬ ಇಚ್ಛೆ ಹೊಂದಿದ್ದರು. ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಲು ಸಂಬಂಧಿಕರೊಂದಿಗೆ ಕುಳಿತುಕೊಂಡೇ ರಾಜೇಂದ್ರ ಚರ್ಚೆ ಮಾಡಿದರು. ಎಲ್ಲರ ಒಪ್ಪಿಗೆ ಪಡೆದ ಬಳಿಕ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಕೆಲ ಜನರಿಗೆ ಮನೆ ಇರಲ್ಲ. ಇನ್ನು ಕೆಲವರು ವೃದ್ಧಾಪ್ಯದ ಕೊನೆ ಹಂತದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ತಾವು ಘಳಿಸಿದ ಕೋಟಿಗಟ್ಟಲೆ ಮೌಲ್ಯದ ಮನೆಯಲ್ಲಿ ನಿರ್ಗತಿರಾದವರಿಗೆ ಸರ್ಕಾರ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಪತಿ ಪತ್ನಿಯ ಇಚ್ಛೆಯಾಗಿದೆ. ಈ ಷರತ್ತನ್ನು ಸರಕಾರದೊಂದಿಗೆ ದಾನ ಮಾಡುವ ಉಯಿಲಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಡಾ.ರಾಜೇಂದ್ರ ಕನ್ವಾರ ಹೇಳುತ್ತಾರೆ.
ಹಿರಿಯ ನಾಗರಿಕರೊಂದಿಗೆ ಮಕ್ಕಳು ಯಾವಾಗಲೂ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು ಹಾಗೂ ಅವರನ್ನು ಗೌರವಿಸಿ ಎಂದು ರಾಜೇಂದ್ರ ಕನ್ವಾರ ಜನರಿಗೆ ಸಂದೇಶ ನೀಡಿದ್ದಾರೆ.  23 ಜುಲೈ 2021 ರಂದು ಸರ್ಕಾರದ ಹೆಸರಿನಲ್ಲಿ ಉಯಿಲು ಮಾಡಲಾಗಿದ್ದು, ಅದರಲ್ಲಿ ಮನೆ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನು, ತಮ್ಮ ಕಾರನ್ನು ದಾನ ಮಾಡಿದ್ದಾರೆ. ಈಗ ಒಬ್ಬಂಟಿಯಾಗಿರುವ ನಿವೃತ್ತ ವೈದ್ಯ ರಾಜೇಂದ್ರ ಕನ್ವಾರ್ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ನಿತ್ಯ ನೂರಾರು ರೋಗಿಗಳು ಮನೆಯಲ್ಲಿ ಚಿಕಿತ್ಸೆ
1974 ರಲ್ಲಿ ಅವರು ಇಂದಿರಾಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಪೂರ್ಣಗೊಳಿಸಿದ ರಾಜೇಂದ್ರ, ಜನವರಿ 3, 1977 ರಂದು ಭೋರಂಜ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಆರಂಭಿಸಿದರು. ಸದ್ಯ ಡಾ. ಕನ್ವರ್ ಅವರು ದಿನನಿತ್ಯ ಜೋಳಸಪ್ಪಾಡ್ ನಲ್ಲಿ ನೂರಾರು ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ದೇಶ

ಗಣರಾಜ್ಯೋತ್ಸವ.. ನಾರಾಯಣ ಗುರುಗಳಿಗೆ ಅಪಮಾನ.. ಎಸ್ ಡಿ ಪಿ ಐ ಆಗ್ರಹ

Published

on

By

ಮಂಗಳೂರು, ಜ ೧೭ (ಯುಎನ್ ಐ) ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ರಾಜ್ಯವಾರು ಸ್ಥಳೀಯ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಪ್ರತಿಬಿಂಬಿಸುವ ಸ್ತಬ್ಧ ಚಿತ್ರ ಪ್ರದರ್ಶಿಸಲು ಅವಕಾಶ ನೀಡುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಆದರೆ, ಈ ಬಾರಿ ಗಣರಾಜ್ಯೋತ್ಸವಕ್ಕೆ ಕೇರಳ ಸರಕಾರ ಕಳಿಸಿಕೊಟ್ಟ ಸಮಾಜ ಸುಧಾರಕ, ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕರಿಸಿರುವ ಮೂಲಕ ನಾರಾಯಣ ಗುರುಗಳಿಗೆ, ಅವರ ಅನುಯಾಯಿಗಳಿಗೆ ಘೋರ ಅಪಮಾನ ಮಾಡಿದೆ ಎಂದು ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಹೇಳಿದ್ದಾರೆ.

