Connect with us


      




ಸಿನೆಮಾ

ನಟ ಶಿಂಬುಗೆ ಡಾಕ್ಟರೇಟ್ ಪದವಿ ಪ್ರಧಾನ

UNI Kannada

Published

on

ಚನ್ನೈ : ಜನೆವರಿ 11 (ಯು.ಎನ್.ಐ.) ತಮಿಳಿನ ಸ್ಟಾರ್ ನಟ ಶಿಂಬು ಅವರಿಗೆ ಅಪರೂಪದ ಗೌರವವೊಂದು ಒಲಿದು ಬಂದಿದೆ. ಚಿತ್ರರಂಗಕ್ಕೆ ನಟ ಸಿಂಬು ನೀಡಿದ ಸೇವೆಗಾಗಿ ತಮಿಳುನಾಡಿನ ವೇಲ್ಸ್ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿದೆ. ಈ ವಿಷಯವನ್ನು ಸ್ವತಃ ಶಿಂಬು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ಗೌರವ ಡಾಕ್ಟರೇಟ್ ನೀಡಿದ್ದಕ್ಕಾಗಿ ವೇಲ್ಸ್ ವಿಶ್ವವಿದ್ಯಾನಿಲಯಕ್ಕೆ ಧನ್ಯವಾದ ತಿಳಿಸಿರುವ ಅವರು, ಈ ಗೌರವವನ್ನು ತಮಿಳು ಚಿತ್ರರಂಗ ಹಾಗೂ ಅವರ ಪೋಷಕರಿಗೆ ಅರ್ಪಿಸಿದ್ದಾರೆ. ಅವರ ಜೀವನದಲ್ಲಿ ಸಿನಿಮಾ ಇರಲು ತಂದೇ ತಾಯಿಯೇ ಕಾರಣ ಹಾಗಾಗಿ ಈ ಗೌರವವನ್ನು ಅವರಿಗೆ ಸಮರ್ಪಿಸುತ್ತಿದ್ದೇನೆ ಎಂದಿದ್ದಾರೆ. ತನ್ನನ್ನು ಇಲ್ಲಿಯವರೆಗೆ ಕರೆತಂದ ಅಭಿಮಾನಿಗಳಿಗೆ ಶಿಂಬು ಧನ್ಯವಾದ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಶಿಂಬು ಪೋಷಕರಾದ ಟಿ.ರಾಜೇಂದರ್ ಮತ್ತು ಉಷಾ ಕೂಡ ಭಾಗವಹಿಸಿದ್ದರು.

ನಿರ್ದೇಶಕ, ನಟ ಟಿ. ರಾಜೇಂದರ್ ಮಗನಾಗಿ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಶಿಂಬು, ನಾಯಕನಾಗಿಯೂ ಮಿಂಚುತ್ತಿದ್ದಾರೆ. ವಿಭಿನ್ನ ಪಾತ್ರಗಳನ್ನು ಆಯ್ದುಕೊಂಡು ವಿಶಿಷ್ಟ ನಟನಾಗಿಯೂ ಹೆಸರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಂಬು ತಮಿಳುನಾಡಿನಲ್ಲಿ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ.

Share