Connect with us


      




ಬೆಂಗಳೂರು

ಜುಲೈ ೧ ರಿಂದ ಕಬ್ಬನ್‌ ಪಾರ್ಕಿನಲ್ಲಿ ಶ್ವಾನ ಪ್ರವೇಶ ನಿಷೇಧ

Kumara Raitha

Published

on

ಬೆಂಗಳೂರು: jಜೂನ್‌ ೨೭ (ಯು.ಎನ್.‌ಐ.) ಸಾರ್ವಜನಿಕರಿಂದ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯು ಜುಲೈ ೧ ರಿಂದ ಕಬ್ಬನ್‌ ಪಾರ್ಕಿನ ಒಳಗೆ ಶ್ವಾನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲು ನಿರ್ಧರಿಸಿದೆ.

ಈಗಾಗಲೇ ಇಲಾಖೆಯು ಈ ಸಂಬಂಧ ಆದೇಶ ಹೊರಡಿಸಿದೆ. ವಾಯು ವಿಹಾರದ ಸಂದರ್ಭದಲ್ಲಿ ಹಲವರು ತಮ್ಮ ಸಾಕುನಾಯಿಗಳನ್ನು ಜೊತೆಗೆ ಕರೆದುಕೊಂಡು ಬರುತ್ತಾರೆ. ಇವರಲ್ಲಿ ಅನೇಕರು ಅವುಗಳ ಸರಪಳಿ ಬಿಚ್ಚಿ ಮುಕ್ತವಾಗಿ ಸಂಚರಿಸಲು ಬಿಡುವುದರಿಂದ ನಿರ್ಭೀತಿಯಿಂದ ವಾಕ್‌ ಮಾಡಲು ಅಡ್ಡಿಯಾಗುತ್ತಿದೆ ಎಂದು ದೂರಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಕುನಾಯಿಗಳು ಎಲ್ಲೆಂದರಲ್ಲಿ ಮಲ ವಿಸರ್ಜನೆ ಮಾಡುತ್ತವೆ. ಹಲವರು ಅವುಗಳನ್ನು ತ್ಯಾಜ್ಯ ಸಂಗ್ರಹಣೆ ಡಬ್ಬಗಳಿಗೆ ಹಾಕದೇ ಇರುವುದರಿಂದಲೂ ತೊಂದರೆಯಾಗುತ್ತಿದೆ ಎಂದು ಸಹ ದೂರಲಾಗಿದೆ. ಅಲ್ಲದೇ ಕೆಲವರು ತಮ್ಮ ಸಾಕುನಾಯಿಗಳನ್ನು ಹಿಂಬಾಲಿಸದೇ ಇರುವುದರಿಂದ ಅವುಗಳು ಅಪರಿಚಿತರನ್ನು ಕಚ್ಚಲು ಯತ್ನಿಸಿದ ಘಟನೆಗಳು ನಡೆದಿವೆ ಎನ್ನಲಾಗಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಕಬ್ಬನ್‌ ಪಾರ್ಕಿನ ಒಳಗೆ ನಾಯಿಗಳನ್ನು ಕರೆ ತರದಂತೆ ತೋಟಗಾರಿಕೆ ಇಲಾಖೆ ನಿರ್ಬಂಧ ವಿಧಿಸಲು ಮುಂದಾಗಿದೆ. ಈ ಕ್ರಮ ಶ್ವಾನಗಳನ್ನು ಜೊತೆಗೆ ಕರೆದುಕೊಂಡು ಬರುತ್ತಿದ್ದ ಹಲವರ ಸಿಟ್ಟಿಗೂ ಕಾರಣವಾಗಿದೆ. ಈ ಆದೇಶ ಸರಿಯಲ್ಲ ಎಂದು ಅವರು ಹೇಳುತ್ತಿದ್ದಾರೆ. ಜೊತೆಗೆ ತಮ್ಮದೇ ಆದ ಸಮರ್ಥನೆಗಳನ್ನು ನೀಡುತ್ತಿದ್ದಾರೆ. ಅಲ್ಲದೇ ಚೆಂಜ್‌ ಆರ್ಗ್‌ ತಾಣದಲ್ಲಿ ಆದೇಶದ ವಿರುದ್ಧ ಸಹಿ ಸಂಗ್ರಹಣೆಯನ್ನೂ ಮಾಡುತ್ತಿದ್ದಾರೆ.

Share