ಕೇರಳದ (ಅಂದಿನ ಟ್ರಾವಂಕೂರ್ ಸಂಸ್ಥಾನ) ಜನಸಂಖ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇದ್ದಂತಹ ಈಳವ ಸಮುದಾಯ ಮೇಲ್ಜಾತಿಯವರ ಶ್ರೇಣೀಕೃತ ವ್ಯವಸ್ಥೆಯ ಕರಾಳ ನಿಯಂತ್ರಣದಿಂದ ಅತ್ಯಂತ ಅಮಾನವೀಯ, ಅಸ್ಪೃಶ್ಯತೆಯಿಂದ ಬಂಧಿಸಲ್ಪಟ್ಟು ಅವಮಾನಕರವಾದ ಬದುಕು ಸಾಗಿಸುತ್ತಿದ್ದ ಸಂದರ್ಭದಲ್ಲಿ ಹದಿನೆಂಟನೆಯ ಶತಮಾನದ ಮಧ್ಯ ಭಾಗದಲ್ಲಿ ಅಂದಿನ ಟ್ರವಾಂಕೂರ್ ಸಂಸ್ಥಾನದ ಚೆಂಪಝಂತಿ ಎಂಬ ಗ್ರಾಮದಲ್ಲಿ ಜನ್ಮತಾಳಿದ ನಾರಾಯಣ ಗುರುಗಳು ತಮ್ಮ ಎಪ್ಪತ್ತೆರಡು ವರ್ಷಗಳ ಸುಧೀರ್ಘ ಜೀವನದಲ್ಲಿ ಮಾಡಿದ ಕ್ರಾಂತಿಕಾರಿ ,ಮಾನವತಾವಾದಿ ಹೋರಾಟಗಳು , ಅವರು ಕೈಗೊಂಡ ಸುಧಾರಣಾವಾದಿ ಆಂದೋಲನಗಳು ಈಳವ (ಬಿಲ್ಲವ) ಸಮುದಾಯವನ್ನು ಹಂತ ಹಂತವಾಗಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಯಿತು.

.
ಸಂವಿದಾನಾತ್ಮಕವಾಗಿ ಆಯ್ಕೆ ಯಾದ ರಾಜ್ಯ ಸರಕಾರವೊಂದು ತನ್ನ ನೆಲದ ಇತಿಹಾಸ ಪುರುಷನ ಚರಿತ್ರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಕಳಿಸಿ ಕೊಟ್ಟ ಸ್ತಬ್ಧ ಚಿತ್ರವನ್ನು ನಿರಾಕರಿಸಿರುವುದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ದೋರಣೆ ಪ್ರತಿಬಿಂಬಿಸುತ್ತಿದೆ . ಇದರ ವಿರುದ್ಧ ದ್ವನಿಯೆತ್ತಬೇಕಾದ ನಾರಾಯಣ ಗುರುಗಳ ಅನುಯಾಯಿಗಳು ಸೇರಿದಂತೆ ಜಾತ್ಯಾತೀತ ಪಕ್ಷಗಳ ಮೌನ ದೇಶದ ಸಂವಿದಾನಕ್ಕೆ ಅಪಾಯಕಾರಿ ಆಗಲಿದೆ ಎಂದು ಕಳವಳವ್ಯಕ್ತಪಡಿಸಿದೆ.

ದೇಶದ ಸುಂದರ ಚರಿತ್ರೆ ಹಾಗೂ ಗತ ವೈಭವದ ಇತಿಹಾಸವನ್ನು ಬದಲಾಯಿಸಲು ಬಿಜೆಪಿ ಸರಕಾರ ಹೊರಟರೆ ಎಸ್ ಡಿ ಪಿ ಐ ಪಕ್ಷವು ಅದನ್ನು ಜನಾಂದೋಲನದ ಮೂಲಕ ಎದುರಿಸಲು ಸದಾ ಸನ್ನದ್ದ ವಾಗಿದೆ ಎಂದು ಸರಕಾರ ಅರಿತು ಕೊಳ್ಳಬೇಕಾಗಿದೆ ಜನವರಿ ೨೬ ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕೇರಳದ ಗುರು ನಾರಾಯಣ ಸ್ವಾಮಿಗಳ ಸ್ತಬ್ಧ ಚಿತ್ರ ಅಳವಡಿಸಲು ಸರಕಾರ ಅವಕಾಶ ಮಾಡಿಕೊಟ್ಟು ದಾರ್ಶನಿಕರ ಚರಿತ್ರೆಯನ್ನು ಇಂದಿನ ತಲೆಮಾರಿಗೆ ಪರಿಚಯಿಸುವ ಕೆಲಸ ಮಾಡಿ ಕೊಡಬೇಕು ಇದಕ್ಕಾಗಿ ರಾಜ್ಯದ ಎಲ್ಲ ಸಂಸದರು ಪ್ರಯತ್ನಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Continue Reading

ದೇಶ

ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ಸಂಕೇತ: ರಾಹುಲ್ ಗಾಂಧಿ

Published

on

ನವದೆಹಲಿ: ಜನೆವರಿ 17 (ಯು.ಎನ್.ಐ.) ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ನಾಯಕ ಮತ್ತು ಸಂಕೇತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ವೇಮುಲಾ ಅವರ ಪುಣ್ಯತಿಥಿಯಂದು ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ರೋಹಿತ್ ವೇಮುಲಾ ಅವರು ದಲಿತರ ನ್ಯಾಯಕ್ಕಾಗಿ ಹಾಗೂ ಅವರ ಮೇಲಿನ ತಾರತಮ್ಯ ವಿರುದ್ಧ ದಿ ಎತ್ತಿದವರರು. ದಲಿತರ ಪರ ಮಾತನಾಡಿದ್ದಕ್ಕಾಗಿ ಹತ್ಯೆ ಮಾಡಲಾಗಿದೆ” ಎಂದು ಅವರು ಟ್ವಿಟರ್ ನಲ್ಲಿ ಹೇಳಿದ್ದಾರೆ.

“ವರ್ಷಗಳು ಕಳೆದರೂ, ರೋಹಿತ್ ವೇಮುಲ ಪ್ರತಿರೋಧದ ಸಂಕೇತವಾಗಿ ಮತ್ತು ಅವನ ಧೈರ್ಯಶಾಲಿ ತಾಯಿಯ ಭರವಸೆಯ ಸಂಕೇತವಾಗಿ ಉಳಿಯುತ್ತಾನೆ. ದಲಿತರ ನ್ಯಾಯಕ್ಕಾಗಿ ಕೊನೆಯವರೆಗೂ ಹೋರಾಡಿದ್ದಕ್ಕಾಗಿ, ರೋಹಿತ್ ನನ್ನ ನಾಯಕ, ಅನ್ಯಾಯಕ್ಕೊಳಗಾದ ನನ್ನ ಸಹೋದರ” ಎಂದು ಗಾಂಧಿ ಹೇಳಿದರು.

ಹೈದರಾಬಾದ್ ವಿಶ್ವವಿದ್ಯಾನಿಲಯದ 26 ವರ್ಷದ ದಲಿತ ವಿದ್ಯಾರ್ಥಿ ವೇಮುಲಾ ಅವರು ಕಿರುಕುಳದ ಆರೋಪದ ಮೇಲೆ ಜನವರಿ 17, 2016 ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಮರಣವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತೀಯತೆಯ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನವನ್ನು ಪ್ರಚೋದಿಸಿತು.

Continue Reading

ದೇಶ

ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ

Published

on

ಚಂಡೀಗಢ: ಜನೆವರಿ 17 (ಯು.ಎನ್.ಐ.) ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಗುರು ರವಿದಾಸ್ ಜಯಂತಿ ಆಚರಣೆಗೆ ಅನುಕೂಲ ಮಾಡಿಕೊಡುವಂತೆ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ ನಂತರ ಫೆಬ್ರವರಿ 14ರಂದು ನಿಗದಿಯಾಗಿದ್ದ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ “ಪಂಜಾಬ್‌ನ ಜನಸಂಖ್ಯೆಯ ಶೇಕಡಾ 32ರಷ್ಟು ಪರಿಶಿಷ್ಟ ಜಾತಿಗಳ ಸಮುದಾಯದ ಪ್ರತಿನಿಧಿಗಳು ತಮ್ಮನ್ನು ಭೇಟಿ ಮಾಡಿದ್ದರು. ಗುರು ರವಿದಾಸ್ ಅವರ ಜನ್ಮದಿನದ ಅಂಗವಾಗಿ ಫೆಬ್ರವರಿ 10ರಿಂದ 16ರವರೆಗೆ ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡುತ್ತೇವೆ. ಹೀಗಾಗಿ ತಮಗೆ ವೋಟ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮನವಿ ಮಾಡಿದ್ದರು. ಹೀಗಾಗಿ ಚುನಾವಣಾ ಆಯೋಗ ಪೂರ್ವ ನಿಗದಿ ಮಾಡಿದ್ದ ಫೆಬ್ರವರಿ 14ರ ಚುನಾವಣೆಯನ್ನು 6 ದಿನಗಳ ಕಾಲ ಮುಂದೂಡಬೇಕಂದು” ಸಿಎಂ ಚನ್ನಿ ಮನವಿ ಮಾಡಿದ್ದರು.
ಪಂಜಾಬ್ ರಾಜಕೀಯ ಪಕ್ಷಗಳ ಮನವಿಯ ಮೇರೆಗೆ ಇಂದು ಚುನಾವಣಾ ಆಯೋಗ ಸಭೆ ನಡೆಸಿತ್ತು. ಸಭೆ ಬಳಿಕ ಮಾಹಿತಿ ನೀಡಿದ ಚುನಾವಣಾ ಅಧಿಕಾರಿಗಳು, “ಪಂಜಾಬ್ ಸರ್ಕಾರ ಮತ್ತು ಇತರ ಸಂಘಟನೆಗಳು ಚುನಾವಣೆಯನ್ನು ಮುಂದೂಡುವಂತೆ ಕೋರಿದ್ದವು.” ಗುರು ರವಿದಾಸ್ ಜನ್ಮದಿನದ ಅಂಗವಾಗಿ ಹೆಚ್ಚಿನ ಭಕ್ತರು ವಾರಣಾಸಿಗೆ ಭೇಟಿ ನೀಡುತ್ತಾರೆ. ಫೆಬ್ರವರಿ 14ರಂದು ಮತದಾನದ ದಿನವನ್ನು ಇಟ್ಟುಕೊಳ್ಳುವುದರಿಂದ ಹೆಚ್ಚಿನ ಸಂಖ್ಯೆಯ ಮತದಾರರು ಮತದಾನದಿಂದ ವಂಚಿತರಾಗುತ್ತಾರೆ” ಎಂದು ಗಮನಕ್ಕೆ ತಂದಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿತು.
ರಾಜಕೀಯ ಪಕ್ಷಗಳು ಹಾಗೂ ಪಂಜಾಬ್ ಸರ್ಕಾರದ ಮನವಿ ಮೇರೆಗೆ ಚುನಾವಣೆ ದಿನಾಂಕವನ್ನು ಫೆಬ್ರವರಿ 14ರ ಬದಲಾಗಿ ಫೆಬ್ರವರಿ 20ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

Continue Reading
Advertisement
ರಾಜಕೀಯ5 mins ago

ಮೇಕೆದಾಟು ಪಾದಯಾತ್ರೆ; ಕಾಂಗ್ರೆಸಿಗೆ ವರವೋ ಶಾಪವೋ ?

ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್‌ ಅವರು 2023ರ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟು, ತಮ್ಮ ವೈಯುಕ್ತಿಕ ಕಾರ್ಯಸೂಚಿ  (ಮೇಕೆದಾಟು ಪಾದಯಾತ್ರೆ ಮೇಲ್ನೊಟಕ್ಕೆ ಎಐಸಿಸಿ ಅನುಮೊದಿತವಾಗಿ ಕಂಡ್ರು ಅದು ಕರ್ನಾಟಕ...

ದೇಶ18 mins ago

ಗಣರಾಜ್ಯೋತ್ಸವ.. ನಾರಾಯಣ ಗುರುಗಳಿಗೆ ಅಪಮಾನ.. ಎಸ್ ಡಿ ಪಿ ಐ ಆಗ್ರಹ

ಮಂಗಳೂರು, ಜ ೧೭ (ಯುಎನ್ ಐ) ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ರಾಜ್ಯವಾರು ಸ್ಥಳೀಯ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಪ್ರತಿಬಿಂಬಿಸುವ ಸ್ತಬ್ಧ ಚಿತ್ರ ಪ್ರದರ್ಶಿಸಲು ಅವಕಾಶ ನೀಡುವುದು...

ದೇಶ27 mins ago

ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ಸಂಕೇತ: ರಾಹುಲ್ ಗಾಂಧಿ

ನವದೆಹಲಿ: ಜನೆವರಿ 17 (ಯು.ಎನ್.ಐ.) ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ನಾಯಕ ಮತ್ತು ಸಂಕೇತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ವೇಮುಲಾ...

ಕರ್ನಾಟಕ54 mins ago

ಬೆಂಗಳೂರಲ್ಲಿ ಆತಂಕ ಹೆಚ್ಚಿಸಿದ ಒಮೈಕ್ರಾನ್!

ಬೆಂಗಳೂರು: ಜನೆವರಿ 17 (ಯು.ಎನ್.ಐ) ರಾಜಧಾನಿ ಬೆಂಗಳೂರಲ್ಲಿ ಒಂದೇ ದಿನ ಬರೋಬ್ಬರಿ 287 ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯ ಸರ್ಕಾರ ತೀವ್ರ ನಿಗಾದ ಮಧ್ಯೆಯೇ ಒಮೈಕ್ರಾನ್ ಪ್ರಕರಣಗಳು...

ದೇಶ1 hour ago

ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ

ಚಂಡೀಗಢ: ಜನೆವರಿ 17 (ಯು.ಎನ್.ಐ.) ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಗುರು ರವಿದಾಸ್ ಜಯಂತಿ ಆಚರಣೆಗೆ ಅನುಕೂಲ...

ದೇಶ1 hour ago

ದೇಶವನ್ನು ಕೊರೋನಾ ಮುಕ್ತಗೊಳಿಸಲು ಪಣ ತೊಡೋಣ; ಕೇಜ್ರಿವಾಲ್

ನವದೆಹಲಿ: ಜನೆವರಿ 17 (ಯು.ಎನ್.ಐ.) ಸಾಂಕ್ರಾಮಿಕ ರೋಗವಾದ ಕೋವಿಡ್ -೧೯ ಪರಿಸ್ಥಿತಿಯನ್ನು ಆಪಾದನೆ ಮಾಡುತ್ತಾ ಕುಳಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಇಡೀ ದೇಶದಿಂದ ತೊಡೆದುಹಾಕು ಪಣ ತೊಡಬೇಕು ಎಂದು...

ಸಿನೆಮಾ1 hour ago

ಹಿಂದಿಯಲ್ಲಿ ತೆರೆ ಕಾಣುತ್ತಿದೆ ಅಲ್ಲು ಅರ್ಜುನ್‌ ಅಭಿನಯದ ‘ಅಲಾ ವೈಕುಂಠಪುರಮುಲು’

ಹೈದರಾಬಾದ್: ಜನೆವರಿ 17 (ಯು.ಎನ್.ಐ.) ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ದಿ ರೈಸ್ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಮತ್ತೊಂದು ಸಂತೋಷದ ವಿಚಾರವೆಂದರೆ ಅಲ್ಲು ಅರ್ಜುನ್‌...

ದೇಶ2 hours ago

ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

ಖುಂಟಿ: ಜನೆವರಿ 17 (ಯು.ಎನ್.ಐ.) ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು...

ದೇಶ2 hours ago

ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಮೋದಿ ಸಂತಾಪ

ರಾಯಗಡ: ಜನೆವರಿ ೧೭ (ಯು.ಎನ್.ಐ.) ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ....

ಕರ್ನಾಟಕ2 hours ago

ಪಿಎಂಎಫ್ಎಂಇ ಯೋಜನೆಗೆ ಶೇ.15 ರಷ್ಟು ರಾಜ್ಯದಿಂದ ಹೆಚ್ಚುವರಿ ಸಹಾಯಧನ

ಬೆಂಗಳೂರು: ಜನೆವರಿ 17 (ಯು.ಎನ್.ಐ.)ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪಿಎಂಎಫ್ಎಂಇ ಯೋಜನೆಗೆ...

ಟ್ರೆಂಡಿಂಗ್

Share